ಗೋಕಾಕ: ಪ್ರಸಕ್ತ ಮುಂಗಾರು ಹಂಗಾಮಿಗೆ ಫಸಲ್ ಬೀಮಾ ಯೋಜನೆ ಅನುಷ್ಠಾನ : ಎ.ಡಿ.ಸವದತ್ತಿ
ಪ್ರಸಕ್ತ ಮುಂಗಾರು ಹಂಗಾಮಿಗೆ ಫಸಲ್ ಬೀಮಾ ಯೋಜನೆ ಅನುಷ್ಠಾನ : ಎ.ಡಿ.ಸವದತ್ತಿ
ಗೋಕಾಕ ಜು 3 : 2018-19ನೇ ಸಾಲಿನ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ (ವಿಮಾ) ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು ತಾಲೂಕಿನ ಗ್ರಾಮ ಪಂಚಾಯತಿ ಮಟ್ಟಕ್ಕೆ ಹಾಗೂ ಉಳಿದ ಬೆಳೆಗಳನ್ನು ಹೋಬಳಿ ಮಟ್ಟದಲ್ಲಿ ಜಾರಿಗೊಳಿಸಲಾಗುತ್ತಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎ.ಡಿ.ಸವದತ್ತಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, 2018-19ರ ಮುಂಗಾರು ಹಂಗಾಮಿನಲ್ಲಿ ಮಾರ್ಪಡಿಸಿದ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯಡಿ ಅರಭಾಂವಿ ಹೋಬಳಿ ಮಟ್ಟದಲ್ಲಿ ಸೂರ್ಯಕಾಂತಿ(ನೀರಾವರಿ, ಮಳೆಯಾಶ್ರಿತ)ಸೋಯಾ ಅವರೆ (ನೀರಾವರಿ) ಸೋಯಾ ಅವರೆ (ಮಳೆಯಾಶ್ರಿತ) ಜೋಳ (ನೀರಾವರಿ, ಮಳೆಯಾಶ್ರಿತ) ನೆಲಗಡಲೆ(ಶೇಂಗಾ) (ನೀರಾವರಿ), ಗೋಕಾಕ ಹೋಬಳಿ ಮಟ್ಟದಲ್ಲಿ ಮುಸುಕಿನ ಜೋಳ (ಮಳೆಯಾಶ್ರಿತ) ಜೋಳ (ನೀರಾವರಿ) ಸೂರ್ಯಕಾಂತಿ (ನೀರಾವರಿ, ಮಳೆಯಾಶ್ರಿತ) ಜೋಳ (ಮಳೆಯಾಶ್ರಿತ) ಸಜ್ಜೆ (ನೀರಾವರಿ, ಮಳೆಯಾಶ್ರಿತ) ಹುರುಳಿ (ಮಳೆಯಾಶ್ರಿತ) ಹೆಸರು (ಮಳೆಯಾಶ್ರಿತ) ತೊಗರೆ (ಮಳೆಯಾಶ್ರಿತ) ಎಳ್ಳು (ಮಳೆಯಾಶ್ರಿತ) ಸೋಯಾ ಅವರೆ (ನೀರಾವರಿ) ಸೋಯಾ ಅವರೆ (ಮಳೆಯಾಶ್ರಿತ) ನೆಲಗಡಲೆ(ಶೇಂಗಾ) (ನೀರಾವರಿ, ಮಳೆಯಾಶ್ರಿತ) ಕೌಜಲಗಿ ಹೋಬಳಿಯಲ್ಲಿ ಮುಸುಕಿನ ಜೋಳ (ಮಳೆಯಾಶ್ರಿತ) ಸೂರ್ಯಕಾಂತಿ (ನೀರಾವರಿ, ಮಳೆಯಾಶ್ರಿತ) ಸೋಯಾ ಅವರೆ (ನೀರಾವರಿ,ಮಳೆಯಾಶ್ರಿತ) ಜೋಳ (ನೀರಾವರಿ, ಮಳೆಯಾಶ್ರಿತ) ಹುರುಳಿ (ಮಳೆಯಾಶ್ರಿತ) ಹೆಸರು (ಮಳೆಯಾಶ್ರಿತ)ಸಜ್ಜೆ (ಮಳೆಯಾಶ್ರಿತ) ತೊಗರೆ (ಮಳೆಯಾಶ್ರಿತ, ನೀರಾವರಿ) ನೆಲಗಡಲೆ(ಶೇಂಗಾ) (ನೀರಾವರಿ, ಮಳೆಯಾಶ್ರಿತ) ತಾಲೂಕಿನ 3 ಹೋಬಳಿಗಳಲ್ಲಿ ಬರುವ ಗ್ರಾಮ ಪಂಚಾಯತಿ ಮಟ್ಟದ ಬೆಳೆಗಳಲ್ಲಿ ಮುಸುಕಿನ ಜೋಳ (ನೀರಾವರಿ) ಬೆಳೆಗಳಾಗಿವೆ.
ಈ ಯೋಜನೆಯು ಪ್ರಕೃತಿ ವಿಕೋಪ ಕೀಟ ರೋಗ ಬಾಧೆಗಳಿಂದ ಅಧಿಸೂಚಿನ ಬೆಳೆ ವಿಫಲವಾದ ಸಂದರ್ಭದಲ್ಲಿ ರೈತರಿಗೆ ವಿಮಾ ರಕ್ಷಣೆ ಮತ್ತು ಹಣಕಾಸು ಬೆಂಬಲ, ಕೃಷಿ ವರಮಾನವು ಸ್ಥಿರವಾಗಿರುವಂತೆ ಹಾಗೂ ಕೃಷಿಯಲ್ಲಿ ಪ್ರಗತಿಪರ ಬೇಸಾಯ ಪದ್ದತಿಗಳನ್ನು ಉನ್ನತಿ ತಂತ್ರಜ್ಞಾನ ಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹ ನೀಡುವುದಕ್ಕಾಗಿ ಜಾರಿಗೆ ತರಲಾಗಿದೆ. 2018 ರ ಮುಂಗಾರು ಹಂಗಾಮಿನಲ್ಲಿ ಬೆಳೆಸಾಲ ಪಡೆಯುವ ಮತ್ತು ಸಾಲ ಪಡೆಯದ ರೈತರಿಗೆ ಬೆಳೆ ವಿಮಾ ಯೋಜನೆಯಲ್ಲಿ ಪಾಲ್ಗೊಳ್ಳಲು ಹೆಸರು (ಮಳೆಆಶ್ರಿತ) ಬೆಳೆಗೆ ಜುಲೈ 16 ಹಾಗೂ ಉಳಿದ ಎಲ್ಲಾ ಬೆಳೆಗಳಿಗೆ ಜುಲೈ 31 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ರೈತ ಬಾಂಧವರು ಸ್ಥಳೀಯ ಬ್ಯಾಂಕುಗಳು, ಸಹಕಾರಿ ಸಂಘಗಳು, ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬೇಕೆಂದು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.