RNI NO. KARKAN/2006/27779|Monday, August 10, 2026
You are here: Home » breaking news » ಬೆಳಗಾವಿ:ಕೈ ಟಿಕೆಟ್ ತಪ್ಪುವ ಭೀತಿ : ಪಕ್ಷೇತರವಾಗಿ ಸ್ವರ್ಧಿಸಲು ಛೋಪ್ರಾ ರೆಡಿ

ಬೆಳಗಾವಿ:ಕೈ ಟಿಕೆಟ್ ತಪ್ಪುವ ಭೀತಿ : ಪಕ್ಷೇತರವಾಗಿ ಸ್ವರ್ಧಿಸಲು ಛೋಪ್ರಾ ರೆಡಿ 

ಕೈ ಟಿಕೆಟ್ ತಪ್ಪುವ ಭೀತಿ : ಪಕ್ಷೇತರವಾಗಿ ಸ್ವರ್ಧಿಸಲು ಛೋಪ್ರಾ ರೆಡಿ

ಬೆಳಗಾವಿ ಎ 15: ಟಿಕೆಟ್ ಘೋಷಣೆ ಮೊದಲೇ ಜಿಲ್ಲೆಯ ಸವದತ್ತಿ ಕ್ಷೇತ್ರದ ಪ್ರಭಲ ಆಕಾಂಕ್ಷಿ ಆನಂದ ಛೋಪ್ರಾ ಅವರು ಕಾಂಗ್ರೇಸ ಪಕ್ಷದ ವಿರುದ್ಧ ಬಂಡಾಯವೆದ್ದು ಸವದತ್ತಿಯಿಂದ ಕೈ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ರೆಡಿಯಾಗಿದ್ದಾರೆ .
ಟಿಕೆಟ್ ಕೈತಪ್ಪುವ ಭೀತಿಯಿಂದ ಇಂದು ತಮ್ಮ ಬೆಂಬಲಿಗರ ಸಭೆ ನಡೆಸಿದ ಛೋಪ್ರಾ ಬೆಂಬಲಿಗರಿಂದ ಅಭಿಪ್ರಾಯ ಸಂಗ್ರಹಿಸಿದರು.  

ಪಕ್ಷೇತರರಾಗಿ ಸ್ಪರ್ಧಿಸುವಂತೆ ಬೆಂಬಲಿಗರು ಆಗ್ರಹಿಸಿದರು. ಇನ್ನೂ ಕೆಲ ಬೆಂಬಲಿಗರು ಯಾವುದೇ ಕಾರಣಕ್ಕೂ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿಯದಂತೆ ಕಣ್ಣೀರು ಹಾಕಿದ ಘಟನೆಯೂ ನಡೆಯಿತು. ಬೆಂಬಲಿಗರ ಒತ್ತಾಯದ ಮೇರಗೆ ಪಕ್ಷೇತರರಾಗಿ ಕಣಕ್ಕಿಳಿಯಲು ಛೋಪ್ರಾ ನಿರ್ಧರಿಸಿದ್ದಾರೆ. 

ಕಾಂಗ್ರೆಸ್ ಟಿಕೆಟ್‌‌ಗಾಗಿ ಇಲ್ಲಿ ವಿಶ್ವಾಸ ವೈದ್ಯ ಹಾಗೂ ಆನಂದ ಛೋಪ್ರಾ ನಡುವೆ ತೀವ್ರ ಪೈಪೋಟಿ ಇದ್ದು, ಟಿಕೆಟ್ ಕೈ ತಪ್ಪುವ ಭೀತಿಯಿಂದ ಆನಂದ ಛೋಪ್ರಾ ಬೆಂಬಲಿಗರ ಸಭೆ ನಡೆಸುವ ಜತೆಗೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧಾರ ಪ್ರಕಟಿಸಿದರು. ಬಿಜೆಪಿ ಪ್ರಾಬಲ್ಯ ಇರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌‌ನ ಬಂಡಾಯ ಮತ್ತೆ ಬಿಜೆಪಿಗೆ ವರದಾನವಾಗಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

Related posts: