ಬೆಳಗಾವಿ:ಏಕಾಂಗಿಯಾಗಿ ಹೋರಾಡಿ ಐತಿಹಾಸಿಕ ಗೆಲುವು ಸಾಧಿಸಿದ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ

ಏಕಾಂಗಿಯಾಗಿ ಹೋರಾಡಿ ಐತಿಹಾಸಿಕ ಗೆಲುವು ಸಾಧಿಸಿದ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ
ಗೋಕಾಕ ಮೇ 15: ಜಿಲ್ಲೆಯಲ್ಲಿ ಏಕಾಂಗಿಯಾಗಿ ಪ್ರಚಾರ ನಡೆಯಿಸಿ ತೀವ್ರ ಪೈಪೋಟಿ ಒಡ್ಡಿದ ಅರಬಾಂವಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಜಾರಕಿಹೊಳಿ ಅವರು ಒಟ್ಟು 91,369 ಮತಗಳು ಪಡೆದು , 47,083 ಮತಗಳ ಭಾರಿ ಅಂತರದಿಂದ ಗೆಲುವು ಸಾಧಿಸಿ ಇತಿಹಾಸ ಸೃಷ್ಷಿಸಿದ್ದಾರೆ
ಬಿಜೆಪಿಯ ಘಟಾನುಘಟ್ಟಿ ನಾಯಕರು ಜಿಲ್ಲೆಯಲ್ಲಿ ಬಂದು ಪ್ರಚಾರ ನಡೆಸಿದ್ದರು ಅರಬಾಂವಿ ಕ್ಷೇತ್ರದ ಕಡೆ ಯಾರು ತಲೆಹಾಕದೆ ಹಾಗೇ ತೆರಳಿದ್ದರು ಆದರು ತೆಲೆ ಕೆಡಿಸಿಕೋಳ್ಳದ ಬಾಲಚಂದ್ರ ಏಕಾಂಗಿಯಾಗಿ ಪ್ರಚಾರ ನಡೆಸಿ ತಮ್ಮ ಅಧಿಪತ್ಯವನ್ನು ಸ್ಥಾಪಿಸಿದ್ದಾರೆ
ಇನ್ನು ಅಧಿಕೃತವಾಗಿ ಘೋಷಣೆ ಬಾಕಿ ಇದೆ ಎಂದು ತಿಳಿದು ಬಂದಿದೆ