ಗೋಕಾಕ:ಶ್ರೀರಾಮ ಒಬ್ಬ ಆದರ್ಶ ಪುರುಷ : ರಮೇಶ ನಾಯ್ಕ
ಶ್ರೀರಾಮ ಒಬ್ಬ ಆದರ್ಶ ಪುರುಷ : ರಮೇಶ ನಾಯ್ಕ
ಗೋಕಾಕ (ಬೆಟಗೇರಿ) ಮಾ 25:: ಒಬ್ಬ ಆದರ್ಶ ವ್ಯಕ್ತಿ ಹೀಗೆ ಇರಬೇಕೆಂದು ಶ್ರೀರಾಮನು ವಿಶ್ವಕ್ಕೆ ತೋರಿಸಿಕೊಟ್ಟ ಮಹಾನ್ ಪುರುಷ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಶ್ರೀ ರಾಮಚಂದ್ರ ಅಭಿಮಾನಿ ಬಳಗದ ಸಂಚಾಲಕ ರಮೇಶ ನಾಯ್ಕ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಕ್ಷತ್ರೀಯ ಸಮಾಜ ಬಾಂದವರು, ಶ್ರೀರಾಮಚಂದ್ರನ ಅಭಿಮಾನಿ ಬಳಗದವರು ಆಯೋಜಿಸಿದ ರವಿವಾರ ಮಾ.25 ರಂದು ಶ್ರೀರಾಮ ನವಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಶ್ರೀರಾಮ ಒಬ್ಬ ಆದರ್ಶ ಪುರುಷನಾಗಿದ್ದಾನೆ. ಶ್ರೀರಾಮನ ತತ್ವಾದರ್ಶಗಳನ್ನು ಇಂದು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಸ್ಥಳೀಯ ಲಕ್ಷ್ಮಣ ಲಕ್ಷ್ಮಣ ಚಿನ್ನಯ್ಯನವರ ಅಧ್ಯಕ್ಷತೆ ವಹಿಸಿದ್ದರು. ವಿಜಯ ಹಿರೇಮಠ ಸಾನಿಧ್ಯ ವಹಿಸಿ ಶ್ರೀ ರಾಮ ಚಂದ್ರನ ಭಾವಚಿತ್ರಕ್ಕೆ ಮಹಾಪೂಜೆ, ಪುಷ್ಪಾರ್ಪನೆ ಕಾರ್ಯಕ್ರಮ ನೆರವೇರಿಸಿದರು. ಯುವ ಧುರೀಣ ವೀರನಾಯ್ಕ ನಾಯ್ಕರ ಮಾತನಾಡಿ, ಶ್ರೀರಾಮ ನವಮಿ ದಿನದ ಹಾಗೂ ಶ್ರೀರಾಮನ ಬದುಕಿನ ವ್ಯಕ್ತಿತ್ವದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು. ಮಾರುತಿ ಪೇದನ್ನವರ ಕಾರ್ಯಕ್ರಮಕ್ಕೆ ಮುಖ್ಯಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಗ್ರಾಮದ ಶ್ರೀ ರಾಮ ವೃತ್ತದಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ಮಹಾಪೂಜೆ, ಪುಷ್ಪಾರ್ಪನೆ ಕಾರ್ಯಕ್ರಮ ಸಡಗರದಿಂದ ನಡೆದ ಬಳಿಕ ಸಿಹಿ ವಿತರಿಸಲಾಯಿತು.
ಮಲ್ಲಿಕಾರ್ಜುನ ಮೆಟ್ಟಿನ್ನವರ, ಭಿಮಶೆಪ್ಪ ಪೆದನ್ನವರ, ಭೀಮನಾಯ್ಕ ನಾಯ್ಕರ, ಭೀಮಶಿ ಹಳಬರ, ಬಾಳಪ್ಪ ಮೆಟ್ಟಿನ್ನವರ, ಭರಮಣ್ಣ ಪೂಜೇರಿ, ಮಹಾದೇವ ಕಂಬಾರ, ಗ್ರಾಮದ ಕ್ಷತ್ರೀಯ ಸಮಾಜ ಬಾಂದವರು, ಶ್ರೀರಾಮಚಂದ್ರ ಅಭಿಮಾನಿ ಬಳಗದ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಭರಮಾನಂದ ಪೂಜೇರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಜು ಪೂಜೇರಿ ಕೊನೆಗೆ ವಂದಿಸಿದರು.