RNI NO. KARKAN/2006/27779|Tuesday, December 30, 2025
You are here: Home » breaking news » ಗೋಕಾಕ:ಸೇವಾ ಮನೋಭಾವದಿಂದ ಸಮಾಜಿಕ ಕಳಕಳಿಯ ಕಾರ್ಯಗಳನ್ನು ಇನರವ್ಹಿಲ್ ಸಂಸ್ಥೆ ಮಾಡುತ್ತಿದೆ : ಆರತಿ ನಾಡಗೌಡ

ಗೋಕಾಕ:ಸೇವಾ ಮನೋಭಾವದಿಂದ ಸಮಾಜಿಕ ಕಳಕಳಿಯ ಕಾರ್ಯಗಳನ್ನು ಇನರವ್ಹಿಲ್ ಸಂಸ್ಥೆ ಮಾಡುತ್ತಿದೆ : ಆರತಿ ನಾಡಗೌಡ 

ಸೇವಾ ಮನೋಭಾವದಿಂದ ಸಮಾಜಿಕ ಕಳಕಳಿಯ ಕಾರ್ಯಗಳನ್ನು ಇನರವ್ಹಿಲ್ ಸಂಸ್ಥೆ ಮಾಡುತ್ತಿದೆ : ಆರತಿ ನಾಡಗೌಡ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 6 :
ಸೇವಾ ಮನೋಭಾವದಿಂದ ಸಮಾಜಿಕ ಕಳಕಳಿಯ ಕಾರ್ಯಗಳನ್ನು ಇನರವ್ಹಿಲ್ ಸಂಸ್ಥೆ ಮಾಡುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷೆ ಆರತಿ ನಾಡಗೌಡ ಹೇಳಿದರು.

ಬುಧವಾರದಂದು ನಗರದ ಜ್ಞಾನ ಗಂಗೋತ್ರಿ ಶಾಲೆಯ ವಿದ್ಯಾರ್ಥಿನಿಯರಿಗಾಗಿ ಇನರವ್ಹಿಲ್ ಸಂಸ್ಥೆಯಿಂದ ಹಮ್ಮಿಕೊಂಡ ಆರೋಗ್ಯ ಹಾಗೂ ಸ್ವಚ್ಛತಾ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಪ್ರಗತಿ ಹಾಗೂ ಆರೋಗ್ಯ ರಕ್ಷಣೆಗಾಗಿ ಸಂಸ್ಥೆಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದು ಇದರ ಸದುಪಯೋಗದಿಂದ ಸದೃಢ ಆರೋಗ್ಯವಂತರಾಗಿ ಸಾಧಕರಾಗಿರೆಂದು ಹಾರೈಸಿದರು.
ಡಾ.ದೀಪಾ ತುಬಾಕಿ ಬಾಲಕಿಯರಿಗೆ ಆರೋಗ್ಯ ರಕ್ಷಣೆ ಕುರಿತು ಮಾಹಿತಿ ನೀಡಿದರು. ಕೆಎಲ್ಇ ಶಾಲೆಯ ಆಡಳಿತ ಅಧಿಕಾರಿ ಅನುಪಾ ಕೌಶಿಕ್ ಅವರು ಮನೆಯಲ್ಲಿಯ ತ್ಯಾಜ್ಯಗಳ ಸದುಪಯೋಗ ಪಡಿಸಿಕೊಳ್ಳುವ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಸೀತಾ ಬೆಳಗಾವಿ, ವಂದನಾ ವರದಾಯಿ , ಗಿರೀಜಾ ಮುನ್ನೋಳಿಮಠ, ಅನುಸುಯಾ ದುಳಾಯಿ, ಅನುಪಮಾ ಗಜ್ಜಿ, ವಿದ್ಯಾ ಗುಲ್, ಶಿಲ್ಪಾ ಚುನಮರಿ, ಶ್ರೆಯಾ ಹತಪಾಕಿ, ಆರೋಗ್ಯ ಇಲಾಖೆಯ ಮಲ್ಲವ್ವ ನಾಯಿಕ, ಆರ್.ಜಿ.ಬಸ್ಸಾಪೂರ, ಮುಖ್ಯೋಪಾಯನಿಯಿ ರೇಖಾ ಬಡಿಗೇರ , ಶಿಕ್ಷಕಿಯರಾದ ಸುರೇಖಾ ಸಿದ್ದಾಪುರ, ಎ.ಜಿ.ಮಾರಶೀಳಿನ ಸೇರಿದಂತೆ ಅನೇಕರು ಇದ್ದರು.

Related posts: