ಗೋಕಾಕ:4ಜಿ, 5ಜಿ ಇಲ್ಲದೆ ಬದುಕಬಹುದು,ಗಂಜಿ ಇಲ್ಲದೆ ಯಾರು ಬದುಕಲು ಸಾಧ್ಯವಿಲ್ಲ : ರೈತರ ಪ್ರತಿಭಟನೆಯಲ್ಲಿ ಡಾ.ಅಮರಸಿದ್ದೇಶ್ವರ ಶ್ರೀ.ಅಳಲು

4ಜಿ, 5ಜಿ ಇಲ್ಲದೆ ಬದುಕಬಹುದು,ಗಂಜಿ ಇಲ್ಲದೆ ಯಾರು ಬದುಕಲು ಸಾಧ್ಯವಿಲ್ಲ : ರೈತರ ಪ್ರತಿಭಟನೆಯಲ್ಲಿ ಡಾ.ಅಮರಸಿದ್ದೇಶ್ವರ ಶ್ರೀ.ಅಳಲು
ಗೋಕಾಕ ಅ 31 : 4ಜಿ, 5ಜಿ ಇಲ್ಲದೆ ನಾವು ಬದುಕಬಹುದು ಆದರೆ ಗಂಜಿ ಇಲ್ಲದೆ ಯಾರು ಬದುಕಲು ಸಾಧ್ಯವಿಲ್ಲ ಎಂದು ಅಂಕಲಗಿ ಅಡಿವಿಸಿದ್ದೇಶ್ವರ ಮಠದ ಡಾ.ಅಮರಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.
ಶನಿವಾರದಂದು ಇಲ್ಲಿನ ಬಸವೇಶ್ವರ ವೃತ್ತದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕರೆ ನೀಡಿದ್ದ ಕರ್ನಾಟಕ ಬಂದನ್ನು ಬೆಂಬಲಸಿ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜಕಾರಣಿಗಳು ರೈತರ ತಾಳ್ಮೇಯನ್ನು ಪರೀಕ್ಷಿಸದೆ ಆದಷ್ಟು ಬೇಗ ಬೆಂಬಲ ಬೆಲೆಯನ್ನು ಕೋಡಬೇಕು. ಎಲ್ಲಾ ರಾಜಕಾರಣಿಗಳು ಕುಳಿತು ನಿರ್ಧಾರ ಮಾಡಿ ರೈತರಿಗೆ ಸೂಕ್ತ ನ್ಯಾಯ ದೋರಕಿಸಿಬೇಕು. ರೈತರ ಈ ಹೋರಾಟ ಈಗ ಚಿಕ್ಕ ಮಕ್ಕಳಿಗೆ ತಿಳಿಯುತ್ತಿದೆ ಆದರೆ ಸರಕಾರಕ್ಕೆ ತಿಳಯದಾಗಿದೆ..ಇದು ನಮ್ಮ ದೇಶದ ದುರ್ಧೈವ ಎಂದ ಅವರು ಪ್ರತಿ ಟನ್ ಕಬ್ಬಿಗೆ ರೂ 5500 ನೀಡಲೇಬೇಕು. ರೈತರ ಹೋರಾಟಕ್ಕೆ ಆದಷ್ಟು ಬೇಗ ಜಯ ಸಿಗಲಿ ಎಂದು ಹಾರೈಸಿದರು.
ರೈತ ಮುಖಂಡ ಗಣಪತಿ ಈಳಿಗೇರ ಮಾತನಾಡಿ ರಾಜಕಾರಣಿಗಳು ರೈತರ ಸಂಘಟನೆ ಒಡೆಯಲು ಪ್ರಯತ್ನಸುತ್ತಿವೆ. ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರಗಳು ರೈತರ ಜೊತೆಗೆ ಚಲ್ಲಾಟವಾಡುತ್ತಿವೆ. ರಾಜ್ಯ ಸರಕಾರದ ಭೋಕ್ಕಸ ಖಾಲಿಯಾಗಿದೆ ಎಂದು ಹೇಳುತ್ತಿರುವ ಮುಖ್ಯಮಂತ್ರಿಗಳು ಕೇಂದ್ರ ಸರಕಾರದ ಜೊತೆಗೆ ಹೋರಾಡಲಿ . ತಮಿಳುನಾಡು, ಗುಜರಾತ್, ಮಹಾರಾಷ್ಟ್ರ ,ಉತ್ತರ ಪ್ರದೇಶದಲ್ಲಿ ರೈತರ ಕಬ್ಬಿಗೆ ಬೆಂಬಲ ಬೆಲೆ ನೀಡುಲು ಸಾಧ್ಯವಿದೆ ಆದರೆ ಕರ್ನಾಟಕದಲ್ಲಿ ಏಕೆ ಸಾಧ್ಯವಿಲ್ಲ ಎಂದ ಅವರು ಕಬ್ಬಿನ ಬೆಲೆ ನಿರ್ಧಾರ ಮಾಡಲು ಮಾತ್ರ ರೈತರ ಜೊತೆ ನಾಟಕ ಮಾಡುವ ಸರಕಾರಗಳು ಬೇರೆ ಬೆಲೆಗಳನ್ನು ನಿರ್ಧಾರ ಮಾಡಲು ಯಾರನ್ನು ಕೇಳದೆ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುತ್ತಾರೆ. ಬೆಳಗಾವಿ ಉಸ್ತುವಾರಿ ಮಂತ್ರಿ ಮತ್ತು ಸಹಕಾರ ಮಂತ್ರಿ ಕೂಡಿಕೊಂಡು ಮುಖ್ಯಮಂತ್ರಿ ಮನವರಿಕೆ ಮಾಡಿ ಕಬ್ಬಿಗೆ ಬೆಂಬಲ ಬೆಲೆ ಘೋಷಿಸಬೇಕು. ಇಲ್ಲದಿದ್ದರೆ 2028 ಎಲ್ಲರನ್ನೂ ಮನೆಯಲ್ಲಿ ಕುಳಿಸುವ ಕಾರ್ಯ ರೈತರು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು .
ವಕೀಲರ ಸಂಘದ ಅಧ್ಯಕ್ಷ ಸುಭಾಷ ಬೀರಾದರ ಪಾಟೀಲ್ ಮಾತನಾಡಿ ರೈತರು ಬಿಸಿಲು ಮಳೆ ಲೆಕ್ಕಿಸದೆ ಹೋಲದಲ್ಲಿ ಕಾರ್ಯ ಮಾಡುತ್ತಾರೆ. ಆದಷ್ಟು ಬೇಗ ಕೇಂದ್ರ ಸರಕಾರ ಎಂ.ಎಸ್.ಪಿ ಬೆಲೆ ಹೆಚ್ಚಳ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜಕಾರಣಿಗಳಿಗೆ ವಿಧಾನಸಭೆ ಪ್ರವೇಶಿಸಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ವಕೀಲರ ಸಂಘದ ಮಾಜಿ ಅಧ್ಯಕ್ಷ ಬಸವರಾಜ ಕೋಟಗಿ ಮಾತನಾಡಿ ರಾಜ್ಯದ ಕಬ್ಬು ಬೆಳೆಗಾರರಿಗೆ ವೈಜ್ಞಾನಿಕ ಬೆಲೆ ಸಿಗಲಿ ಎಂದು ಕಳೆದ ಎರಡು ತಿಂಗಳಿನಿಂದ ಹೋರಾಟ ನಡೆಯುತ್ತಿದೆ. ರೈತ ಬೆಳೆದತಂಹ ಬೆಳೆಗೆ ಸರಿಯಾದ ಬೆಂಬಲ ಬೆಲೆ ನೀಡಬೇಕು.ಸರಕಾರಗಳು ಕಾರಖಾನೆಯವರಿಗೆ ಒಂದು ನ್ಯಾಯ, ಬೆಳಗಾರರಿಗೆ ಒಂದು ನ್ಯಾಯ ಮಾಡುತ್ತಿವೆ. ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದವರು ರೈತರಿಗೆ ಮೋಸ ಮಾಡುತ್ತಿದ್ದಾರೆ. ರೈತರ ಉಳಿಮೆ, ಬೀಜ ಸೇರಿದಂತೆ ಇನ್ನುಳಿದ ಖರ್ಚು ಆದರಿಸಿ ಶೇಕಡಾ 10% ಪ್ರತಿಷತ ಲಾಭ ಕೊಡಲಿ, ರೈತ ದೇಶದ ಬೆನ್ನೆಲುಬು ಅಂತ ಹೇಳಿ ರೈತರ ಬೆನ್ನು ಮುರಿಯುವ ಕೆಲಸ ಎರಡು ಸರಕಾರಗಳು ಮಾಡುತ್ತಿವೆ. ರೈತರ ಹೋರಾಟಕ್ಕೆ ಸದಾ ವಕೀಲರ ಸಂಘ ಬೆಂಬಲ ನೀಡುತ್ತದೆ ಎಂದು ಹೇಳಿದರು.
ಸ್ವಯಂ ಪ್ರೇರಿತ ಗೋಕಾಕ ಬಂದ್ : ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ಗೋಕಾಕ ಸಾರ್ವಜನಿಕರು, ವ್ಯಾಪಾರಸ್ಥರು ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಸ್ವಯಂ ಪ್ರೇರಿತ ಬಂದ್ ಮಾಡಿ ರೈತರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಿದರು. ಅಂಗಡಿ ಮುಗ್ಗಟ್ಟುಗಳು ಬಂದ್ ಇದ್ದ ಕಾರಣ ರಸ್ತೆಗಳು ಬಿಕ್ಕೋ ಅನ್ನುತ್ತಿದ್ದವು. ಬಸ್ ಸಂಚಾರ ಬಂದ ಇದ್ದ ಕಾರಣ ಬೇರೆ ಊರುಗಳಿಗೆ ಹೋಗುವ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ರೈತರ ಹೋರಾಟಕ್ಕೆ ಇಲ್ಲಿನ ವಕೀಲರ ಸಂಘದವರು ಬೆಂಬಲ ಸೂಚಿಸಿ ನ್ಯಾಯಾಲದ ಕಲಾಪಗಳನ್ನು ಬಹಿಷ್ಕರಿಸಿ ಹೋರಾಟದಲ್ಲಿ ಪಾಲ್ಗೊಂಡಿದ್ದರು. ನಗರದ ಹೋರವಲಯ ನಾಕಾ ನಂ.1 ರಲ್ಲಿ ಸೇರಿದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ನಗರದ ಬಸವೇಶ್ವರ ವೃತ್ತದಲ್ಲಿ ಜಮಾವಣೆ ಗೊಂಡು ರಾಜ್ಯ ಮತ್ತು ಕೇಂದ್ರ ಸರಕಾರದ ವಿರುದ್ಧ ತಮ್ಮ ಆಕ್ರೋಶ ವ್ತಕ್ತಪಡಿಸಿ, ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮಲತಾಯಿ ಧೋರಣೆಯನ್ನು ಖಂಡಿಸಿದರು.
ಈ ಸಂದರ್ಭದಲ್ಲಿ ಹಿರಿಯ ರೈತ ರಾಮಪ್ಪ ಕಲ್ಲೋಳಿ , ನ್ಯಾಯವಾದಿಗಳಾದ ಸಿ.ಡಿ.ಹುಕ್ಕೇರಿ, ಬಿ.ಬಿ.ಬೀರನಗಡ್ಡಿ, ಜಿ.ಎಸ್. ಸಿದ್ದಾಪೂರಮಠ, ವಿಠಲ ಮೆಳವಂಕಿ,ಶಂಕರ ಗೋರೋಶಿ, ಬಿ.ಎಚ್.ಮುಲ್ಲಾ, ಆರ್.ಎಸ್.ಬೀರನ್ನವರ, ಎಂ.ಎಚ್.ಹತ್ತಿಕಟ್ಟಗಿ, ಎಂ.ಬಿ.ಮಾಸ್ತಿಹೋಳಿ, ಆರ್.ಎಸ್.ನಿಡಸೋಸಿ, ಮುಖಂಡರುಗಳಾದ ಚಂದ್ರಶೇಖರ್ ಕೊಣ್ಣೂರ, ಪ್ರಕಾಶ ಬಾಗೋಜಿ, ಮಹಾದೇವ ಗೂಡೇರ ಸೇರಿದಂತೆ ನೂರಾರು ರೈತರು ಭಾಗವಹಿಸಿದರು.


