RNI NO. KARKAN/2006/27779|Friday, August 14, 2026
You are here: Home » breaking news » ಗೋಕಾಕ:ವಿಶ್ವಗುರು ಬಸವಣ್ಣನವರ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ : ಬಸವಪ್ರಭು ಶ್ರೀ

ಗೋಕಾಕ:ವಿಶ್ವಗುರು ಬಸವಣ್ಣನವರ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ : ಬಸವಪ್ರಭು ಶ್ರೀ 

ವಿಶ್ವಗುರು ಬಸವಣ್ಣನವರ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ : ಬಸವಪ್ರಭು ಶ್ರೀ
ಗೋಕಾಕ ಆ 14 : ಮಹಾನ ಮಾನವತಾವಾದಿ, ಸಮಾನತೆಯ ಹರಿಕಾರ, ವಿಶ್ವಗುರು ಬಸವಣ್ಣನವರ ಜೀವನ ಚರಿತ್ರೆಯನ್ನು ಆಲಿಸಿ, ಅವರ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಇಲ್ಲಿನ ಶೂನ್ಯ ಸಂಪಾದನ ಮಠದ ಬಸವಪ್ರಭು ಸ್ವಾಮಿಗಳು ಹೇಳಿದರು.

ಗುರುವಾರದಂದು ಇಲ್ಲಿನ ವಿವೇಕಾನಂದ ನಗರದ ಶ್ರೀ ಶಿವಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಶಿವಲಿಂಗೇಶ್ವರ ವಿಕಾಸ ಸಮಿತಿಯವರು ಶ್ರಾವಣ ಮಾಸದ ನಿಮಿತ್ತ ಒಂದು ತಿಂಗಳು ಪ್ರತಿದಿನ ಸಂಜೆ 7 ರಿಂದ 8 ರವರೆಗೆ ಹಮ್ಮಿಕೊಂಡ ಬಸವಣ್ಣನವರ ಜೀವನ ದರ್ಶನ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶ್ರಾವಣ ಮಾಸದಲ್ಲಿ ಮಹತ್ಮರ ವಾಣಿಗಳನ್ನು ಆಲಿಸಬೇಕು. ಗುರುಗಳ ಮಾರ್ಗದರ್ಶನದಲ್ಲಿ ಅಂತರಂಗ ಶುದ್ಧಿ ಮಾಡಿಕೊಳ್ಳಿರಿ, 12ನೇ ಶತಮಾನದಲ್ಲಿ ಜಗತ್ತಿನ ಪ್ರಥಮ ಸಂಸತ್ತಾದ ಅನುಭವ ಮಂಟಪವನ್ನು ಸ್ಥಾಪಿಸಿ, ಸರಳ ವಚನಗಳ ಮೂಲಕ ಧರ್ಮ ಜಾಗೃತಿಯನ್ನು ಮೂಡಿಸಿದ್ದರು ಅವರು ನೀಡಿದ ಇಷ್ಟಲಿಂಗವನ್ನು ಪೂಜಿಸಿ ಜೀವನವನ್ನು ಪಾವನ ಮಾಡಿಕೊಳ್ಳುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಭೀಮಪ್ಪ ಗೋಲಭಾವಿ, ಅಶೋಕ ಗೋಣಿ, ಜಟ್ಟೆಪ್ಪ ಬೋಸಗ, ಅಮರಗುಂಡಪ್ಪ ಭೀಜ್ಜಳ, ಪ್ರವಚನಕಾರ ರಾಮಪ್ಪ ಮಿರ್ಜಿ, ಕೆ.ಎ.ಕೋಲ್ಲಾಪೂರೆ, ಡಾ.ನವೀನ್ ಗೋಲಬಾವಿ, ಕೆ.ಟಿ.ಮಗದುಮ್ಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: