RNI NO. KARKAN/2006/27779|Saturday, May 2, 2026
You are here: Home » breaking news » ಗೋಕಾಕ:ಶ್ರೀಮತಿ ಸುಶೀಲಾ ಅವರು ತ್ಯಾಗಿ ಮತ್ತು ಧೀಮಂತ ರಾಜಮಾತೆಯಾಗಿದ್ದರು : ಪ್ರಕಾಶ ಕೋಟಿನತೋಟ

ಗೋಕಾಕ:ಶ್ರೀಮತಿ ಸುಶೀಲಾ ಅವರು ತ್ಯಾಗಿ ಮತ್ತು ಧೀಮಂತ ರಾಜಮಾತೆಯಾಗಿದ್ದರು : ಪ್ರಕಾಶ ಕೋಟಿನತೋಟ 

ಶ್ರೀಮತಿ ಸುಶೀಲಾ ಅವರು ತ್ಯಾಗಿ ಮತ್ತು ಧೀಮಂತ ರಾಜಮಾತೆಯಾಗಿದ್ದರು : ಪ್ರಕಾಶ ಕೋಟಿನತೋಟ

ಗೋಕಾಕ ಮೇ 2 : ಬಡ ಮಕ್ಕಳು ಹಾಗೂ ದೀನದಲಿತರಿಗೆ ಮತ್ತು ಪ್ರಜಾ ರಕ್ಷಕರಾದ ಅಂಬರೀಷವರ್ಮ ಅವರ ಧರ್ಮಪತ್ನಿ ಶ್ರೀಮತಿ ಸುಶೀಲಾ ಅವರು ತ್ಯಾಗಿ ಮತ್ತು ಧೀಮಂತ ರಾಜಮಾತೆಯಾಗಿದ್ದರು ಎಂದು ಕೌಜಲಗಿಯ ಹಿರಿಯ ಸಾಹಿತಿ ಪ್ರಕಾಶ ಕೋಟಿನತೋಟ ಹೇಳಿದರು.
ಗೋಕಾವಿ ಗೆಳೆಯರ ಬಳಗ ನಗರದ ಹೊರವಲಯದ ಯೋಗಿಕೊಳ್ಳ ರಸ್ತೆಯ ದೋಂಡಿಬಾ ಜಾಧವ ತೋಟದಲ್ಲಿ ಹಮ್ಮಿಕೊಡಿದ್ದ ಜಿಲ್ಲೆಯ ಗೋಕಾಕ ತಾಲೂಕಿನ ಕೌಜಲಗಿಯ ದೇಸಾಯಿ ಸಂಸ್ಥಾನದ ಕೊನೆಯ ಕೊಂಡಿ ರಾಜಮಾತೆ ಸುಶೀಲಾವರ್ಮ ಅಂಬರೀಷವರ್ಮ ದೇಸಾಯಿ (95) ಅವರ ಶೃದ್ಧಾಜಲಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮೂಲ ಪುರುಷ ಭೀಮಪ್ಪಾ ಗಿ.ದೇಸಾಯಿ ಅವರ ಹಿರಿಯಸೊಸೆಯಾಗಿದ್ದರು. ದ್ಯೆವಪುರುಷ ಅಂಬರೀಷವರ್ಮ ಭೀ ದೇಸಾಯಿ ಅವರ ಧರ್ಮಪತ್ನಿ.ಆದರ್ಶ ದಂಪತಿಯಾದ ಇವರು ಬೆಂಗಳೂರಿನ ಕೋರಮಂಗಲ ಹತ್ತಿರ ವಿಶ್ವಮೈತ್ರಿ ಸಂಸ್ಥೆ ಮೂಲಕ ಅನೇಕ ಸಮಾಜ ಮತ್ತು ಆದ್ಯಾತ್ಮಪರ ಕಾರ್ಯ ನಡೆಸಿಕೊಂಡು ಬಂದಿದ್ದರು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಡಾ.ಲಕ್ಷ್ಮಣ ಚೌರಿ ವಹಿಸಿದ್ದರು.

ಈ ಸಂದರ್ಭದಲ್ಲಿ ಹಿರಿಯ ಬಯಲಾಟ ಕಲಾವಿದ ಸಾಹಿತಿ ಈಶ್ವರಚಂದ್ರ ಬೆಟಗೇರಿ,ಬಸವಜ್ಯೋತಿ ಐಟಿಐ ಕಾಲೇಜಿನ ಚೇರಮನ್ ಅಶೋಕ ಲಗಮಪ್ಪಗೋಳ,ಸಿರಿಗನ್ನಡ ಮಹಿಳಾ ವೇದಿಕೆ ರಾಜ್ಯಾಧ್ಯಕ್ಷೆ ರಜನಿ ಜೀರಗ್ಯಾಳ, ಸಾಹಿತಿ ಸಾದಿಕ ಹಲ್ಯಾಳ,ಭಾರತಿ ಬಾವಲತ್ತಿ, ಪ್ರಾ.ಜಯಾನಂದ ಮಾದರ, ಚೇತನ ಸುಣಗಾರ, ಯೋಗ ಶಿಕ್ಷಕ ಆನಂದ ಸೋರಗಾವಿ ಉಪಸ್ಥಿತರಿದ್ದರು .

Related posts: