RNI NO. KARKAN/2006/27779|Wednesday, June 24, 2026
You are here: Home » breaking news » ಗೋಕಾಕ:ಬಿಜೆಪಿ ಪರಿವರ್ತನಾ ಯಾತ್ರೆಗೆ ಕಪ್ಪು ಬಾವುಟ ಪ್ರರ್ದಶನ : ಸಂಗನಕೇರಿಯಲ್ಲಿ ಯಡಿಯೂರಪ್ಪ ಸ್ಥಳಕ್ಕೆ ಬರುವಂತೆ ರೈತರ ಪಟ್ಟು

ಗೋಕಾಕ:ಬಿಜೆಪಿ ಪರಿವರ್ತನಾ ಯಾತ್ರೆಗೆ ಕಪ್ಪು ಬಾವುಟ ಪ್ರರ್ದಶನ : ಸಂಗನಕೇರಿಯಲ್ಲಿ ಯಡಿಯೂರಪ್ಪ ಸ್ಥಳಕ್ಕೆ ಬರುವಂತೆ ರೈತರ ಪಟ್ಟು 

ಬಿಜೆಪಿ ಪರಿವರ್ತನಾ ಯಾತ್ರೆಗೆ ಕಪ್ಪು ಬಾವುಟ ಪ್ರರ್ದಶನ : ಸಂಗನಕೇರಿಯಲ್ಲಿ ಯಡಿಯೂರಪ್ಪ ಸ್ಥಳಕ್ಕೆ ಬರುವಂತೆ ರೈತರ ಪಟ್ಟು
ಗೋಕಾಕ ನ 18: ರಾಜ್ಯದ್ಯಂತ ಸಂಚರಿಸುತ್ತಿರುವ ಬಿಜೆಪಿಯ ಪರಿವರ್ತನಾ ಯಾತ್ರೆಯು ಇಂದು ತಾಲೂಕಿಗೆ ಪ್ರವೇಶಿಸುತ್ತಿದಂತೆ ರೈತರು ಯಾತ್ರೆಗೆ ಕಪ್ಪು ಬಾವುಟ ಪ್ರರ್ದಶನ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಸಂಗನಕೇರಿ ಗ್ರಾಮದಲ್ಲಿ ಸೇರಿದ ನೂರಾರು ರೈತರು ಕಪ್ಪು ಬಾವುಟ ಪ್ರರ್ದಶಿಸಿ ಬಿಜೆಪಿ ರಾಜ್ಯದ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಆಲಿಸುವಂತೆ ರೈತರು ಪಟ್ಟು ಹಿಡಿದು ಯಾತ್ರೆಗೆ ಅಡ್ಡಿಪಡೆಸಿದ್ದಾರೆಂದು ತಿಳಿದು ಬಂದಿದೆ

ರೈತರ ಸಂಪೂರ್ಣ ಸಾಲ ಮನ್ನಾಮಾಡಿ ಕೃಷಿ ವೆಚ್ಚದ ಜೊತೆಗೆ ಶೇ 50% ಲಾಭಾಂಶ ಕೊಡುತ್ತೇವೆಂದು ಸುಳ್ಳು ಭರವಸೆ ನೀಡಿ ಕಳಸಾ ಬಂಡೂರಿ ಮಂಜೂರು ಮಾಡಿಯೇ ಉತ್ತರ ಕರ್ನಾಟಕ್ಕೆ ಬರುತ್ತೇನೆಂದು ಯಡಿಯೂರಪ್ಪ ನವರು ಯಾವುದೇ ಭರವಸೆ ಈಡೆರಿಸಿಲ್ಲಾ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ

ಯಡಿಯೂರಪ್ಪ ಅವರು ಪ್ರತಿಭಟನಾಕಾರರನ್ನು ಬೇಟ್ಟಿಯಾಗದೆ ಅವರ ಕಣ್ಣತಪ್ಪಿಸಿ ಮೂಡಲಗಿಯತ್ತ ಪ್ರಯಾಣ ಬೆಳೆಸಿದ್ದಾರೆ

Related posts: