RNI NO. KARKAN/2006/27779|Tuesday, April 14, 2026
You are here: Home » breaking news » ಗೋಕಾಕ:ಪ್ರತಿ ಮನೆಯಲ್ಲಿ, ಪ್ರತಿ ಮನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳು ಮನೆ ಮಾಡಬೇಕಾಗಿದೆ : ಪರಶುರಾಮ ಗಸ್ತೆ

ಗೋಕಾಕ:ಪ್ರತಿ ಮನೆಯಲ್ಲಿ, ಪ್ರತಿ ಮನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳು ಮನೆ ಮಾಡಬೇಕಾಗಿದೆ : ಪರಶುರಾಮ ಗಸ್ತೆ 

ಪ್ರತಿ ಮನೆಯಲ್ಲಿ, ಪ್ರತಿ ಮನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳು ಮನೆ ಮಾಡಬೇಕಾಗಿದೆ : ಪರಶುರಾಮ ಗಸ್ತೆ
ಗೋಕಾಕ ಎ 14 : ಪ್ರತಿ ಮನೆಯಲ್ಲಿ, ಪ್ರತಿ ಮನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳು ಮನೆ ಮಾಡಬೇಕಾಗಿದೆ ಎಂದು ತಾಪಂ ಅಧಿಕಾರಿ ಪರಶುರಾಮ ಗಸ್ತೆ ಹೇಳಿದರು.

ಮಂಗಳವಾರದಂದು ನಗರದ ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ನಗರಸಭೆ ಗೋಕಾಕ ಇವುಗಳ ಸಂಯುಕ್ತಾಶ್ರಯದಲ್ಲಿ ಸಂವಿಧಾನ ಶಿಲ್ಪಿ ಮಹಾಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ರವರ 135ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ವಿಶ್ವ ಮಾನವರಾಗಿ ರಾರಾಜಿಸುತ್ತಿದ್ದಾರೆ. ಅವರ ತತ್ವ ಸಿದ್ದಾಂತಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಸಾಗಬೇಕು. ಅವರು ಯಾವುದೇ ಒಂದು ಸಮಾಜಕ್ಕೆ, ಪಂಥಕ್ಕೆ ಸೇರಿದವರಲ್ಲ ಅವರು ಇಡೀ ವಿಶ್ವದ ಮಾನವ ಕುಲಕ್ಕೆ ಸೇರಿದವರಾಗಿದ್ದಾರೆ.ಎಲ್ಲಾ ಭಾರತೀಯರು ಡಾ.ಅಂಬೇಡ್ಕರ್ ಅವರನ್ನು ಹುಟ್ಟಿನಿಂದ ಬಲ್ಲವರಾಗಿದ್ದೇವೆ ಆದರೆ ಅವರ ತತ್ವಗಳನ್ನು ಅಳವಡಿಸಿಕೊಳ್ಳುದರಲ್ಲಿ ಹಿಂದೆ ಉಳಿದಿದ್ದೇವೆ. ಅವರು ಬದುಕಿದ ದಾರಿಯಲ್ಲಿ ನಾವೆಲ್ಲರೂ ಬಾಳಿ ಬದುಕಬೇಕಾಗಿದೆ. ಭಾರತೀಯರ ಮಾತೃ ಹೃದಯರಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನವನ್ನು ನಾವು ಇಂದು ಪಾಲಿಸುತ್ತಿದ್ದೇವೆ.ಸಮಾಜದ ಕಟ್ಟಕಡೆಯ ವ್ಯಕ್ತಿಯು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂಬ ಉದ್ದೇಶ ಅಂಬೇಡ್ಕರ್ ಅವರು ಹೊಂದಿದ್ದರು ಆ ಆಸೆಯನ್ನು ನಾವು ಈಡೇರಿಸಬೇಕಾಗಿದೆ. ಮುಂದಿನ ಪೀಳಿಗೆಗೆ ಅಂಬೇಡ್ಕರ್ ಅವರ ವಿಚಾರಗಳನ್ನು ನಾವು ನೀಡಬೇಕಾಗಿದೆ.
ನಮ್ಮಿಂದ ನಾವು ಹಿಂದುಳಿದಿದ್ದೇವೇ ಹೋರೆತು ಬೇರೆಯವರಿಂದ ಅಲ್ಲ ಎಂಬ ಸತ್ಯವನ್ನು ಅರಿತುಕೊಂಡು ನಾವು ದುರ್ಬಲರಾಗದೆ ಸಬಲರಾಗಿ ದೇಶವನ್ನು ಕಟ್ಟಬೇಕಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರ ಡಾ.ಮೋಹನ್ ಭಸ್ಮೆ ವಹಿಸಿದ್ದರು.
ಉಪನ್ಯಾಸಕರಾಗಿ ಆಗಮಿಸಿದ ನ್ಯಾಯವಾದಿ ಬಾಹುಸಾಹೇಬ ಕಾಂಬಳೆ ಅವರು ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಅಧಿಕಾರಿ ಎ.ಬಿ.ಮಲಬನ್ನವರ, ಸಿಪಿಐ ಸರೇಶಬಾಬು, ಪೌರಾಯುಕ್ತ ರವಿ ರಂಗಸುಭೆ, ಡಾ.ಎಂ.ಎಸ್.ಕೊಪ್ಪದ, ಪ್ರಮಿಳಾ ಬೇವಿನಗಿಡದ, ಶಿವಾನಂದ ಹಿರೇಮಠ, ಎಂ.ಎಲ್.ಜನ್ಮಟ್ಟಿ, ಎಂ.ಎಂ.ನಧಾಫ, ಡಿ.ಎಸ್.ಕೂಡವಕ್ಕಲಿಗ, ಮುಖಂಡರುಗಳಾದ ವೀರಭದ್ರ ಮೈಲನ್ನವರ, ಗೋವಿಂದ ಕಳ್ಳಿಮನಿ, ಓಂಕಾರಪ್ಪ ಬಂಡಿವಡ್ಡರ,ಸುಂದರವ್ವ ಕಟ್ಟಿಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: