RNI NO. KARKAN/2006/27779|Saturday, February 7, 2026
You are here: Home » breaking news » ಗೋಕಾಕ: ಇಂದಿಗೂ ಲಿಂಗಭೇಧ ತಾರತಮ್ಯ ಇರುವುದು ವಿಷಾದನೀಯ : ಪದ್ಮಶ್ರೀ ಸುನೀತಾ ಕೃಷ್ಣನ

ಗೋಕಾಕ: ಇಂದಿಗೂ ಲಿಂಗಭೇಧ ತಾರತಮ್ಯ ಇರುವುದು ವಿಷಾದನೀಯ : ಪದ್ಮಶ್ರೀ ಸುನೀತಾ ಕೃಷ್ಣನ 

 

ಇಂದಿಗೂ ಲಿಂಗಭೇಧ ತಾರತಮ್ಯ ಇರುವುದು ವಿಷಾದನೀಯ : ಪದ್ಮಶ್ರೀ ಸುನೀತಾ ಕೃಷ್ಣನ

 

ಗೋಕಾಕ ಫೆ 2 : ಲಿಂಗ ಭೇದ ಮಾಡಬಾರದು ಎಂದು ಬಸವಣ್ಣನವರು 12 ಶತಮಾನದಲ್ಲಿ ಹೇಳಿದ್ದರು ಸಹ ಅದು ಇಂದಿಗೂ ಪಾಲನೆ ಆಗದಿಲ್ಲದಿರುವದು ವಿಷಾದನೀಯ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸುನೀತಾ ಕೃಷ್ಣನ ಹೇಳಿದರು.
ಸೋಮವಾರದಂದು ನಗರದ ಶ್ರೀ ಚೆನ್ನಬಸವೇಶ್ವರ ವಿದ್ಯಾಪೀಠ ಆವರಣದಲ್ಲಿ ಶೂನ್ಯ ಸಂಪಾದನ ಮಠ ಕಾಯಕಯೋಗಿ ಲಿಂಗೈಕ ಶ್ರೀ ಬಸವ ಮಹಾಸ್ವಾಮಿಗಳವರ ಇಪ್ಪತೋಂದನೇಯ ಪುಣ್ಯಸ್ಮರಣೋತ್ಸವದ ಅಂಗವಾಗಿ ಹಮ್ಮಿಕೊಂಡ 21ನೇ ಶರಣ ಸಂಸ್ಕೃತಿ ಉತ್ಸವದ ಎರಡನೇ ದಿನದ ಮಹಿಳಾ ಸಮಾವೇಶ ಕಾಯಕಶ್ರೀ ಪ್ರಶಸ್ತಿ ಸಮಾರಂಭದಲ್ಲಿ ಕಾಯಕಶ್ರೀ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಇಂದು ಹೆಣ್ಣು ಮಕ್ಕಳನ್ನು ಭೋಗದ ವಸ್ತು ಮಾಡಿ ಹೆಣ್ಣು ಜೀವಕ್ಕೆ ಅವಮಾನಿಸುವ ಕಾರ್ಯ ನಡೆದಿರುವುದು ವಿಷಾದನೀಯ.ಇಲ್ಲಿಯವರೆಗೆ 30 ಸಾವಿರಕ್ಕೂ ಹೆಚ್ಚು ಹೆಣ್ಣು ಮಕ್ಕಳನ್ನು ವೇಶಾವಾಟಿಕೆಯಿಂದ ರಕ್ಷಿ‌ಸಿ ಅವರಿಗೆ ಸ್ವಯಂ ಉದ್ಯೋಗ ಒದಗಿಸಿರುವುದು ನನಗೆ ತೃಪ್ತಿ ಇದೆ. ಹೆಣ್ಣು ಮಕ್ಕಳಿಗೆ ಬುದ್ದಿ ಹೇಳುವ ಮೊದಲು ಗಂಡು ಮಕ್ಕಳಿಗೆ ಒಳ್ಳೆಯ ಸಂಸ್ಕೃತಿಯನ್ನು ನೀಡಬೇಕು‌. ಶೋಷಣೆ ಒಳಗಾದವರಿಗೆ ಸಹಾಯ ಮಾಡುವ ಬದಲು ಅವರಿಗೆ ಆತ್ಮಸ್ಥೈರ್ಯ ತುಂಬಿ ಅವರನ್ನು ಪ್ರೀತಿಸುವ ಕೆಲಸ ಸಮಾಜ ಮಾಡಬೇಕು. ಈ ಸಮಾಜ ಬದಲಾಗಬೇಕಾದರೆ ನಾವು ಮೊದಲ ಬದಲಾಗಬೇಕು ಅಂದಾಗ ಸದೃಢ ಸಮಾಜ ನಿರ್ಮಿಸಲು ಸಾಧ್ಯ ಆ ದಿಸೆಯಲ್ಲಿ ನಾವೆಲ್ಲರೂ ಮುಂದಾಗಬೇಕು ಎಂದ ಅವರು ಕಳೆದ 35 ವರ್ಷಗಳಿಂದ ಹೋರಾಟ ಮಾಡಿ ಮಹಿಳೆಯರನ್ನು ಮುಖ್ಯವಾಹಿನಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ.ಕಾಯಕಶ್ರೀ ಪ್ರಶಸ್ತಿ ನನ್ನ ಜವಾಬ್ದಾರಿ ಹೆಚ್ಚಿಸಿದೆ ಎಂದು ಹೇಳಿದರು .
ಕಾರ್ಯಕ್ರಮದ ಸಾನ್ನಿಧ್ಯವನ್ನು ವಹಿಸಿ ಮಾತನಾಡಿದ ಬಸವಬೆಳವಿಯ ಚರಂತೇಶ್ವರಮಠದ ಶ್ರೀ ಬಸವ ಸ್ವಾಮೀಜಿ ಮಾತನಾಡಿ ಶಿವಾನೂಭವವನ್ನು ಕೇಳಿ ಅವುಗಳನ್ನು ತಮ್ಮ ಜೀವನದಲ್ಲಿ ಪಾಲಿಸಿಕೊಂಡು ಹಲವಾರು ಭಾರತೀಯ ಮಹಿಳೆಯರು ಇತಿಹಾಸವನ್ನು ಸೃಷ್ಟಿಸಿದ್ದಾರೆ. ಇತಿಹಾಸವನ್ನು ಓದಿದರೆ ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ. 12 ಶತಮಾನದ ವಚನಕಾರರು, ಶರಣೆಯರನ್ನು ಆದರ್ಶವಾಗಿಟ್ಟುಕೊಂಡು ತಮ್ಮ ಜೀವನ ಸಾಗಿಸಬೇಕು. ದಿನನಿತ್ಯದ ಕಾರ್ಯಗಳಲ್ಲಿ ಇಷ್ಟಲಿಂಗ ಪೂಜೆ ಮಾಡುವುದನ್ನು ರೂಡಿ ಮಾಡಿಕೊಂಡು ತಮ್ಮ ಜೀವನವನ್ನು ಪಾವನವಾಗಿಸಿಕೊಳ್ಳಿ ಎಂದ ಅವರು ಗೋಕಾಕ ಭಾಗದಲ್ಲಿ ಶರಣ ಸಂಸ್ಕೃತಿಯನ್ನು ಪ್ರಚುರ ಪಡೆಸುವ ಮೂಲಕ ಈ ಭಾಗದಲ್ಲಿ ಬಸವಣ್ಣನವರ ತತ್ವ ಹರಡಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.

ಸಮಾವೇಶವನ್ನು ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಮೇಯರ್ ಜ್ಯೋತಿ ಪಾಟೀಲ ಉದ್ಘಾಟಿಸಿದರು.
ಸಮಾವೇಶದ ಅಧ್ಯಕ್ಷತೆಯನ್ನು ಬೆಳಗಾವಿಯ ಪ್ರಾದೇಶಿಕ ಆಯುಕ್ತೆ ಕೆ.ಎಮ್.ಜಾನಕಿ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಸಮಾಜದಲ್ಲಿ ವಿವಿಧ ರಂಗಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಮಹಿಳೆಯರನ್ನು ಸತ್ಕರಿಸಿ, ಗೌರವಿಸಲಾಯಿತು.
ನಂತರ ದೇಶದ ಖ್ಯಾತ ಉದಯ ಜಾದೂಗರ ಉದಯ ಅವರು ಜಾದೂ ಪ್ರದರ್ಶನ ನೀಡಿದರು.

ಈ ಸಂದರ್ಭದಲ್ಲಿ ಬಸವಧರ್ಮ ಪೀಠ ಕೂಡಲಸಂಗದ ಜಗದ್ಗುರು ಗಾಂಗಾಮಾತಾಜಿ, ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು, ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ, ಮಯೂರಾ ಶಿವಾಳಕರ, ರೂಪಾ ಮುನವಳ್ಳಿ, ವಿಜಯಲಕ್ಷ್ಮೀ ಸಿದ್ದಾಪೂರಮಠ, ಕುಮಾರಿ ನಿವೇದಿತಾ ಸಿದ್ನಾಳ, ಶರಣ ಸಂಸ್ಕೃತಿ ಉತ್ಸವ ಸಮಿತಿಯ ಅಧ್ಯಕ್ಷ ಶಂಕರ ಗೋರೋಶಿ, ಕಾರ್ಯದರ್ಶಿ ಬಸವರಾಜ ಉಳ್ಳಾಗಡ್ಡಿ, ಮಹಾಂತೇಶ ಕುಡಚಿ ಉಪಸ್ಥಿತರಿದ್ದರು.

Related posts: