ಗೋಕಾಕ:ಕನ್ನಡ ಭಾಷೆ, ನುಡಿ ಸಂಸ್ಕೃತಿಗೆ ಹೊಸ ಬೆಳಕನ್ನು ಕೊಟ್ಟ ಕನಕದಾಸರು ದಾಸ ಶ್ರೇಷ್ಠರಾಗಿದ್ದಾರೆ : ಈಶ್ವರ

ಕನ್ನಡ ಭಾಷೆ, ನುಡಿ ಸಂಸ್ಕೃತಿಗೆ ಹೊಸ ಬೆಳಕನ್ನು ಕೊಟ್ಟ ಕನಕದಾಸರು ದಾಸ ಶ್ರೇಷ್ಠರಾಗಿದ್ದಾರೆ : ಈಶ್ವರ
ಗೋಕಾಕ ನ 8 : ಕನ್ನಡ ಭಾಷೆ, ನುಡಿ ಸಂಸ್ಕೃತಿಗೆ ಹೊಸ ಬೆಳಕನ್ನು ಕೊಟ್ಟ ಕನಕದಾಸರು ದಾಸ ಶ್ರೇಷ್ಠರಾಗಿದ್ದಾರೆ ಎಂದು ಇಲ್ಲಿನ ಸಾಹಿತಿ ಈಶ್ವರ ಮಮದಾಪೂರ ಹೇಳಿದರು.
ಶನಿವಾರದಂದು ನಗರದ ಎಕ್ಷ್ಮೀ ಎಜುಕೇಶನ್ ಟ್ರಸ್ಟ್ ನ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಮನುಕುಲದ ಉದ್ಧಾರಕ್ಕಾಗಿ ಶ್ರಮಿಸಿದ ಕನಕದಾಸರು ಮೌಢ್ಯತೆ ಹಾಗೂ ಜಾತಿ ವ್ಯವಸ್ಥೆಯ ವಿರುದ್ಧ ತಮ್ಮ ಕೀರ್ತನೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದರು.
ಭಕ್ತಿ ಭಾವದೊಂದಿಗೆ ವೈಚಾರಿಕ ಚಿಂತನೆಯನ್ನು ಜನಸಾಮಾನ್ಯರಿಗೆ ತಲುಪಿಸಿದ್ದರು. ಅವರ ಆಚಾರ ವಿಚಾರ ನೀತಿಗಳು ಸರ್ವರಿಗೂ ದಾರಿದೀಪವಾಗಿವೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸನತ್ ಜಾರಕಿಹೊಳಿ ಉದ್ಘಾಟಿಸಿದರು.
ವೇದಿಕೆಯ ಮೇಲೆ ವಿವಿಧ ಅಂಗಸಂಸ್ಥೆಗಳ ಮುಖ್ಯಸ್ಥರುಗಳಾದಡಾ.ಐ.ಎಸ್.ಪವಾರ, ಡಾ.ಎ.ಬಿ.ಪಾಟೀಲ್, ಡಾ.ಜಿ.ಆರ್.ನಿಡೋಣಿ, ಅರುಣ ಪೂಜೇರ, ಎಚ್.ಎಸ್.ಅಡಿಬಟ್ಟಿ, ಪ್ರವೀಣ್ ಕಂಡ್ರಟ್ಟಿ, ಎ.ಎಂ.ಸರಕಾವಾಸ, ಎಚ್.ವ್ಹಿ.ಪಾಗನಿಸ, ಪಿ.ವಿ.ಚಚಡಿ ಉಪಸ್ಥಿತರಿದ್ದರು.
