RNI NO. KARKAN/2006/27779|Tuesday, February 17, 2026
You are here: Home » breaking news » ಗೋಕಾಕ:ದಿನಾಂಕ 8 ರಂದು ಬಸವಣ್ಣೆಪ್ಪಾ ಹೊಸಮನಿ, ಬಿ.ಆರ್.ಅರಿಷಿಣಗೋಡಿ ರಂಗಭೂಮಿ ಪ್ರಶಸ್ತಿ ಸಮಾರಂಭ : ಮಾಲತಿಶ್ರೀ ಮೈಸೂರು ಮಾಹಿತಿ

ಗೋಕಾಕ:ದಿನಾಂಕ 8 ರಂದು ಬಸವಣ್ಣೆಪ್ಪಾ ಹೊಸಮನಿ, ಬಿ.ಆರ್.ಅರಿಷಿಣಗೋಡಿ ರಂಗಭೂಮಿ ಪ್ರಶಸ್ತಿ ಸಮಾರಂಭ : ಮಾಲತಿಶ್ರೀ ಮೈಸೂರು ಮಾಹಿತಿ 

ದಿನಾಂಕ 8 ರಂದು ಬಸವಣ್ಣೆಪ್ಪಾ ಹೊಸಮನಿ, ಬಿ.ಆರ್.ಅರಿಷಿಣಗೋಡಿ ರಂಗಭೂಮಿ ಪ್ರಶಸ್ತಿ ಸಮಾರಂಭ : ಮಾಲತಿಶ್ರೀ ಮೈಸೂರು ಮಾಹಿತಿ

ಗೋಕಾಕ ಮಾ 6 : ಈ ಭಾರಿಯ ರಂಗಭೂಮಿ ಭೀಷ್ಮ ದಿ.ಶ್ರೀ ಬಸವಣ್ಣೆಪ್ಪಾ ಹೊಸಮನಿ ರಂಗ ಪ್ರಶಸ್ತಿಯನ್ನು ಶ್ರೀ ಮಲ್ಲೇಶಪ್ಪ ಬೀರಾಳ ಅವರಿಗೆ ಹಾಗೂ ರಂಗಭೂಮಿ ದ್ರೋಣ ದಿ.ಶ್ರೀ ಬಿ.ಆರ್.ಅರಿಷಿಣಗೋಡಿ ರಂಗ ಪ್ರಶಸ್ತಿಯನ್ನು ಶ್ರೀ ಎಸ್.ಎಮ್.ಖೇಡಗಿ ಅವರಿಗೆ ನೀಡಿ ಗೌರವಿಸಲಾಗುವುದು ಎಂದು ಆಶಾಕಿರಣ ಕಲಾ ಟ್ರಸ್ಟ್ ನ ಸಂಸ್ಥಾಪಕಿ ಶ್ರೀಮತಿ ಮಾಲತಿಶ್ರೀ ಮೈಸೂರು ಹೇಳಿದರು
ಗುರುವಾರದಂದು ನಗರದ ಬಸವ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ನಗರದ ಜ್ಞಾನ ಮಂದಿರದಲ್ಲಿ ಶನಿವಾರ ದಿನಾಂಕ 8 ರಂದು ಮುಂಜಾನೆ 10:30 ಕ್ಕೆ ನಡೆಯುವ ಸಮಾರಂಭದಲ್ಲಿ ಗೋಕಾವಿ ನಾಡಿನ ವೃತ್ತಿ ರಂಗಭೂಮಿ ಹಿರಿಯ ಕಲಾವಿದರಾದ ದಿ.ಶ್ರೀ ಬಿ.ಆರ್.ಅರಿಷಿಣಗೋಡಿ ಹಾಗೂ ದಿ.ಶ್ರೀ ಬಸವಣ್ಣೆಪ್ಪಾ ಹೊಸಮನಿ ರಂಗ ಸ್ಮರಣೋತ್ಸವ 11ನೇ ಪ್ರಶಸ್ತಿ ಪ್ರದಾನ ಸಮಾರಂಭದ ದಿವ್ಯ ಸಾನಿಧ್ಯವನ್ನು ಅರಭಾವಿ ಮಠದ ಶ್ರೀ ಗುರುಬಸವಲಿಂಗ ಮಹಾಸ್ವಾಮಿಗಳು, ಬೈಲಹೊಂಗಲದ ಡಾ.ಮಹಾಂತೇಶ ಶಾಸ್ತ್ರಿಗಳು ವಹಿಸುವರು. ಕಾರ್ಯಕ್ರಮದ ಉದ್ಘಾಟನೆಯನ್ನು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ನೆರೆವೇರಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಂಗ್ರೆಸ್ ಮುಖಂಡ ಅಶೋಕ್ ಪೂಜಾರಿ ವಹಿಸುವರು. ಅಥಿತಿಗಳಾಗಿ ತಹಶೀಲ್ದಾರ ಮೋಹನ್ ಭಸ್ಮೆ, ಕಿರುತೆರೆ ಕಲಾವಿದ ಶ್ರೀನಾಥ್ ವಶಿಷ್ಠ, ಮಹಾಂತೇಶ ತಾವಂಶಿ, ಶ್ರೀಮತಿ ರಜನಿ ಜಿರಗ್ಯಾಳ ಸೇರಿದಂತೆ ಅನೇಕರು ಭಾಗವಹಿಸುವರು ಕಲಾ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಹಾಂತೇಶ ತಾವಂಶಿ, ಈಶ್ವರಚಂದ್ರ ಬೇಟಗೇರಿ, ರಜನಿ ಜಿರಗ್ಯಾಳ, ಸಂಗೀತಾ ಬನ್ನೂರು, ವೈಶಾಲಿ ಭರಭರಿ, ಸುಧಾ ಮಠಪತಿ ಉಪಸ್ಥಿತರಿದ್ದರು.

Related posts: