RNI NO. KARKAN/2006/27779|Tuesday, January 27, 2026
You are here: Home » breaking news » ಗೋಕಾಕ:ಜಾನಪದ ಕಲೆ ನಸಿಸಿ ಹೋಗುತ್ತಿರುವ ಕಾಲದಲ್ಲಿ ಕಜಾಪ ಅದನ್ನು ಉಳಿಸುವ ಕಾರ್ಯ ಮಾಡುತ್ತಿದ್ದೆ : ಭರಮಣ್ಣ ಉಪ್ಪಾರ

ಗೋಕಾಕ:ಜಾನಪದ ಕಲೆ ನಸಿಸಿ ಹೋಗುತ್ತಿರುವ ಕಾಲದಲ್ಲಿ ಕಜಾಪ ಅದನ್ನು ಉಳಿಸುವ ಕಾರ್ಯ ಮಾಡುತ್ತಿದ್ದೆ : ಭರಮಣ್ಣ ಉಪ್ಪಾರ 

ಜಾನಪದ ಕಲೆ ನಸಿಸಿ ಹೋಗುತ್ತಿರುವ ಕಾಲದಲ್ಲಿ ಕಜಾಪ ಅದನ್ನು ಉಳಿಸುವ ಕಾರ್ಯ ಮಾಡುತ್ತಿದ್ದೆ : ಭರಮಣ್ಣ ಉಪ್ಪಾರ
ಗೋಕಾಕ ಜ 5 : ಜಾನಪದ ಕಲೆ ನಸಿಸಿ ಹೋಗುತ್ತಿರುವ ಕಾಲದಲ್ಲಿ ಜಾನಪದ ಸಾಹಿತ್ಯವನ್ನು ಉಳಿಸುವ ಮಹತ್ತರ ಕಾರ್ಯ ಕರ್ನಾಟಕ ಜಾನಪದ ಪರಿಷತ್ ಮಾಡುತ್ತಿದೆ ಎಂದು
ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ ಹೇಳಿದರು.
ರವಿವಾರದಂದು ಸಾಯಂಕಾಲ ತಾಲೂಕಿನ ಹಡಗಿನಾಳ ಗ್ರಾಮದಲ್ಲಿ ಡಾ.ಶ್ರೀರಾಮ ಇಟ್ಟಣ್ಣವರ ಪ್ರಧಾನ ವೇದಿಕೆಯಲ್ಲಿ ಕನ್ನಡ ಜಾನಪದ ಪರಿಷತ್ ,ತಾಲೂಕು ಘಟಕ ಗೋಕಾಕ ವತಿಯಿಂದ ಹಮ್ಮಿಕೊಂಡ ಗೋಕಾಕ ತಾಲೂಕಿನ ಪ್ರಪ್ರಥಮ ಕನ್ನಡ ಜಾನಪದ ಸಮ್ಮೇಳನದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಜಾನಪದ ಎಂದರೆ ಇಂದಿನ ಜನಾಂಗಕ್ಕೆ ಅದರ ಗಂಧ ಗಾಳಿ ಗೊತ್ತಿಲ್ಲ. ಅದನ್ನು ತಿಳಿಸುವ ಕಾರ್ಯಕ್ರಮಗಳು ಮೇಲಿಂದ ಮೇಲೆ ಆಗಬೇಕು ಆಗ ಯುವ ಜನಾಂಗವನ್ನು ಜಾನಪದ ಸಾಹಿತ್ಯದ ಕಡೆಗೆ ಕರೆದುಕೊಂಡು ಹೋಗಬಹುದು ಎಂದ ಅವರು ಮೂಲ ಜಾನಪದವನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಆ ನಿಟ್ಟಿನಲ್ಲಿ ಎಲ್ಲಾ ಸಾಹಿತಿಗಳು ಸಾಹಿತ್ಯಿಕ ಕಾರ್ಯಗಳನ್ನು ಮಾಡಬೇಕು ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಮಾತನಾಡಿ ಆಧುನಿಕ ಯುಗದಲ್ಲಿ ಜನರಲ್ಲಿ ಜಾನಪದ ಅಭಿರುಚಿ ಕಡಿಮೆಯಾಗುತ್ತಿದ್ದು, ಬೈಯಲಾಟಗಳು ,ನಾಟಕಗಳು ಮಾಯವಾಗಿವೆ. ಮೊಬೈಲ್ ನಮ್ಮನ್ನು ಬಹಳಷ್ಟು ಆಕ್ರಮಣ ಮಾಡಿಕೊಂಡಿದೆ.ಇದರಿಂದ ವೈಯಕ್ತಿಕ ಸಂಬಂಧಗಳು ಹಾಳಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ನಾವು ನಮ್ಮ ಮೂಲ ಜಾನಪದ ಕಲೆಗಳ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ.
ಜಾನಪದ ಕಲಾವಿದರು ಎಲ್ಲವನ್ನು ಕಳೆದುಕೊಂಡು ಜನರಲ್ಲಿ ಜಾನಪದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ ಅಂತಹವರನ್ನು ಸರಕಾರ ಗುರುತಿಸಿ ಗೌರವಿಸುವ ಕಾರ್ಯಮಾಡಬೇಕಾಗಿದೆ.
ಒಟ್ಟಾರೆ ಮೂಲ ಜಾನಪದ ಕಲೆಗಳನ್ನು ಬದುಕಿಸುವ ಕಾರ್ಯವನ್ನು ಸಮಾಜ ಮತ್ತು ಸರಕಾರ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹಡಗಿನಾಳದ ಮುತ್ತೇಶ್ವರ ಸ್ವಾಮಿಗಳು, ವಡೆಯರಹಟ್ಟಿಯ ನಾರಾಯಣ ಶರಣರು ವಹಿಸಿ ಆರ್ಶೀವಚನ ನೀಡಿದರು.

ಇದೇ ಸಂದರ್ಭದಲ್ಲಿ ತಾಲೂಕಿನ 25 ಜಾನಪದ ಕಲಾವಿದರಿಗೆ ಡಾ.ಬೆಟಗೇರಿ ಕೃಷ್ಣಶರ್ಮ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಇದಕ್ಕೂ ಮೊದಲು ಪ್ರಸ್ತುತ ಚಿಂತನೆ ಕುರಿತು ಉಪನ್ಯಾಸ ಮತ್ತು ಜಾನಪದ ಜಗುಲಿ ಕಟ್ಟೆ ವಿಷಯ ಕುರಿತು ಸಂವಾದಗೋಷ್ಠಿಗಳು ಜರುಗಿದವು. ನಂತರ ಜಾನಪದ ಕಲೆಗಳ ಪ್ರದರ್ಶನ ನಡೆದವು.

ವೇದಿಕೆಯ ಮೇಲೆ ಕಸಾಪ ಅಧ್ಯಕ್ಷೆ ಶ್ರೀಮತಿ ಭಾರತಿ ಮದಬಾಂವಿ, ಗೌಡಪ್ಪ ಪಾಟೀಲ, ಬಸವರಾಜ ಉಮರಾಣಿ, ಕಜಾಪ ತಾಲೂಕು ಅಧ್ಯಕ್ಷ ಜಯಾನಂದ ಮಾದರ, ಪುಷ್ಪಾ ಮುರಗೋಡ, ಶ್ರೀಮತಿ ವಿದ್ಯಾ ರೆಡ್ಡಿ, ಮಹಾಂತೇಶ ತಾವಂಶಿ, ಬಲದೇವ ಸಣ್ಣಕ್ಕಿ, ಡಾ.ಅರುಣ ಸವತಿಕಾಯಿ, ಕಲಾವಿದ ಜಿ.ಕೆ.ಕಾಡೇಶಕುಮಾರ, ಈಶ್ವರಚಂದ್ರ ಬೆಟಗೇರಿ, ಗೌಡಪ್ಪ ಪಾಟೀಲ, ಮಾಲಪ್ಪ ಆಡಿನ, ಡಾ.ಎಲ್.ಎಸ್.ಚೌರಿ, ಬಿ.ಬಿ.ಪಟ್ಟಗುಂದಿ, ಆನಂದ ಸೋರಗಾವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು..

Related posts: