RNI NO. KARKAN/2006/27779|Sunday, May 10, 2026
You are here: Home » breaking news » ಗೋಕಾಕ:ವಿನಾಯಕ ಮಿತ್ರ ಮಂಡಳಿಯವರಿಂದ ಗಣಪತಿ ಪ್ರತಿಷ್ಠಾಪನೆ

ಗೋಕಾಕ:ವಿನಾಯಕ ಮಿತ್ರ ಮಂಡಳಿಯವರಿಂದ ಗಣಪತಿ ಪ್ರತಿಷ್ಠಾಪನೆ 

ವಿನಾಯಕ ಮಿತ್ರ ಮಂಡಳಿಯವರಿಂದ ಗಣಪತಿ ಪ್ರತಿಷ್ಠಾಪನೆ

ಬೆಟಗೇರಿ ಸೆ 8 :ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಶ್ರೀ ವಿನಾಯಕ ಮಿತ್ರ ಮಂಡಳಿಯವರು ಸ್ಥಳೀಯ ಪ್ರಮುಖ ಬೀದಿಗಳ ಮೂಲಕ ಗಣಪತಿ ಮೂರ್ತಿ ಮೆರವಣಿಗೆ, ಜೈ ಗಣೇಶ ಘೋಷನೆ ಕೂಗುತ್ತಾ ಒಬ್ಬರಿಗೊಬ್ಬರೂ ಗುಲಾಲು ಎರಚಿ, ಪಟಾಕಿ ಸಿಡಿಸುವದೊಂದಿಗೆ ಇಲ್ಲಿಯ ಗ್ರಾಮದೇವÀತೆ ದ್ಯಾಮವ್ವದೇವಿ ದೇವಾಲಯ ಹತ್ತಿರ ಮೂರ್ತಿ ಪ್ರತಿಷ್ಠಾಪಿಸುವ ಸ್ಥಳಕ್ಕೆ ಕರೆ ತಂದು ಗಣಪತಿ ಪ್ರತಿಷ್ಠಾಪನೆ ಸಂಭ್ರಮದಿಂದ ನಡೆಯಿತು.
ಸ್ಥಳೀಯ ವೇದಮೂರ್ತಿ ವಿಜಯ ಹಿರೇಮಠ ಗಣಪತಿ ಮೂರ್ತಿಗೆ ಪೂಜೆ-ಪುನಸ್ಕಾರ ನೆರವೇರಿಸಿದರು. ಸೆ.7ರಿಂದ ಸತತ 5 ದಿನಗಳ ಕಾಲ ಮುಂಜಾನೆ-ಸಂಜೆ ಸಮಯ ಪ್ರತಿಷ್ಠಾಪಿಸಿದ ಗಣೇಶನೆಗೆ ಪೂಜೆ-ಪುನಸ್ಕಾರ ಭಕ್ತಿಯಿಂದ ನಡೆಯಲಿದೆ. ಸೆ.9ರಂದು ಸಾಯಂಕಾಲ 6ಗಂಟೆಗೆ ಸಕಲರಿಗೂ ಅನ್ನಪ್ರಸಾದ ಜರುಗಲಿದೆ. ಸೆ.11ರಂದು ರಾತ್ರಿ 10ಗಂಟೆಗೆ ಗಣೇಶ ಮೂರ್ತಿ ವಿಸರ್ಜನೆ ಸಡಗರದಿಂದ ನಡೆಯಲಿದೆ ಎಂದು ಇಲ್ಲಿಯ ಶ್ರೀ ವಿನಾಯಕ ಮಿತ್ರ ಮಂಡಳಿ ತಿಳಿಸಿದೆ.
ಈ ವೇಳೆ ಮಂಜುನಾಥ ಪತ್ತಾರ, ಶಿವು ನಾಯ್ಕರ, ಗುಳಪ್ಪ ಪಣದಿ, ಉಮೇಶ ಬಡಿಗೇರ, ಅನಿಲ ಕರಿಕಟ್ಟಿ, ಪ್ರಕಾಶ ಬಡಿಗೇರ, ರಾಘು ಬೆಟಗೇರಿ, ಪರಶುರಾಮ ಬಡಿಗೇರ, ಬಸು ಬಡಿಗೇರ, ಶಿವಾನಂದ ಪತ್ತಾರ, ಅಜ್ಜಪ್ಪ ಪೂಜೇರಿ, ಇಲ್ಲಿಯ ಶ್ರೀ ವಿನಾಯಕ ಮಿತ್ರ ಮಂಡಳಿ ಪದಾಧಿಕಾರಿಗಳು, ಯುವಕರು, ಸ್ಥಳೀಯರು ಇದ್ದರು.

Related posts: