ಗೋಕಾಕ:ಜವರಾಯನ ಅಟ್ಟಹಾಸ… ಅಂತ್ಯಕ್ರಿಯೆ ಮುಗಿಸಿ ಮನೆ ಸೇರಬೇಕಿದ್ದ 6 ಜನ ಮಸಣಕ್ಕೆ !

ಜವರಾಯನ ಅಟ್ಟಹಾಸ… ಅಂತ್ಯಕ್ರಿಯೆ ಮುಗಿಸಿ ಮನೆ ಸೇರಬೇಕಿದ್ದ 6 ಜನ ಮಸಣಕ್ಕೆ !
ಗೋಕಾಕ ಡಿ 4 : ತಾಲೂಕಿನ ಹೊರವಲಯದಲ್ಲಿ ಸೋಮವಾರ ಮಧ್ಯರಾತ್ರಿ ಜವರಾಯ ಅಟ್ಟಹಾಸ ಮೆರೆದಿದ್ದಾನೆ .ಸಂಬಂದಿಕರೊಬ್ಬರ ಅಂತ್ಯಸಂಸ್ಕಾರ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಭೀಕರ ರಸ್ತೆ ಅಫಘಾತ ಸಂಭವಿಸಿ 6 ಜನ ಮಸಣ ಸೇರಿರುವ ದಾರುಣ ಘಟನೆ ಗೋಕಾಕ ತಾಲೂಕಿನ ಹಿರೇನಂದಿ ಗ್ರಾಮದ ಬಳಿ ನಡೆದಿದೆ.
ಸೋಮವಾರ ಮಧ್ಯರಾತ್ರಿ ಕಬ್ಬು ತುಂಬಿದ ಟ್ರ್ಯಾಕ್ಟರ್ ಹಾಗೂ ಮಹೀಂದ್ರಾ ಪೀಕ್ಕಪ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಮಹೀಂದ್ರಾ ಪೀಕ್ಕಪದಲ್ಲಿ ಪ್ರಯಾಣಿಸುತ್ತಿದ್ದ ಐವರು ಸ್ಥಳದಲ್ಲೇ ಮೃತಪಟ್ಟರೆ, ಒಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮಹೀಂದ್ರಾ ಪೀಕ್ಕಪದಲ್ಲಿ ಪ್ರಯಾಣಿಸುತ್ತಿದ್ದ ಇನ್ನುಳಿದ 15 ಜನ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸವದತ್ತಿ ತಾಲೂಕಿನ ಮಾಡಮಗೇರಿ ಹಾಗೂ ಯರಜರವಿ ಗ್ರಾಮದ ನಿವಾಸಿಗಳಾದ ಗಂಗವ್ವ ಹುರಳಿ (30) ಕಾಶವ್ವ ಖಂಡ್ರಿ (70), ಯಲ್ಲವ್ವ ಪೂಜಾರಿ (45) ಯಲ್ಲವ್ವ ಗುಂಡಪ್ಪನವರ (40) ಹಾಗೂ ರೇಣುಕಾ ಸೊಪಾಡ್ಲ (35) ಮಲ್ಲವ್ವ ಖಂಡ್ರಿ ಘಟನೆಯಲ್ಲಿ ಮೃತಪಟ್ಟ ದುರ್ದೈವಿಗಳು. ಮಹಾದೇವಿ ಸೋಪ್ಪಡಲ , ಮಲಪ್ಪ ಖಂಡ್ರೆ , ಜಯಶ್ರೀ ಖಂಡ್ರೆ , ನಿಂಗಪ್ಪ ಖಂಡ್ರೆ ಸೇರಿದಂತೆ ಇನ್ನುಳಿದ 15 ಜನರಿಗೆ ಗಂಭೀರವಾಗಿ ಗಾಯವಾಗಿದ್ದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ
ಗೋಕಾಕ್ ಫಾಲ್ಸದಲ್ಲಿಯ ಸಂಬಂಧಿಕರ ಅಂತ್ಯ ಸಂಸ್ಕಾರ ಕಾರ್ಯದಲ್ಲಿ ಪಾಲ್ಗೊಂಡು ಮರಳುವಾಗ ಈ ದುರ್ಘಟನೆ ಸಂಭವಿಸಿದೆ. ಇನ್ನು ಘಟನೆಗೆ ಮಹೀಂದ್ರಾ ಪೀಕ್ಕಪ ಚಾಲಕನ ಅಜಾಗರೂಕತೆಯೇ ಕಾರಣ ಎನ್ನಲಾಗುತ್ತಿದೆ. ಸ್ಥಳಕ್ಕೆ ಗೋಕಾಕ್ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ, ಗಾಯಗೊಂಡವರನ್ನು ಗೋಕಾಕ್ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ದುರ್ಘಟನೆಯಲ್ಲಿ ಮೃತಪಟ್ಟವರ ಶವಗಳು ರಸ್ತೆ ಮೇಲೆಯೇ ಚಿಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಮರಣೋತ್ತರ ಪರೀಕ್ಷೆ ಬಳಿಕವೇ ಕುಟುಂಬಸ್ಥರಿಗೆ ಶವ ಹಸ್ತಾಂತರ ಕಾರ್ಯ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ.