RNI NO. KARKAN/2006/27779|Friday, February 13, 2026
You are here: Home » breaking news » ಗೋಕಾಕ:ಖೋಟಾ ನೋಟು ಚಲಾವಣೆ: ಗೋಕಾಕ ಪೊಲೀಸರಿಂದ 6 ಜನರ ಬಂಧನ

ಗೋಕಾಕ:ಖೋಟಾ ನೋಟು ಚಲಾವಣೆ: ಗೋಕಾಕ ಪೊಲೀಸರಿಂದ 6 ಜನರ ಬಂಧನ 

ಖೋಟಾ ನೋಟು ಚಲಾವಣೆ: ಗೋಕಾಕ ಪೊಲೀಸರಿಂದ 6 ಜನರ ಬಂಧನ

ಗೋಕಾಕ ಜು 2 : ಖೋಟಾ (ನಕಲಿ) ನೋಟು ಚಲಾವಣೆ ಮಾಡುತ್ತಿದ್ದ ಜಾಲವನ್ನು ಬೇಧಿಸಿರುವ ಪೊಲೀಸರು 6 ಜನರನ್ನು ಬಂಧಿಸಿ ಅವರಿಂದ ₹ 35 ಸಾವಿರ ಮೊತ್ತದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

ಮೂಡಲಗಿ ತಾಲೂಕಿನ ಅನ್ವರ ಮಹ್ಮದಸಲೀಂ ಯಾದವಾಡ, ವಯಸ್ಸು ( 26 ), ಮುಧೋಳ ತಾಲೂಕಿನ ಸದ್ಭಾಂ ಮುಸಾ ಯಡಹಳ್ಳಿ, ( 27), ರವಿ ಚನ್ನಪ್ಪ ಹ್ಯಾಗಾಡಿ ( 27),ದುಂಡಪ್ಪ ಮಹಾದೇವ ಒಣಶೆನವಿ ( 27), ವಿಠಲ ಹಣಮಂತ ಹೊಸಕೋಟಿ, (29 ), ಮಲ್ಲಪ್ಪ ಅಲ್ಲಪ್ಪ ಕುಂದಾಳಿ ( 29), ಬಂಧಿತರು.

ಇವರು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಖೋಟಾ ನೋಟ್ (ಕೌಂಟರ್ ಪಿಟ್ ಕರೆನ್ಸಿ) ತಯಾರಿಸಿ ಚಲಾವಣೆ ಮಾಡುವ ಹಾಗೂ ಹಣ ಡಬ್ಲಿಂಗ್ ಮಾಡಿ ಜನರಿಗೆ ಮೋಸ ಮಾಡುತ್ತಿದ್ದ ಗ್ಯಾಂಗ್ ಪತ್ತೆ ಹಚ್ಚಿದ ಗೋಕಾಕ ಪೊಲೀಸರು, ಆರು ಜನರನ್ನು ಬಂಧಿಸುವ ಮೂಲಕ ಖೋಟಾ ನೋಟ್ ಪ್ರಿಂಟ್ ತೆಗೆಯಲು ಉಪಯೋಗಿಸಿದ ಕಂಪ್ಯೂಟರ್. ಸಿ.ಪಿ.ಯು, ಪ್ರಿಂಟರ್, ಸ್ಟೀನಿಂಗ್ ಬೋರ್ಡ, ಪೆಂಟ್, ಶೈನಿಂಗ್ ಸ್ಪೀಕರ, ಡಿ.ಕೋಟಿಂಗ್ ಪೌಡರ್, ಪ್ರಿಂಟಿಂಗ್ ಪೇಪರ, ಕಟರ್ ಬೇಡಗಳು, 06 ಮೋಬೈಲಗಳು & ಒಂದು ಬಿಳಿ ಬಣ್ಣದ ಸ್ವಿಪ್ಟ್ ಕಾರ್ & ಇತರೆ ಸಾಮಾನುಗಳು ಹೀಗೆ ಒಟ್ಟು ಈ ಪ್ರಕರಣದಲ್ಲಿ ಅಂದಾಜು ಕಿಮ್ಮತ್ 523900/- ರೂ ಮೊತ್ತದ ವಸ್ತಗಳು ಹಾಗೂ 100 ರೂ ಮುಖ ಬೆಲೆಯ 305 ಬೋಟಾ ನೋಟುಗಳು (30500/-) ರೂ ಜಪ್ತ ಮಾಡಿದ್ದು, 500 ರೂ ಮುಖ ಬೆಲೆಯಂತೆ ಕಾಣುವ ಆಟಿಕೆಯ ನೋಟುಗಳ ಬಂಡಲ್‌ಗಳ ಮೇಲೆ ಎರಡು ಬದಿಯಲ್ಲಿ 500 ರೂ ಅಸಲು ನೋಟುಗಳು ಹೀಗೆ ಒಟ್ಟು 6792 ನೋಟುಗಳು, 01-ಮಾರುತಿ ಸ್ವೀಪ್ಪ ಕಾರ ಜಪ್ತಿ ಮಾಡಿದ್ದಾರೆ.

ಈ ಸಂಬಂಧ ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Related posts: