RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ಜ್ಞಾನ ಸಂಪತ್ತಿಗಿಂತ ಮಿಗಿಲಾದ ಸಂಪತ್ತಿಲ್ಲ —ಡಾ. ರಾಜು ಕಂಬಾರ

ಗೋಕಾಕ:ಜ್ಞಾನ ಸಂಪತ್ತಿಗಿಂತ ಮಿಗಿಲಾದ ಸಂಪತ್ತಿಲ್ಲ —ಡಾ. ರಾಜು ಕಂಬಾರ 

ಜ್ಞಾನ ಸಂಪತ್ತಿಗಿಂತ ಮಿಗಿಲಾದ ಸಂಪತ್ತಿಲ್ಲ —ಡಾ. ರಾಜು ಕಂಬಾರ

ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಫೆ 17 : ವಿದ್ಯಾರ್ಥಿಗಳಿಗೆ ಜ್ಞಾನ ಸಂಪತ್ತಿಗಿಂತ ಮಿಗಿಲಾದ ಸಂಪತ್ತು ಬೇರೊಂದಿಲ್ಲ. ಜ್ಞಾನದ ಬಲದಿಂದ ಜಗತ್ತಿನ ಅಜ್ಞಾನವನ್ನು ಹೋಗಲಾಡಿಸಿ ಆರೋಗ್ಯಕರ ಸಮಾಜವನ್ನು ನಿರ್ಮಿಸಬೇಕು. ತಮ್ಮ ಮತ್ತು ಇತರ ಬದುಕನ್ನು ಬಂಗಾರವಾಗಿಸಬೇಕೆಂದು ಸಾಹಿತಿ ಡಾ. ರಾಜು ಕಂಬಾರ ಹೇಳಿದರು.
ಸಮೀಪದ ಕೌಜಲಗಿ ಪಟ್ಟಣದ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಮಂಗಳವಾರ ಫೆ 12 ರಂದು ಜರುಗಿದ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದ ಮುಖ್ಯ ಅತಿಥಿಗಳಾಗಿ ಪಿಎಚ್‍ಡಿ ಪಡೆದ ಪ್ರಯುಕ್ತ ಕಾಲೇಜಿನ ಪರವಾಗಿ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಜ್ಞಾನವೆಂಬುದು ಯಾರು ಕಸಿದು ಕೊಳ್ಳಲಾರದ ಅಪೂರ್ವ ಮೌಲಿಕ ಸಂಪತ್ತಾಗಿದೆ ಎಂದರು.
ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಮಹೇಶ ಪಟ್ಟಣಶೆಟ್ಟಿ ಸರಸ್ವತಿ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅತಿಥಿಗಳಾದ ಗ್ರಾಮ ಪಂಚಾಯತ ಅಧ್ಯಕ್ಷ ನೀಲಪ್ಪ ಕೇವಟಿ, ಗ್ರಾ.ಪಂ. ಸದಸ್ಯರಾದ ಜಾಕೀರಸಾಬ ಜಮಾದಾರ, ಅಶೋಕ ಶಿವಾಪೂರ ಮಾತನಾಡಿದರು.
ಪ್ರಾಚಾರ್ಯ ಎಂ.ಕೆ. ಹಾದಿಮನಿ ಅಧ್ಯಕ್ಷತೆ ವಹಿಸಿದ್ದರು. ಕ್ರೀಡಾ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹೇಳಿದರು.
ಬಸವರಾಜ ಜೋಗಿ, ಯಲ್ಲಪ್ಪ ದಾನನ್ನವರ, ಈರಣ್ಣಾ ಹುದ್ದಾರ ಹಾಗೂ ಆಡಳಿತ ಮಂಡಳಿ ಸದಸ್ಯರು, ಉಪನ್ಯಾಸಕ ವೃಂದ, ವಿದ್ಯಾರ್ಥಿಗಳು, ಇತರರು ಉಪಸ್ಥಿತರಿದ್ದರು.

Related posts: