ಗೋಕಾಕ:ಮಾನವನ ಆಚಾರ ವಿಚಾರದಲ್ಲಿ ನೀತಿ ಇದ್ದರೆ ಸುಖದಿಂದ ಬಾಳಬಹುದು : ಶ್ರೀ ಪ್ರದೀಪ ಘಂಟಿ ಮಹಾರಾಜ
ಮಾನವನ ಆಚಾರ ವಿಚಾರದಲ್ಲಿ ನೀತಿ ಇದ್ದರೆ ಸುಖದಿಂದ ಬಾಳಬಹುದು : ಶ್ರೀ ಪ್ರದೀಪ ಘಂಟಿ ಮಹಾರಾಜ
ಗೋಕಾಕ ಅ 17: ಮಾನವನ ನಡೆ-ನುಡಿಯಲ್ಲಿ ಆಚಾರ ವಿಚಾರ, ನೀತಿ ಇದ್ದರೆ ಸುಖದಿಂದ ಬಾಳಬಹುದು ಎಂದು ಹಿಡಕಲ್ಲದ ಶ್ರೀ ಪ್ರದೀಪ ಘಂಟಿ ಮಹಾರಾಜರು ಹೇಳಿದರು.
ಸೋಮವಾರದಂದು ಅವರು ದಿ. 9ರಿಂದ 15ರವರೆಗೆ ನಗರದ ಆದಿತ್ಯ ನಗರದಲ್ಲಿಯ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಏರ್ಪಡಿಸಲಾಗಿದ್ದ ಆಧ್ಯಾತ್ಮಿಕ ಜ್ಞಾನ ಸಪ್ತಾಹ ಪ್ರವಚನ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಸರ್ವೇ ಜನಾ ಸುಖಿನೋಬವಂತು ಎಂಬಂತೆ ಎಲ್ಲರೂ ಪ್ರೇಮ ಸಹಕಾರದಿಂದ ನಡೆದು ಪರೋಪಕಾರಾಯ ಪುಣ್ಯಾಯ ಎನ್ನುವದನ್ನು ಅರಿತರೆ ಸುಖದಿಂದ ಬಾಳಬಹುದು ಅವರು ತಿಳಿಸಿದರು.
ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಮಾರಾಪೂರದ ಶ್ರೀ ಶ್ರೀಮಂತ ಮಹಾರಾಜರು, ಶ್ರೀ ವಿಠ್ಠಲ ಮಹಾರಾಜರು, ಕಾಂತು ಯತ್ತಿನಮನಿ, ಆರ್.ಎಸ್.ಬನಹಟ್ಟಿ, ಪ್ರೊ. ಮಾದಗೌಡ್ರ ಆಗಮಿಸಿದ್ದರು. ಅಧ್ಯಕ್ಷತೆ ಶ್ರೀ ಆಂಜನೇಯ ಟ್ರಸ್ಟ ಅಧ್ಯಕ್ಷ ಕೆಂಚಪ್ಪಗೌಡಪ್ಪಗೋಳ ವಹಿಸಿದ್ದರು.
ಶಿಕ್ಷಕ ಕದಮ ಸ್ವಾಗತಿಸಿದರು. ಶಿಕ್ಷಕ ವೈ.ಎಚ್. ಕುರಬಗಟ್ಟಿ ನಿರೂಪಿಸಿ, ವಂದಿಸಿದರು.