RNI NO. KARKAN/2006/27779|Sunday, August 3, 2025
You are here: Home » breaking news » ಖಾನಾಪುರ:ಕೇಂದ್ರ ಸರ್ಕಾರ ನೋಟ ಬ್ಯಾನ ಕ್ರಮದಿಂದ ಬಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ : ಡಾ.ಅಂಜಲಿ ನಿಂಬಾಳ್ಕರ

ಖಾನಾಪುರ:ಕೇಂದ್ರ ಸರ್ಕಾರ ನೋಟ ಬ್ಯಾನ ಕ್ರಮದಿಂದ ಬಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ : ಡಾ.ಅಂಜಲಿ ನಿಂಬಾಳ್ಕರ 

ಕೇಂದ್ರ ಸರ್ಕಾರ ನೋಟ ಬ್ಯಾನ ಕ್ರಮದಿಂದ ಬಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ : ಡಾ.ಅಂಜಲಿ ನಿಂಬಾಳ್ಕರ

ಖಾನಾಪುರ ನ 9: ಕೇಂದ್ರ ಸರ್ಕಾರ ಕೇವಲ ಮಾತಿನ ಮೋಡಿ ಆಡಿದರೆ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಸಾಧನೆಗಳನ್ನು ಮಾಡಿ ತೋರಿಸಿದೆ ಎಂದು ಬಾಲಭವನ ಅಧ್ಯಕ್ಷ ಡಾ.ಅಂಜಲಿ ನಿಂಬಾಳ್ಕರ ಹೇಳಿದರು. ಅವರು ಕಾಂಗ್ರೆಸ್ ಪಕ್ಷ ವತಿಯಿಂದ ಬುಧವಾರ ನೋಟ ಅಮಾನ್ನೀಕರಣ ವಿರುದ್ಧ ಕಾರಾಳ ದಿನಾಚರಣೆ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡದರು

ಕೇಂದ್ರ ಸರ್ಕಾರ ನೋಟ ಬ್ಯಾನ ಮಾಡಿ ಬಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಶ್ರೀಮತರು ಬ್ಯಾಂಕ ಬಳಿ ಸರತಿಯಲ್ಲಿ ಬಂದು ನಿಂತಿಲ್ಲ, ಬಡವರು ಸರತಿಯಲ್ಲಿ ಬಂದು 113 ಜನ ಪ್ರಾಣ ಕಳೆದು ಕೊಂಡಿದ್ದಾರೆ. ಇದು ಬಿಜೆಪಿ ಸಾಧನೆಯೆ ಎಂದು ಪ್ರಶ್ನಿಸಿದರು. ಬ್ಯಾಂಕನಲ್ಲಿ ಹಳೆಯ ನೋಟು ಶೆ.98 ರಷ್ಟು ಬದಲಾವಣೆಯಾಗಿದ್ದು ಬಂದ ಹಣ ಎಷ್ಟು ಎಂದು ಕೇಂದ್ರ ಸರ್ಕಾರ ನಿಖರವಾಗಿ ಹೇಳುತ್ತಿಲ್ಲ. ಖಾತೆ ತೆರೆದ ಸಾಮಾನ್ಯ ಜನರ ಖಾತೆಗೆ 15 ಲಕ್ಷ ರೂಪಾಯಿ ಜಮೆ ಮಾಡುವದಾಗಿ ಹೇಳಿದ್ದ ಪ್ರಧಾನ ಮತ್ರಿ ಮೋದಿ ಇನ್ನುವರೆ ಒಂದು ರೂಪಾಯಿ ಜಮಾ ಮಾಡಿಲ್ಲ ಎಂದರು.
. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗೋಪಾಳ ನಾಯಿಕ್ ಕೇಂದ್ರ ಸರ್ಕಾರ ಬ್ರಷ್ಟಾಚಾರ ನಿರ್ಮೂಲನೆ ಮಾಡುವದಾಗಿ ಹೇಳಿ ವಿಫಲವಾಗಿದೆ. ವಿದೇಶದಲ್ಲಿಯ ಕಪ್ಪು ಹಣ ತರುವದಾಗಿ ತಿಳಿಸಿ ಅಧಿಕಾರಕ್ಕೆ ಬಂದಿದ್ದರು ಸಾಧನೆ ಮಾತ್ರ ಆಗಿಲ್ಲ ಎಂದು ಟೀಕಿಸಿದರು. ಅರ್ಬನ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಅಂಗಡಿ ನೇತೃತ್ವದಲ್ಲಿ ಜಾಂಬೋಟಿ ವೃತ್ತದಿಂದ ಬೆಳಗ್ಗೆ 12 ಗಂಟೆಗೆ ಪ್ರತಿಭಟನಾ ರ್ಯಾಲಿ ನಡೆಸಿತು.

ಪ್ರತಿಭಟನಾಕಾರರು ಕಾಂಗ್ರೆಸ್ ಪಕ್ಷದ ಧ್ವಜಗಳನ್ನು ಹಿಡಿದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಹಣೆಗೆ ಕಪ್ಪು ಬಟ್ಟೆ ಕಟ್ಟಿ ಕೊಂಡ ಡಾ.ಅಂಜಲಿ ನಿಂಬಾಳ್ಕರ ತಹಸೀಲ್ದಾರ ಕಚೇರಿಗೆ ಆಗಮಿಸಿ ತಹಸೀಲ್ದಾರ ಅವರಿಗೆ ಮನವಿ ಸಲ್ಲಿಸಿದರು. ಈ ಸಂಧರ್ಬದಲ್ಲಿ ಗ್ರಾಮೀಣ ಅಧ್ಯಕ್ಷ ಡಿ.ಕೆ.ಬಸರಿಕಟ್ಟಿ,ಮಹಾದೇವ ಕೋಳಿ,ಭರಮಣ್ಣ ಲಾವಗಿ,ಮಹಾಂತೇಶ ಕೊಡೋಳ್ಳಿ,ಅಭಿಷೇಕ ಹೊಸಮನಿ,ಮಲ್ಲೇಶ ಪೋಳ,ಅದೃಶ್ಯ ಹೊಂಡಪ್ಪಮನವರ ಮುಂತಾದವರು ಉಪಸ್ಥಿತರಿದ್ದರು .

Related posts: