RNI NO. KARKAN/2006/27779|Sunday, February 15, 2026
You are here: Home » breaking news » ಗೋಕಾಕ:ಸೋನು ನಿಗಮ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಕರವೇ ಪ್ರತಿಭಟನೆ

ಗೋಕಾಕ:ಸೋನು ನಿಗಮ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಕರವೇ ಪ್ರತಿಭಟನೆ 

ಸೋನು ನಿಗಮ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಕರವೇ ಪ್ರತಿಭಟನೆ

ಗೋಕಾಕ ಮೇ 5 : ಗಾಯಕ ಸೋನು ನಿಗಮ್ ಹೇಳಿಕೆಯನ್ನು ಖಂಡಿಸಿ ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸೋಮವಾರದಂದು ಸೋನು ನಿಗಮ ಭಾವಚಿತ್ರವನ್ನು ಸುಟ್ಟು ಪ್ರತಿಭಟಿಸಲಾಯಿತು.
ನಗರದ ವಾಲ್ಮೀಕಿ ವೃತ್ತದಲ್ಲಿ ಸೇರಿದ ಕರವೇ ಕಾರ್ಯಕರ್ತರು ಸೋನು ನಿಗಮ ವಿರುದ್ದ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ಕನ್ನಡಿಗರ ಕನ್ನಡಾಭಿಮಾನವನ್ನು ಪಹಲ್ಗಾಮ್‌ ಉಗ್ರರ ದಾಳಿಗೆ ಹೋಲಿಸಿ ಅವಹೇಳನಕಾರಿಯಾಗಿ ಮಾತನಾಡಿದ ಗಾಯಕ ಸೋನು ನಿಗಮ್‌ ಈ ಕೂಡಲೇ ಕನ್ನಡಿಗರ ಕ್ಷಮೆ ಕೇಳಬೇಕು. ಕನ್ನಡಿಗರಿಂದಲೇ, ಕನ್ನಡ ಹಾಡುಗಳನ್ನು ಹಾಡುವ ಮೂಲಕ ಇಷ್ಟೊಂದು ಪ್ರಸಿದ್ಧ ಪಡೆದಿರುವ ಸೋನು ನಿಗಮ್ ಈ ರೀತಿ ಬೇಜವಾಬ್ದಾರಿಯುತ ಹೇಳಿಕೆ ನೀಡಿರುವುದು ತರವಲ್ಲ. ಮುಂದೆ ಕರ್ನಾಟಕದಲ್ಲಿ ಗಾಯಕ ಸೋನು ನಿಗಮ್ ಗೆ ನಿರ್ಬಂಧ ಹೇರಿಬೇಕು. ರಾಜ್ಯದ ಯಾವುದೇ ಮೂಲೆಯಲ್ಲಿ ಸೋನು ನಿಗಮ್ ಕಾರ್ಯಕ್ರಮವನ್ನು ನಡೆಯಲು ಬಿಡುವುದಿಲ್ಲ ಆತನ ಕಾರ್ಯಕ್ರಮದಲ್ಲಿ ನಮ್ಮ ಕರವೇ ಕಾರ್ಯಕರ್ತರು ನುಗ್ಗಲಿದ್ದಾರೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಾದಿಕ ಹಲ್ಯಾಳ, ಮಹಾದೇವ ಮಕ್ಕಳಗೇರಿ, ಹನಿಫ ಸನದಿ, ಮಲ್ಲು ಸಂಪಗಾರ, ಕೆಂಪಣ್ಣ ಕಡಕೋಳ, ಶಾಂತಿನಾಥ್ ಹುಳ್ಳಿ, ರಾಜು ಕೆಂಚಣಗುಡ್ಡ, ಶ್ರೀಶೈಲ ಕುಂಬಾರ, ಮಂಜುನಾಥ್ ಪ್ರಭುನಟ್ಟಿ, ಮಲ್ಲಪ್ಪ ತಲೆಪ್ಪಗೋಳ, ಅಬ್ಬು ಮುಜಾವರ, ಸಾಕಿಬ ಕೌತವಾಲ, ಕಾಡಪ್ಪ ಸುಣಗಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: