RNI NO. KARKAN/2006/27779|Sunday, May 10, 2026
You are here: Home » breaking news » ಗೋಕಾಕ:ಅಧ್ಯಕ್ಷರಾಗಿ ಬಸವರಾಜ ,ಉಪಾಧ್ಯಕ್ಷರಾಗಿ ಅಂಕಲಿ ಅವಿರೋಧ ಆಯ್ಕೆ

ಗೋಕಾಕ:ಅಧ್ಯಕ್ಷರಾಗಿ ಬಸವರಾಜ ,ಉಪಾಧ್ಯಕ್ಷರಾಗಿ ಅಂಕಲಿ ಅವಿರೋಧ ಆಯ್ಕೆ 

ಅಧ್ಯಕ್ಷರಾಗಿ ಬಸವರಾಜ ,ಉಪಾಧ್ಯಕ್ಷರಾಗಿ ಅಂಕಲಿ ಅವಿರೋಧ ಆಯ್ಕೆ

 

ಗೋಕಾಕ ಅ 14 : ಕಳೆದ ದಿ. 30 ರಂದು ನಡೆದ ಇಲ್ಲಿನ ಅರ್ಬನ್ ಬ್ಯಾಂಕ್ ಕೋ-ಆಫ್ ಕ್ರೆಡಿಟ್ ಸೊಸೈಟಿಯ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಸವರಾಜ ಕಲ್ಯಾಣಶೆಟ್ಟಿ ಅವರು 3 ನೇ ಬಾರಿ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಸುಧೀರ ಅಂಕಲಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸೋಮವಾರದಂದು ಬ್ಯಾಂಕಿನ ಸಭಾಂಗಣದಲ್ಲಿ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಗೆ ತಲಾ ಒಂದೊಂದು ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಅಧ್ಯಕ್ಷರಾಗಿ ಬಸವರಾಜ ಕಲ್ಯಾಣಶೆಟ್ಟಿ ಹಾಗೂ ಉಪಾಧ್ಯಕ್ಷರಾಗಿ ಸುಧೀರ ಅಂಕಲಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ರಿಟರ್ನಿಂಗ್ ಆಫೀಸರ್ ಗೋಕಾಕ ಸಹಕಾರಿ ಅಭಿವೃದ್ಧಿ ಅಧಿಕಾರಿ ಬಿ.ಕೆ.ಗೋಖಲೆ ಅವರು ಘೋಷಿಸಿದ್ದಾರೆ. ಈ ಸಂದರ್ಭದಲ್ಲಿ ಸರ್ವ ನಿರ್ದೇಶಕರು ಮತ್ತು ವ್ಯವಸ್ಥಾಪಕರು ಹಾಜರಿದ್ದರು.

Related posts: