RNI NO. KARKAN/2006/27779|Sunday, February 15, 2026
You are here: Home » breaking news » ಗೋಕಾಕ:ಶಾಸಕ ರಮೇಶ ಜಾರಕಿಹೊಳಿ ಅಭಿವೃದ್ಧಿ ಕಾರ್ಯ ಮೆಚ್ಚಿ ಬಿಜೆಪಿ ಸೇರ್ಪಡೆ

ಗೋಕಾಕ:ಶಾಸಕ ರಮೇಶ ಜಾರಕಿಹೊಳಿ ಅಭಿವೃದ್ಧಿ ಕಾರ್ಯ ಮೆಚ್ಚಿ ಬಿಜೆಪಿ ಸೇರ್ಪಡೆ 

ಶಾಸಕ ರಮೇಶ ಜಾರಕಿಹೊಳಿ ಅಭಿವೃದ್ಧಿ ಕಾರ್ಯ ಮೆಚ್ಚಿ ಬಿಜೆಪಿ ಸೇರ್ಪಡೆ

ಗೋಕಾಕ ಏ 27 : ಗೋಕಾಕ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ರಮೇಶ ಜಾರಕಿಹೊಳಿ ಅಭಿವೃದ್ಧಿ ಕಾರ್ಯಗಳನ್ನು ಬೆಂಬಲಿಸಿ ಇಲ್ಲಿಯ ಕಾಂಗ್ರೇಸ್ ಇಂಟೇಕ ಬ್ಯಾಕ್ ಅಧ್ಯಕ್ಷ ಮದರಸಾಹೇಬ ಕಾಲಿಬಾಯಿ ತಮ್ಮ 40ಜನ ಕಾರ್ಯಕರ್ತರೊಂದಿಗೆ ಗುರುವಾರದಂದು ನಗರದ ಬಿಜೆಪಿ ಕಾರ್ಯಾಲಯದಲ್ಲಿ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರ ಸಮ್ಮುಖದಲ್ಲಿ ಬಿಜೆಪಿ ಪಕ್ಷವನ್ನು ಸೇರಿದರು.
ಈ ಸಂದರ್ಭದಲ್ಲಿ ತಾಕೀರ ಜಮಾದಾರ, ಸಾದೀಕ ಸನದಿ, ಮಹ್ಮದ ಕಾಲಾ, ಇರ್ಫಾನ ಕಾಲಿಬಾಯಿ, ಫಯಾಜ ತಳವಾರ, ನವಾಜ, ಅನೀಸ ಜಮಾದಾರ, ಇಮ್ರಾನ ಮುಜಾವರ, ಅತ್ತಾವುಲ್ಲ ಹುಕ್ಕೇರಿ, ಸಮೀವುಲ್ಲಾ ಜಮಾದಾರ, ಮಂಜು ಕಣವಾಡ, ಫಾರೂಕ ಅಂಕಲಗಿ, ಇಮ್ರಾನ ಅಂಕಲಗಿ, ಮಹ್ಮದ ಜಮಾದಾರ ಸೇರಿದಂತೆ ಅನೇಕರು ಬಿಜೆಪಿ ಪಕ್ಷ ಸೇರಿದರು.
ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳ, ಯುವ ಮೋರ್ಚಾ ಅಧ್ಯಕ್ಷ ಮಂಜುನಾಥ ಪ್ರಭುನಟ್ಟಿ ಸೇರಿದಂತೆ ಬಿಜೆಪಿ ಪದಾಧಿಕಾರಿಗಳು ಇದ್ದರು.

Related posts: