RNI NO. KARKAN/2006/27779|Friday, August 1, 2025
You are here: Home » breaking news » ಗೋಕಾಕ:ಸಮಾಜ ಸೇವೆಯೊಂದಿಗೆ ಯುವ ಸಮೂಹದಲ್ಲಿ ಮಾನವೀಯ ಮೌಲ್ಯಗಳನ್ನು ವೃದ್ದಿಸಿ : ವೆಂಕಟೇಶ್ ದೇಶಪಾಂಡೆ

ಗೋಕಾಕ:ಸಮಾಜ ಸೇವೆಯೊಂದಿಗೆ ಯುವ ಸಮೂಹದಲ್ಲಿ ಮಾನವೀಯ ಮೌಲ್ಯಗಳನ್ನು ವೃದ್ದಿಸಿ : ವೆಂಕಟೇಶ್ ದೇಶಪಾಂಡೆ 

ಸಮಾಜ ಸೇವೆಯೊಂದಿಗೆ ಯುವ ಸಮೂಹದಲ್ಲಿ ಮಾನವೀಯ ಮೌಲ್ಯಗಳನ್ನು ವೃದ್ದಿಸಿ : ವೆಂಕಟೇಶ್ ದೇಶಪಾಂಡೆ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 15 :

 
ಸಮಾಜ ಸೇವೆಯೊಂದಿಗೆ ಯುವ ಸಮೂಹದಲ್ಲಿ ಮಾನವೀಯ ಮೌಲ್ಯಗಳನ್ನು ವೃದ್ದಿಸಿ ಅವರನ್ನು ಉತ್ತಮ ನಾಗರಿಕರನ್ನಾಗಿಸಲು ರೋಟರಿ ಸಂಸ್ಥೆ ಶ್ರಮಿಸುತ್ತಿದೆ ಎಂದು ಜಿಲ್ಲಾ ರೋಟರಿ ಪ್ರಾಂಥಪಾಲ ವೆಂಕಟೇಶ್ ದೇಶಪಾಂಡೆ ಹೇಳಿದರು.

ಮಂಗಳವಾರದಂದು ನಗರದ ರೋಟರಿ ರಕ್ತ ಭಂಡಾರ ಸಭಾಂಗಣದಲ್ಲಿ ಇಲ್ಲಿನ ರೋಟರಿ ಸಂಸ್ಥೆಯವರ ಸಹಯೋಗತ್ವದಲ್ಲಿ ನೂತನವಾಗಿ ಪ್ರಾರಂಭಿಸಲಾದ ರೋಟ್ರ್ಯಾಕ್ಟ ಮತ್ತು ಇಂಟ್ರ್ಯಾಕ್ಟ ಸಂಸ್ಥೆಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ರೋಟರಿ ಸಂಸ್ಥೆ 117 ವರ್ಷಗಳಿಂದ ನಿರಂತರವಾಗಿ ಜಗತ್ತಿನಾದ್ಯಂತ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಮಾದರಿಯಾಗಿ ಮಾಡುತ್ತಿದ್ದೆ ಇಂತಹ ಸಂಸ್ಥೆಯ ಸದಸ್ಯರಾಗುತ್ತಿರುವದು ಹೆಮ್ಮೆಯ ವಿಷಯ ವೆಂದರು.
ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರವನ್ನು ಪಡೆಯಿರಿ ಇಂತಹ ಸಂಸ್ಥೆಗಳಲ್ಲೂ ಪಾಲ್ಗೊಂಡು ತಮ್ಮಲ್ಲಿರುವ ಪ್ರತಿಭೆಗಳನ್ನು ಬೆಳೆಸುವ ಮೂಲಕ ನಾಯಕತ್ವ ಗುಣಗಳನ್ನು ಕಲಿತುಕೋಳ್ಳಿ , ಸಮಾಜ ಸೇವೆಯ ಮನೋಭಾವವನ್ನು ಬೆಳಿಸಿಕೋಳ್ಳಿ ,ವಿದ್ಯಾರ್ಥಿ ಜೀವನ ಅತ್ಯಂತ ಮಹತ್ವದಾಗಿದ್ದು, ಕಠಿಣ ಪರಿಶ್ರಮದಿಂದ ಅದನ್ನು ಸಾರ್ಥಕ ಪಡಿಸಿಕೊಳ್ಳುವಂತೆ ಕರೆ ನೀಡಿದರು.

ವೇದಿಕೆಯ ಮೇಲೆ ಸಹಾಯ ಜಿಲ್ಲಾ ಪ್ರಾಂಥಪಾಲ ದಿನೇಶ್ ಕಾಳೆ, ಇಂಟ್ರ್ಯಾಕ್ಟ ಜಿಲ್ಲಾ ಚೇರಮನ್ ಗೌರಿ ಹಿರೇಮಠ, ದೀಪಕ್ ಪಾಟೀಲ, ಶ್ರೀಕಾಂತ್ ಅಥಣಿ, ಗೋಕಾಕ ರೋಟರಿ ಸಂಸ್ಥೆಯ ಅಧ್ಯಕ್ಷ ಗಣೇಶ್ ವರದಾಯಿ, ಕಾರ್ಯದರ್ಶಿ ದಿಲೀಪ್ ಮೆಳವಂಕಿ, ಸೋಮಶೇಖರ್ ಮಗದುಮ್ಮ, ರೋಟ್ರ್ಯಾಕ್ಟ ಅಧ್ಯಕ್ಷ ವಿಜಯಕುಮಾರ ದುಳಾಯಿ, ಇಂಟ್ರ್ಯಾಕ್ಟ ಕ್ಲಬ್ ಅಧ್ಯಕ್ಷರುಗಳಾದ ಮಹಾರುದ್ರಯ್ಯ ಸುಬ್ಬಾಪುರಮಠ, ಪ್ರಣವ್ ಪಾಟೀಲ ಇದ್ದರು.
ಜಗದೀಶ್ ಚುನಮರಿ ಸ್ವಾಗತಿಸಿದರು, ಚೇತನ್ ದುಳಾಯಿ ನಿರೂಪಿಸಿದರು, ಜ್ಯೋತಿ ವರದಾಯಿ ವಂದಿಸಿದರು.

Related posts: