ಗೋಕಾಕ:ಸಂವಿಧಾನ ನಮಗೆ ಮೂಲಭೂತ ಹಕ್ಕುಗಳನ್ನು ಕೊಟ್ಟಿದೆ.: ಕೆ.ಬಿ.ಚಂದ್ರಶೇಖರ್

ಸಂವಿಧಾನ ನಮಗೆ ಮೂಲಭೂತ ಹಕ್ಕುಗಳನ್ನು ಕೊಟ್ಟಿದೆ.: ಕೆ.ಬಿ.ಚಂದ್ರಶೇಖರ್
ಗೋಕಾಕ ಜ 27 : ಸಂವಿಧಾನ ನಮಗೆ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದ್ದು, ಅವುಗಳನ್ನು ಸಮಾನವಾಗಿ ನಿಭಾಯಿಸಬೇಕು ಎಂದು ಲೋಕೋಪಯೋಗಿ ಸಹಾಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಬಿ.ಚಂದ್ರಶೇಖರ್ ಹೇಳಿದರು
ಗುರುವಾರದಂದು ನಗರದ ಕೆಎಲ್ಇ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಅವರು 74ನೇ ಗಣರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಂಡ ಜಾಗೃತ ಭಾರತ ಸೈನಿಕರಿಗೆ ಒಂದು ಸಲಾಂ ಸಂಗೀತ ಸಮಾರಂಭದಲ್ಲಿ ಮುಖ್ಯ ಅತಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಇತಿಹಾಸ ತಿಳಿಯದವನ್ನು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ. ಸಂವಿಧಾನ ನಮಗೆ ಮೂಲಭೂತ ಹಕ್ಕುಗಳನ್ನು ಕೊಟ್ಟಿದೆ. ಆದರೆ ಮೂಲಭೂತ ಕರ್ತವ್ಯವನ್ನು ನಾವು ಮರೆತ್ತಿದ್ದೇವೆ ಇದು ನಮ್ಮ ದೇಶದ ದುರಂತ. ಇತಿಹಾಸ ಮನುಷ್ಯನಿಗೆ ಪ್ರಜ್ಜಾವಂತರನ್ನಾಗಿ ಮಾಡುತ್ತದೆ. ಇತಿಹಾಸ ತಿಳಿಯದಿದ್ದರೆ.ಕತ್ತಲೆಯಲ್ಲಿ ನಾವು ಬದುಕುಬೇಕಾಗುತ್ತದೆ. ಆದರಿಂದ ಪ್ರತಿಯೊಬ್ಬರು ಇತಿಹಾಸವನ್ನು ತಿಳಿಯಬೇಕು.
ಜಗತ್ತಿನಲ್ಲೇ ಶ್ರೇಷ್ಠವಾದ ಸಂವಿಧಾನ ನಮ್ಮದಾಗಿದೆ. ವಿವಿಧತೆಗಳಲ್ಲಿ ಏಕತೆ ಸಾರುವ ಭಾವನೆಗಳಿರುವ ನಮ್ಮ ದೇಶಕ್ಕೆ ಬಾಬಸಾಹೇಬ ಅಂಬೇಡ್ಕರ್ ಅವರು ಸಮಾನತೆಯ ಸಂವಿಧಾನವನ್ನು ನೀಡಿದ್ದಾರೆ. ಸಂವಿದಾನದ ಜ್ಞಾನವನ್ನು ಎಲ್ಲರೂ ಅರಿತು ಅದನ್ನು ಆಚರಣೆಗೆ ತಂದರೆ ಗಣರಾಜ್ಯೋತ್ಸವ ಆಚರಣೆಗೆ ಅರ್ಥ ಬರುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನಿವೃತ್ತ ಯೋಧರನ್ನು ಸತ್ಕರಿಸಿ, ಗೌರವಿಸಲಾಯಿತು.
ಕಾರ್ಯಕ್ರಮವನ್ನು ಕೆಎಲ್ಇ ನಿರ್ದೇಶಕ ಜಯಾನಂದ ಮುನವಳ್ಳಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಡಾ.ಮಹಾಂತೇಶ ಕಡಾಡಿ, ಡಾ.ರಮೇಶ ಪಟ್ಟಗುಂಡಿ, ಮಹಾಂತೇಶ ತಾವಂಶಿ, ಎಂ.ಡಿ.ಚುನಮರಿ, ಸದಾಶಿವ ಗುದಗಗೋಳ, ಮಾಲತಿಶ್ರೀ, ಬಸವರಾಜ ಹುಳ್ಳೇರ, ರಜನಿ ಜಿರಗ್ಯಾಳ, ಸುಷ್ಮೀತಾ ಭಟ್, ರಾಮಚಂದ್ರ ಕಾಕಡೆ, ನಾರಾಯಣ ಮಠಾಧೀಕಾರಿ, ಸಮರ್ಥ ಕಾಸಮೀಸ, ಈಶ್ವರ ಚಂದ್ರ ಬೆಟಗೇರಿ, ಅಶೋಕ ಲಗಮಪ್ಪಗೋಳ, ಜೂನಿಯರ್ ಪುನೀತ್ ರಾಜಕುಮಾರ್, ಎಸ್.ಆರ್.ಮನ್ನಿಕೇರಿ, ಅಪ್ಪಸಾಬ ಗಿರೆಣ್ಣವರ, ಅರ್ಜುನ್ ಸಾಳಿ, ಭೀಮಪ್ಪ ಮಾಯನ್ನವರ, ವಿಜಯ ಜಂತಿ, ಚಿನ್ನಪ್ಪ ಹುದಲಿ, ಮಾರುತಿ ಹುಡ್ಡೇದ ಉಪಸ್ಥಿತರಿದ್ದರು .