ಗೋಕಾಕ:ಗ್ರಂಥಾಲಯಗಳು ಮಕ್ಕಳ ಉಜ್ವಲ ಭವಿಷ್ಯಕ್ಕೆ ದಾರಿ : ಲಕ್ಷ್ಮಣ ನಿಲನ್ನವರ
ಗ್ರಂಥಾಲಯಗಳು ಮಕ್ಕಳ ಉಜ್ವಲ ಭವಿಷ್ಯಕ್ಕೆ ದಾರಿ : ಲಕ್ಷ್ಮಣ ನಿಲನ್ನವರ
ಬೆಟಗೇರಿ ನ 14 : ಗ್ರಾಮ ಪಂಚಾಯತಿಯ ಗ್ರಂಥಾಲಯಗಳು ಮಕ್ಕಳ ಕಲಿಕೆಗೆ ಆಶಾಕಿರಣವಾಗುವ ಮೂಲಕ ಮಕ್ಕಳ ಉಜ್ವಲ ಭವಿಷ್ಯಕ್ಕೆ ದಾರಿ ದೀಪವಾಗುವ ಉದ್ದೇಶದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆ ಓದುವ ಬೆಳಕು ಕಾರ್ಯಕ್ರಮ ಅನುಷ್ಠಾನಕ್ಕೆ ತರಲು ಮುಂದಾಗಿದೆ ಎಂದು ಬೆಟಗೇರಿ ತಾಪಂ ಸದಸ್ಯ ಲಕ್ಷ್ಮಣ ನಿಲನ್ನವರ ಹೇಳಿದರು.
ಗೋಕಾಕ ತಾಲೂಕಾ ಪಂಚಾಯತಿ ಮತ್ತು ಬೆಟಗೇರಿ ಗ್ರಾಮ ಪಂಚಾಯತಿ ಹಾಗೂ ಗ್ರಾಮ ಪಂಚಾಯತಿ ಗ್ರಂಥಾಲಯದ ಸಹಯೋಗದಲ್ಲಿ ಶನಿವಾರ ನ.14ರಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಪಂ ಕಾರ್ಯಾಲಯದಲ್ಲಿ ಆಯೋಜಿಸಿದ ಸ್ಥಳೀಯ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮ ಪಂಚಾಯತಿ ಗ್ರಂಥಾಲಯಗಳಲ್ಲಿ ಓದುವ ಬೆಳಕು ಅನುಷ್ಠಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಗ್ರಾಪಂ ಮಾಜಿ ಅಧ್ಯಕ್ಷ ಈಶ್ವರ ಬಳಿಗಾರ ಅವರು ಮಕ್ಕಳಿಗೆ ಪುಸ್ತಕ ಹಾಗೂ ಸಿಹಿ ವಿತರಿಸಿ ಮಕ್ಕಳಿಗಾಗಿ ಓದುವ ಬೆಳಕು ಅನುಷ್ಠಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ಥಳೀಯ ಗ್ರಾಪಂ ಗ್ರಂಥಾಲಯದ ಮೇಲ್ವಿಚಾರಕ ಬಸವರಾಜ ಪಣದಿ ಓದುವ ಬೆಳಕು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಗಳ ಮುಖ್ಯ ಶಿಕ್ಷಕರಾರ ವೈ.ಸಿ.ಶೀಗಿಹಳ್ಳಿ, ಪಿಡಿಒ ಎಚ್.ಎನ್.ಬಾವಿಕಟ್ಟಿ, ಗೌಡಪ್ಪ ಮಾಳೇದ, ಮಲ್ಲಪ್ಪ ಪಣದಿ, ಸುರೇಶ ಬಾಣಸಿ, ವಿಠಲ ಚಂದರಗಿ, ಈರಣ್ಣ ದಂಡಿನ, ಶಿವಾನಂದ ಐದುಡ್ಡಿ, ಮಂಜು ಕಂಬಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಗ್ರಾಪಂ ಸಿಬ್ಬಂದಿ, ಗಣ್ಯರು, ಶಿಕ್ಷಣ ಪ್ರೇಮಿಗಳು, ಮಕ್ಕಳು ಇದ್ದರು.