RNI NO. KARKAN/2006/27779|Thursday, October 16, 2025
You are here: Home » breaking news » ಗೋಕಾಕ:ತಾಲೂಕಿನ 32 ಗ್ರಾಮ ಪಂಚಾಯಿತಿಗಳಲ್ಲಿ ಶಾಂತಿಯುತ ಮತದಾನ

ಗೋಕಾಕ:ತಾಲೂಕಿನ 32 ಗ್ರಾಮ ಪಂಚಾಯಿತಿಗಳಲ್ಲಿ ಶಾಂತಿಯುತ ಮತದಾನ 

ತಾಲೂಕಿನ 32 ಗ್ರಾಮ ಪಂಚಾಯಿತಿಗಳಲ್ಲಿ ಶಾಂತಿಯುತ ಮತದಾನ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 22 :

 
ತಾಲೂಕಿನ 32 ಗ್ರಾಮ ಪಂಚಾಯಿತಿಗಳಲ್ಲಿ ಶಾಂತಿಯುತ ಮತದಾನ ನಡೆದಿದೆ. ಯಾವುದೇ ತೊಂದರೆ, ಅಹಿತಕರ ಘಟನೆ ನಡೆದಿಲ್ಲ. ಕೆಲ ಮತಗಟ್ಟೆಗಳಲ್ಲಿ ಮತದಾರರು ಸಾಲಾಗಿ ನಿಂತುಕೊಳ್ಳಲು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅಂತರದ ಗುರುತು ಹಾಕಲಾಗಿತು.
ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನ್ನಿಂಗ್ (ಜ್ವರ ತಪಾಸಣೆ) ವ್ಯವಸ್ಥೆ ಮಾಡಲಾಗಿತ್ತು. ಅಲ್ಲಲಿ ಮತದಾರರು ಮಾಸ್ಕ್ ಧರಿಸದಿರುವುದು ಕಂಡು ಬಂತು. ಮಧ್ಯಾಹ್ನ 2 ಗಂಟೆವರೆಗೆ ಶೇ 48 ರಷ್ಟು ಮತದಾನವಾಗಿದ್ದು, ಕೆಲ ಮತಗಟ್ಟೆಯಲ್ಲಿ ಶೇ 50 ರಷ್ಟು ಮತದಾನವಾಗಿದೆ.
ಅನಾರೋಗ್ಯದ ನಡುವೆಯು ಸಹ ಮತದಾನ ಕೇಂದ್ರಕ್ಕೆ ಬಂದ 70ರ ವೃದ್ದ ಪಂಚಾಯಿತಿ ಸಿಬ್ಬಂದಿಯ ಸಹಾಯದಿಂದ ವ್ಹೀಲ್‍ಚೇರ ಮೇಲೆ ಬಂದು ಮತ ಚಲಾಯಿಸಿ ಗಮನ ಸೆಳೆದರು.
ಮುಂಜಾನೆಯಿಂದಲೇ ಚಳಿಯನ್ನು ಲೆಕ್ಕಿಸದೇ ಮತದಾನ ಕೇಂದ್ರದತ್ತ ಧಾವಿಸಿದ ಮತದಾರರು ಉತ್ಸಾಹದಿಂದ ಮತದಾನ ಮಾಡಿದರು, ಮಧ್ಯಾಹ್ನದ ವೇಳೆಗೆ ಈ ಉತ್ಸಾಹ ತುಸು ಹೆಚ್ಚಾಗಿ ಕಂಡು ಬಂದಿತು. ಅಭ್ಯರ್ಥಿಗಳು ಮತದಾನ ಕೇಂದ್ರದ ಸುತ್ತಮುತ್ತ ಮತದಾರ ಮನವೋಲಿಸಲು ಮತ ಕೇಳುವ ಕ್ರೀಯೆ ಸಾಮಾನ್ಯವಾಗಿತ್ತು. ಕೆಲವೊಂದು ಮತದಾರರ ಹೆಸರು ಮತದಾರ ಯಾದಿಯಲ್ಲಿ ಬಿಟ್ಟು ಹೋಗಿದ್ದರಿಂದ ಬಂದ ದಾರಿಗೆ ಸುಂಕವಿಲ್ಲ ಎನ್ನುತಾ ಚುನಾವಣೆ ಇಲಾಖೆಯನ್ನು ದೂಷಿಸುತ್ತಾ ಸಾಗಿದರು. ಪರ ಊರಿನಲ್ಲಿದ್ದ ಹಾಗೂ ತೋಟಪಟ್ಟಿಗಳಲ್ಲಿದ್ದ ಮತದಾರರನ್ನು ವಾಹನಗಳಲ್ಲಿ ಕರೆ ತರುವ ಕಾರ್ಯ ಸರ್ವೆ ಸಾಮಾನ್ಯವಾಗಿತ್ತು.
ಚುನಾವಣೆ ನಡೆಯುತ್ತಿರುವ ತಾಲ್ಲೂಕಿನ ಲೋಳಸೂರ ಗ್ರಾಮ ಸರ್ಕಾರಿ ಶಾಲೆಯ ಮತಗಟ್ಟೆಗೆ ಮಾದರಿ ನೀತಿ ಸಂಹಿತೆ ಚುನಾವಣಾಧಿಕಾರಿಯೂ ಆಗಿರುವ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಕ ಅವರು ಭೇಟಿ ನೀಡಿ ಪರಿಶೀಲಿಸಿದರು. ಚುನಾವಣಾ ಅಕ್ರಮಕ್ಕೆ ಅವಕಾಶ ನೀಡಬಾರದು. ಕೋವಿಡ್ ಭೀತಿ ಇರುವುದರಿಂದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಅಂತರ ಕಾಯ್ದುಕೊಳ್ಳಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು.
ತಾಲೂಕಿನ ಒಟ್ಟು 32 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆದಿದ್ದು, 544 ಸ್ಥಾನಗಳಿಗೆ ಒಟ್ಟು 1554 ಅಭ್ಯರ್ಥಿಗಳು ಸ್ವರ್ಧಿಸಿದ್ದಾರೆ. ಎಲ್ಲ ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಬದ್ರವಾಗಿದ್ದೆ. ಒಟ್ಟಾರೆ ತಾಲೂಕಿನಲ್ಲಿ ಸ್ಥಾಪಿಸಲಾಗಿದ್ದ ಎಲ್ಲ 283 ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ ಜರುಗಿದ್ದು ಶೇಕಡಾ 70%ರಷ್ಟು ಮತದಾನವಾಗಿದೆ ಎಂದು ತಿಳಿದು ಬಂದಿದೆ.

Related posts: