RNI NO. KARKAN/2006/27779|Monday, June 29, 2026
You are here: Home » breaking news » ಗೋಕಾಕ:ನಿರ್ಗತಿಕರಿಗೆ ಸಹಾಯ ಮಾಡುತ್ತಿರುವ ಬೀಗ್ ಬಾಸ್ ಖ್ಯಾತಿಯ ಚಿತ್ರನಟ ಪ್ರಥಮಗೆ ಸಹಾಯ ಹಸ್ತ ನೀಡಿ ಸತನ ಮತ್ತು ಸರ್ವೋತ್ತಮ ಜಾರಕಿಹೊಳಿ

ಗೋಕಾಕ:ನಿರ್ಗತಿಕರಿಗೆ ಸಹಾಯ ಮಾಡುತ್ತಿರುವ ಬೀಗ್ ಬಾಸ್ ಖ್ಯಾತಿಯ ಚಿತ್ರನಟ ಪ್ರಥಮಗೆ ಸಹಾಯ ಹಸ್ತ ನೀಡಿ ಸತನ ಮತ್ತು ಸರ್ವೋತ್ತಮ ಜಾರಕಿಹೊಳಿ 

ನಿರ್ಗತಿಕರಿಗೆ ಸಹಾಯ ಮಾಡುತ್ತಿರುವ ಬೀಗ್ ಬಾಸ್ ಖ್ಯಾತಿಯ ಚಿತ್ರನಟ ಪ್ರಥಮಗೆ ಸಹಾಯ ಹಸ್ತ ನೀಡಿ ಸತನ ಮತ್ತು ಸರ್ವೋತ್ತಮ ಜಾರಕಿಹೊಳಿ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಎ 20 :

 

 

 
ಲಾಕಡೌನ ಸಂದರ್ಭದಲ್ಲಿ ನಿರ್ಗತಿಕರಿಗೆ , ಕಡುಬಡವರಿಗೆ ದಿನಸಿ ವಸ್ತುಗಳನ್ನು ನೀಡುತ್ತಿರುವ ಬೀಗ್ ಬಾಸ್ ಖ್ಯಾತಿಯ ಚಿತ್ರನಟ ಪ್ರಥಮ ಅವರಿಗೆ ಇಲ್ಲಿನ ಲಕ್ಷ್ಮೀ ಎಜುಕೇಶನ್ ಟ್ರಸ್ಟ್ ನ ಸನತ ಹಾಗೂ ಸರ್ವೋತ್ತಮ ಜಾರಕಿಹೊಳಿ ಅವರು ಸಹಾಯ ಧನ ನೀಡಿದ್ದಾರೆ

ಈ ಕುರಿತು ಪ್ರತಿಕ್ರಿಯಿಸಿರುವ ಅವರು ಕಳೆದ ಒಂದು ತಿಂಗಳಿನಿಂದ ಮಹಾಮಾರಿ ಕೊರೋನಾ ಹರಡದಂತೆ ತಡೆಯಲು ದೇಶಾದ್ಯಂತ ಲಾಕಡೌನ ಜಾರಿಯಲ್ಲಿದೆ . ದಿನಗೂಲಿ ನೌಕರರು , ಕಾರ್ಮಿಕರರು , ಕೂಲಿ ಕಾರ್ಮಿಕರು , ನಿರ್ಗತಿಕರಿಗೆ ಈ ಲಾಕಡೌನದಿಂದ ಜೀವನ ಸಾಗಿಸೋದು ಕಷ್ಟವಾಗುತ್ತಿದೆ ಅದನ್ನು ಅರಿತು ಚಿತ್ರನಟರಾಗಿರುವ ಆತ್ಮೀಯ ಗೆಳೆಯ ಪ್ರಥಮ ಅವರು ಕಡುಬಡವರಿಗೆ , ನಿರ್ಗತಿಕರಿಗೆ ಗುರುತಿಸಿ ಸಹಾಯ ಮಾಡುತ್ತಿದ್ದಾರೆ ಅವರ ಕಾರ್ಯಕ್ಕೆ ಸಹಾಯವಾಗಲಿ ಎಂದು ನಮ್ಮಿಂದ ಅಲ್ಪ ಸಹಾಯ ಮಾಡಲಾಗಿದೆ. ತಾಲೂಕಿನಲ್ಲಿಯೂ ಸಹ ನಮ್ಮ ಸಂಸ್ಥೆಯಿಂದ ಈ ಕಾರ್ಯ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ

Related posts: