ಚಿಕ್ಕೋಡಿ:ಶಾಲೆ ಪ್ರಾರಂಭಿಸದ ಮೂವರು ಶಿಕ್ಷಕರು ಅಮಾನತು : ಡಿಡಿಪಿಐ ಗಜಾನನ ಮನ್ನಿಕೇರಿ ಆದೇಶ
ಶಾಲೆ ಪ್ರಾರಂಭಿಸದ ಮೂವರು ಶಿಕ್ಷಕರು ಅಮಾನತು : ಡಿಡಿಪಿಐ ಗಜಾನನ ಮನ್ನಿಕೇರಿ ಆದೇಶ
ಚಿಕ್ಕೋಡಿ ಜೂ 3: ಇಲಾಖೆಯ ನಿಯಮದಂತೆ ದಿ 29 ರಂದು ಶಾಲೆ ಪ್ರಾರಂಭ ಮಾಡದಿರುವುದರಿಂದ ಚಿಕ್ಕೋಡಿ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಮೂವರು ಶಿಕ್ಷಕರನ್ನು ಅಮಾನತು ಮಾಡಿ ಡಿಡಿಪಿಐ ಗಜಾನನ ಮನ್ನಿಕೇರಿ ಆದೇಶ ಹೋರಡಿಸಿದ್ದಾರಲದೆ ನಾಲ್ಕು ಶಿಕ್ಷಕರಿಗೆ ಕಾರಣ ಕೇಳಿ ನೋಟಿಸ ಜಾರಿ ಮಾಡಿದ್ದಾರೆ
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಜಕಾರಟ್ಟಿಯ ಮರಾಠಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಟಿಕೆ ಚೌಗುಲಾ, ಕಿರಿಯ ಕನ್ನಡ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಕೆ.ಬಿ. ಗೋರ್ಪಡೆ, ಕೆ.ಎ.ಗೂಗವಾಡ ಎಂಬ ಮೂವರನ್ನು ಅಮಾನುಗೊಳಿಸಿ ಚಿಕ್ಕೋಡಿ ಡಿಡಿಪಿಐ ಗಜಾನನ ಮನ್ನಿಕೇರಿ ಆದೇಶ ಹೊರಡಿಸಿದ್ದಾರೆ.
ನಿಗದಿತ ದಿನದಂದು ಶಾಲೆಯನ್ನು ಪುನಾರಂಭ ಮಾಡದ ಹಿನ್ನೆಲೆಯಲ್ಲಿ ಈ ಅಮಾನತು ಮಾಡಿದ್ದಾರೆ