ಬೆಟಗೇರಿ:ಮನೆ ಮನೆಗೆ ತೆರಳಿ ಹೋಮ್ ಕ್ವಾರಂಟೈನ್‍ನಲ್ಲಿರುವರ ಆರೋಗ್ಯ ಪರೀಕ್ಷೆ
ಮನೆ ಮನೆಗೆ ತೆರಳಿ ಹೋಮ್ ಕ್ವಾರಂಟೈನ್‍ನಲ್ಲಿರುವರ ಆರೋಗ್ಯ ಪರೀಕ್ಷೆ
ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ ಎ 4 :
ಗ್ರಾಮಕ್ಕೆ ಬೇರೆ ಬೇರೆ ಊರು, ನಗರ, ಪಟ್ಟಣಗಳಿಂದ ಬಂದಿರುವ ಹೋಮ್ ಕ್ವಾರಂಟೈನ್‍ನಲ್ಲಿರುವ ಸ್ಥಳೀಯ ಜನರ ಮನೆ ಮನೆಗೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಜೊತೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರಾಜೇಶ್ವರಿ ಹಿರೇಮಠ, ಸಿಬ್ಬಂದಿ ಹಾಗೂ ಗ್ರಾಪಂ ಪಿಡಿಒ ಎಚ್.ಎನ್.ಬಾವಿಕಟ್ಟಿ, ಗ್ರಾಪಂ ಅಧ್ಯಕ್ಷ ಈಶ್ವರ ಬಳಿಗಾರ ಅವರು ಭೇಟಿ ನೀಡಿ ಅವರ ಆರೋಗ್ಯ ಪರೀಕ್ಷೆ, ಮಾಹಿತಿ ಪಡೆಯುವ ಕಾರ್ಯ ಶನಿವಾರ ಏ.4 ರಂದು ನಡೆಯಿತು.
ಶನಿವಾರ ಏ.4ರತನಕ ಗ್ರಾಮದ ಹೋಮ್ ಕ್ವಾರಂಟೈನ್‍ನಲ್ಲಿರುವ ಎಲ್ಲಾ 58 ಜನರಲ್ಲಿ ಯಾವುದೇ ಕರೋನಾ ವೈರಸ್ ಹರಡಿರುವ ಯಾವುದೇ ಲಕ್ಷಣಗಳು ಇಲ್ಲ, ಈಗ ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರಾಜೇಶ್ವರಿ ಹಿರೇಮಠ ತಿಳಿಸಿದರು.
ಗ್ರಾಪಂ ಅಧ್ಯಕ್ಷ ಈಶ್ವರ ಬಳಿಗಾರ, ಪಿಡಿಒ ಎಚ್.ಎನ್.ಬಾವಿಕಟ್ಟಿ, ಕುಲಗೋಡ ಪೊಲೀಸ್ ಪೇದೆ ನಾಗೇಶ ದುರದುಂಡಿ, ಮಲ್ಲಪ್ಪ ಪಣದಿ, ಶ್ರೀಧರ ದೇಯಣ್ಣವರ, ಸುರೇಶ ಬಾಣಸಿ, ರಾಘು ಬೆಟಗೇರಿ, ಗೌಡಪ್ಪ ಮಾಳೇದ, ವಿಠಲ ಚಂದರಗಿ, ಸರೋಜಾ ಮಟಗಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಗ್ರಾಪಂ ಮತ್ತು ಪಿಎಚ್‍ಸಿ ಸಿಬ್ಬಂದಿ, ಕರೋನಾ ಸೈನಿಕರು, ಇತರರು ಇದ್ದರು.