RNI NO. KARKAN/2006/27779|Saturday, November 26, 2022
You are here: Home » breaking news » ಗೋಕಾಕ:ವಿಕಲಚೇತನ ಮಕ್ಕಳ ಉಚಿತ ವೈದ್ಯಕೀಯ ಮೌಲ್ಯಾಂಕನ ಶಿಬಿರ : ಬಿಇಒ ಬಳಗಾರ ಮಾಹಿತಿ

ಗೋಕಾಕ:ವಿಕಲಚೇತನ ಮಕ್ಕಳ ಉಚಿತ ವೈದ್ಯಕೀಯ ಮೌಲ್ಯಾಂಕನ ಶಿಬಿರ : ಬಿಇಒ ಬಳಗಾರ ಮಾಹಿತಿ 

ವಿಕಲಚೇತನ ಮಕ್ಕಳ ಉಚಿತ ವೈದ್ಯಕೀಯ ಮೌಲ್ಯಾಂಕನ ಶಿಬಿರ : ಬಿಇಒ ಬಳಗಾರ ಮಾಹಿತಿ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 22 :

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯ ಗೋಕಾಕ ವಲಯದ ಎಲ್ಲಾ ಶಾಲೆಗಳ ವಿಕಲಚೇತನ ಮಕ್ಕಳ ಉಚಿತ ವೈದ್ಯಕೀಯ ಮೌಲ್ಯಾಂಕನ ಶಿಬಿರವನ್ನು ದಿನಾಂಕ 28 ರಂದು ಮುಂಜಾನೆ ಹತ್ತು ಘಂಟೆಗೆ ನಗರದ ಎನ್ ಇ.ಎಸ್.ಪ್ರೌಢಶಾಲೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ‌.
ಶಾಸಕರಾದ ರಮೇಶ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ಜರುಗುವ ಈ ಕಾರ್ಯಕ್ರಮದಲ್ಲಿ ನುರಿತ ವೈದ್ಯರು ಮಕ್ಕಳನ್ನು ತಪಾಸಣೆ ಮಾಡಿ ಸಾದನಾ ಸಲಕರಣೆಗಳನ್ನು ಕೊಡುವ ಕಾರಣ ಸಂಬಂಧಿಸಿದ ಮಕ್ಕಳ ಪಾಲಕರು ಹಾಗೂ ಪೋಷಕರು ಮತ್ತು ಶಾಲೆಯ ಮುಖ್ಯೋಪಾಧ್ಯಾಯರು, ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಸರ್ವಸದಸ್ಯರು ಪಾಲ್ಗೋಳುವಂತೆ ವಿನಂತಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಕ್ಷೇತ್ರ ಸಮನ್ವಯ ಅಧಿಕಾರಿ ಎಂ.ಬಿ.ಪಾಟೀಲ ದೂರವಾಣಿ ಸಂಖ್ಯೆ : 9480695057 ಹಾಗೂ ಎಸ್.ಬಿ.ಕೊಂತ್ತಿ ದೂರವಾಣಿ ಸಂಖ್ಯೆ :9986842441 ಇವರನ್ನು ಸಂಪರ್ಕಿಸಲು ಕೋರಿದ್ದಾರೆ.

Related posts: