RNI NO. KARKAN/2006/27779|Thursday, May 16, 2024
You are here: Home » breaking news » ಗೋಕಾಕ:ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಮತ್ತು ಕಠಿಣ ಪರಿಶ್ರಮದಿಂದ ಸರ್ವೋತೋಮುಖ ಅಭಿವೃದ್ಧಿ ಸಾಧಿಸಿ

ಗೋಕಾಕ:ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಮತ್ತು ಕಠಿಣ ಪರಿಶ್ರಮದಿಂದ ಸರ್ವೋತೋಮುಖ ಅಭಿವೃದ್ಧಿ ಸಾಧಿಸಿ 

ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಮತ್ತು ಕಠಿಣ ಪರಿಶ್ರಮದಿಂದ ಸರ್ವೋತೋಮುಖ ಅಭಿವೃದ್ಧಿ ಸಾಧಿಸಿ

 
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜು 30 :

 

 
ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಮತ್ತು ಕಠಿಣ ಪರಿಶ್ರಮದಿಂದ ಸರ್ವೋತೋಮುಖ ಅಭಿವೃದ್ಧಿ ಸಾಧಿಸಿ, ತಮ್ಮ ಜೀವನದಲ್ಲಿ ಸಿಕ್ಕ ಒಳ್ಳೆಯ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಿರಿ ಎಂದು ಸವದತ್ತಿಯ ಸಾಹಿತಿ ಪ್ರೊ, ಶ್ರೀಧರ.ಅಸಂಗಿಹಾಳ ಹೇಳಿದರು.
ಮಂಗಳವಾರದಂದು ಇಲ್ಲಿಯ ಸತೀಶ ಶುಗರ್ಸ್ ಅಕ್ಯಾಡೆಮಿ ಪ್ರಥಮ ದರ್ಜೆ ಮತ್ತು ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ 2019-20ನೇ ಸಾಲಿನ ಪ್ರಥಮ ದರ್ಜೆ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸ್ವಾಗತ ಹಾಗೂ ಕ್ರೀಡಾ ಮತ್ತು ವಿವಿಧ ಸಂಘ ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನ ಮೌಲ್ಯಯುತವಾದದ್ದು, ಬದುಕನ್ನು ಸುಂದರಗೊಳಿಸಿಕೊಳ್ಳುವ ಅವಕಾಶ ತಮಗೆ ಇದ್ದು ಅದನ್ನು ಹಾಳು ಮಾಡಿಕೊಳ್ಳದೇ ಒಳ್ಳೆಯ ಮೌಲ್ಯಗಳನ್ನು ಅಳವಡಿಸಿಕೊಂಡು ತಂದೆ-ತಾಯಿ-ಗುರುವಿಗೆ ತಾವು ಕಲಿತ ಸಂಸ್ಥೆಗೆ ಹೆಸರನ್ನು ತರುವ ಕಾರ್ಯವನ್ನು ಮಾಡುವ ಮೂಲಕ ನಾಡಿನ ಒಳ್ಳೆಯ ಪ್ರಜೆಯಾಗಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆಡಳಿತಾಧಿಕಾರಿ ಆರ್.ಎಸ್.ಡುಮ್ಮಗೋಳ ಅವರು ಮಾತನಾಡಿ ಇಂದಿನ ತಂತ್ರಜ್ಞಾನ ಯುಗದಲ್ಲಿ ನಾವು ಎಷ್ಟೇ ಕಲಿತರೂ ಕೂಡಾ ಕಡಿಮೆಯಾಗಿದ್ದು, ವಿದ್ಯಾರ್ಥಿಗಳು ಧೈರ್ಯಗೆಡದೆ ಸತತ ಅಧ್ಯಯನದ ಜೊತೆಗೆ ಪ್ರಯತ್ನಶೀಲರಾಗಿ ಸಾಧನೆ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ,ಟಿ.ಬಿ.ತಳವಾರ ಪ್ರೊ,ಡಿ.ಎಸ್.ಹುಗ್ಗಿ ಡಾ. ಜಿ.ಪಿ.ತಲ್ಲೂರ ಪ್ರೊ,ಎಸ್.ಎಮ್.ಗುತ್ತಿ, ಪ್ರೊ,ಪಿ.ಜಿ.ತಿಗಡಿ, ಪ್ರೊ,ವ್ಹಿ.ಎಸ್.ರೆಡ್ಡಿ, ಪ್ರೊ,ಆರ್.ವಾಯ್.ಕಾನೋಜಿ ಸೇರಿದಂತೆ ಅನೇಕರು ಇದ್ದರು.

Related posts: