ಅಥಣಿ:ಕೃಷ್ಣಾ ನದಿ ನೀರಿಗೆ ಶಾಶ್ವತ ಪರಿಹಾರ ದೊರಕಿಸದಿದ್ದರೆ ಬೆಳಗಾವಿ ಜಿಲ್ಲೆ ಬಂದ ಮಾಡಿ ಪ್ರತಿಭಟನೆ : ಬಸವರಾಜ ಖಾನಪ್ಪನವರ
ಕೃಷ್ಣಾ ನದಿ ನೀರಿಗೆ ಶಾಶ್ವತ ಪರಿಹಾರ ದೊರಕಿಸದಿದ್ದರೆ ಬೆಳಗಾವಿ ಜಿಲ್ಲೆ ಬಂದ ಮಾಡಿ ಪ್ರತಿಭಟನೆ : ಬಸವರಾಜ ಖಾನಪ್ಪನವರ
ನಮ್ಮ ಬೆಳಗಾವಿ ಸುದ್ದಿ , ಅಥಣಿ ಮೇ 26 :
ಕೃಷ್ಣಾ ನದಿ ನೀರಿನ ಶಾಶ್ವತ ಪರಿಹಾರ ದೊರಕಿಸಿ ಕೊಡದಿದ್ದರೆ ಮುಂಬರುವ ದಿನಗಳಲ್ಲಿ ಬೆಳಗಾವಿ ಜಿಲ್ಲೆಯನ್ನು ಸಂಪೂರ್ಣ ಬಂದ ಮಾಡಿ ಉಗ್ರವಾಗಿ ಪ್ರತಿಭಟಿಸಲಾಗುವದು ಎಂದು ಗೋಕಾಕ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಘಟಕದ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಹೇಳಿದರು
ರವಿವಾರಂದು ಅಥಣಿಯ ಕೃಷ್ಣಾ ನದಿ ನೀರು ಸಮಿತಿ , ಕರ್ನಾಟಕ ರಕ್ಷಣಾ ವೇದಿಕೆ , ನ್ಯಾಯವಾದಿ ಸಂಘ ಸೇರಿದಂತೆ ಅಥಣಿ ನಗರದ ಎಲ್ಲಾ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಕಳೆದ ಏಳು ದಿನಗಳಿಂದ ನಡೆಯುತ್ತಿರುವ ಕೃಷ್ಣಾ ನದಿ ನೀರಿನ ಶಾಶ್ವತ ಪರಿಹಾರಕ್ಕಾಗಿ ಆಗ್ರಹಿಸಿ ನಡೆಯುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದರು
ಪ್ರತಿ ವರ್ಷ ಬೆಸಿಗೆ ಕಾಲದಲ್ಲಿ ಕೃಷ್ಣಾ ನದಿಯ ಬತ್ತಿ ಈ ಭಾಗದಲ್ಲಿ ನೆಲೆಸಿರುವ ಸಾರ್ವಜನಿಕರು ಹನಿ ನೀರಿಗಾಗಿ ಪರಿತಪ್ಪಿಸುವ ದಯನೀಯ ಪರಿಸ್ಥಿತಿ ಎದುರಾಗಿದೆ . ಪ್ರತಿ ವರ್ಷ ಈ ಭಾಗದ ಜನರು ಎದುರಿಸುವ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಸರಕಾರ ಮುಂದಾಗಿ ಕೋಯ್ನಾ ಜಲಾಶಯದಿಂದ 4 ಟಿಎಂಸಿ ನೀರನ್ನು ಪ್ರತಿ ವರ್ಷ ಹರಿಸುವಂತೆ ಒಡಂಬಡಿಕೆ ಮಾಡಿಕೊಂಡು ಈ ಭಾಗದ ಜನರ ಆಶೋತ್ತರಗಳನ್ನು ಈಡೇರಿಸುವ ಕಾರ್ಯವಾಗಬೇಕೆಂದು ಬಸವರಾಜ ಖಾನಪ್ಪನವರ ಹೇಳಿದರು
ಪ್ರತಿಭಟನೆಯ ಸಾನಿಧ್ಯ ವಹಿಸಿದ ಮಾತನಾಡಿದ ಹಾವೇರಿಯ ಅಗಡಿ ಮಠದ ಪರಮ ಪೂಜ್ಯ ಶ್ರೀ ಗುರಲಿಂಗ ಮಹಾಸ್ವಾಮಿಗಳು ಈ ಭಾಗದ ಜನಪ್ರತಿನಿಧಿಗಳು ಕೃಷ್ಣೆ ನದಿಗೆ ಆದಷ್ಟು ಬೇಗ ನೀರು ಹರಿಸಿ ನಾಯಕರಾಗಬೇಕು ಹೊರತು ನಾಲಾಯಕರಾಗಬಾರದು . ಸುಮಾರು ಏಳು ದಿನಗಳಿಂದ ಹನಿ ನೀರಿಗಾಗಿ ನಡೆಯುತ್ತಿರುವ ಹೋರಾಟವನ್ನು ಬೆಂಬಲಿಸಿ ನೀರು ಹರಿಸದಿರುವದು ಖೇದಕರವಾಗಿದೆ ಬರುವ ಎರೆಡು ದಿನಗಳಲ್ಲಿ ನೀರು ಹರಿಸಿದ್ದಿದರೆ ಬೆಂಗಳೂರಿನ ವಿಧಾನನಭೆ ಎದುರು ಉಗ್ರ ಸ್ವರೂಪದ ಹೋರಾಟ ನಡೆಸಲಾಗುವದು ಎಂದು ಎಚ್ಚರಿಸಿದರು .
ಪ್ರತಿಭಟನೆಯಲ್ಲಿ ಕರವೇ ಅಥಣಿ ತಾಲೂಕಾಧ್ಯಕ್ಷ ಬಸನಗೌಡ ಪಾಟೀಲ , ಕೃಷ್ಣಾ ಖಾನಪ್ಪನವರ , ಸಾದಿಕ ಹಲ್ಯಾಳ , ವಿಜಯಕುಮಾರ ಅಡಹಳ್ಳಿ , ಶಿವಾಜಿ ಬೊರಾಡೆ , ಎಂ .ಎನ. ಶೇಖ , ಎಸ. ಎಂ.ಬಿರಾದರ ಪಾಟೀಲ, ಗಿರೀಶ ಬುಟಾಳೆ, ರವಿ ಬಂಗಾರೆಪ್ಪನವರ , ಮುಗುಟ ಪೈಲವಾನ , ಮಹಾದೇವ ಮಕ್ಕಳಗೇರಿ , ಭೀಮಶೀ ಪುಠಾಣಿ , ಅರುಣ ಪಂಡಿತ , ಕಾಮೇಶ ಹಂಚಿನಮನಿ , ಗುರುನಾಥ ದರ್ಶನ , ಸತ್ತಾರ ಬೇಪಾರಿ , ಅಬ್ಬು ಮುಜಾವರ ಸೇರಿದಂತೆ ಹಲವರು ಉಪಸ್ಥಿತರಿದ್ದರು