ಗೋಕಾಕ:ಸರ್ಕಾರದ ಯೋಜನೆಗಳ ಸದುಪಯೋಗಕ್ಕೆ ಪಾಲಕರ ಸಹಕಾರ ಮುಖ್ಯ-ಬಂಬಲಾಡಿ
ಸರ್ಕಾರದ ಯೋಜನೆಗಳ ಸದುಪಯೋಗಕ್ಕೆ ಪಾಲಕರ ಸಹಕಾರ ಮುಖ್ಯ-ಬಂಬಲಾಡಿ
ಗೋಕಾಕ ಡಿ 11: ಶೈಕ್ಷಣಿಕವಾಗಿ ವಿದ್ಯಾರ್ಥಿಗಳಿಗೆ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ವಿದ್ಯಾರ್ಥಿಗಳು ಹಾಗೂ ಪಾಲಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಾ.ಪಂ ಸದಸ್ಯ ನಿಂಗಪ್ಪ ಬಂಬಲಾಡಿ ಹೇಳಿದರು.
ಅವರು ತಾಲೂಕಿನ ಶಿಂದಿಕುರಬೇಟ ಗ್ರಾಮದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ 8ನೇ ತರಗತಿ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಉಚಿತವಾಗಿ ನೀಡುವ ಸೈಕಲ್ ವಿತರಿಸಿ ಮಾತನಾಡಿದರು.
ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಶಾರೀರಿಕವಾಗಿ ಸದೃಢರಾಗಲು ಕ್ರೀಡೆಯೂ ಮುಖ್ಯವಾಗಿದೆ. ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿನಿಯರಲ್ಲಿ ಮಾನಸಿಕವಾಗಿ ಬೆಳೆವಣಿಗೆ ಹೊಂದುತ್ತಾರೆ ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯ ಭೀಮಶಿ ಬಿರನಾಳಿ, ಗ್ರಾ.ಪಂ ಸದಸ್ಯ ವಿಠ್ಠಲ ಶಿವಾಪೂರಿ, ಗುಂಡುರಾವ ಸಾಂಗಲಿ, ಪ್ರಭಾರಿ ಪ್ರಧಾನ ಗುರುಮಾತೆ ಶಹಜಹಾನ, ಶಿಕ್ಷಕರಾದ ಎಂ.ಎಚ್.ಸೌದಾಗರ, ಎಂ.ಎ.ಶೇಖ, ಡಬ್ಲ್ಯೂ. ಎಂ. ಅವಟಿ, ಎಸ್.ಕೆ.ತಟಗಾರ, ಎ.ಜೆ.ಮಕಾನದಾರ, ಕೆಬಿಎಸ್ ಶಾಲೆಯ ಪ್ರಧಾನ ಗುರುಮಾತೆ ಸೊಗಲಿ, ಕೆಜಿಎಸ್ ಶಾಲೆಯ ಪ್ರಧಾನ ಗುರುಮಾತೆ ಹಿರೇಮಠ ಹಾಗೂ ಪಾಲಕರು ವಿದ್ಯಾರ್ಥಿಗಳು ಇದ್ದರು.