RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಎಸ್ಎಸ್.ಎಲ್ ಸಿ ಪರೀಕ್ಷೆಯಲ್ಲಿ ಶೇ.95.68 ರಷ್ಟು ಸಾಧನೆ ಮಾಡಿ ಬೆಟಗೇರಿ ಗ್ರಾಮಕ್ಕೆ ಕೀರ್ತಿ ತಂದ ಕು. ಲಕ್ಕಣ್ಣ ಕೋಣಿ

ಗೋಕಾಕ:ಎಸ್ಎಸ್.ಎಲ್ ಸಿ ಪರೀಕ್ಷೆಯಲ್ಲಿ ಶೇ.95.68 ರಷ್ಟು ಸಾಧನೆ ಮಾಡಿ ಬೆಟಗೇರಿ ಗ್ರಾಮಕ್ಕೆ ಕೀರ್ತಿ ತಂದ ಕು. ಲಕ್ಕಣ್ಣ ಕೋಣಿ 

ಎಸ್ಎಸ್.ಎಲ್ ಸಿ ಪರೀಕ್ಷೆಯಲ್ಲಿ ಶೇ.95.68 ರಷ್ಟು ಸಾಧನೆ ಮಾಡಿ ಬೆಟಗೇರಿ ಗ್ರಾಮಕ್ಕೆ ಕೀರ್ತಿ ತಂದ ಕು. ಲಕ್ಕಣ್ಣ ಕೋಣಿ
ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಮೇ 2 :
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಕೌಟಂಟ್ (ಲೆಕ್ಕಿಗ) ಮಹಾದೇವ ಸಿದ್ದಪ್ಪ ಕೋಣಿ ಅವರ ಪುತ್ರ ಕುಮಾರ ಲಕ್ಕಣ್ಣ ಮಹಾದೇವ ಕೋಣಿ ಪ್ರಸಕ್ತ ಎಸ್‍ಎಸ್‍ಎಲ್‍ಸಿ ಆಂಗ್ಲ ಮಾಧ್ಯಮ ಪರೀಕ್ಷೆಯಲ್ಲಿ ಶೇ.95.68 ರಷ್ಟು ಸಾಧನೆ ಮಾಡಿ ಬೆಟಗೇರಿ ಗ್ರಾಮಕ್ಕೆ ಕೀರ್ತಿ ತಂದಿದ್ದಾನೆ.
ಕನ್ನಡ ವಿಷಯಕ್ಕೆ 123 ಅಂಕ, ಇಮಗ್ಲೀಷ ವಿಷಯಕ್ಕೆ 95 ಅಂಕ, ಹಿಂದಿ ವಿಷಯಕ್ಕೆ 97 ಅಂಕ, ಗಣಿತ ವಿಷಯಕ್ಕೆ 92 ಅಂಕ, ವಿಜ್ಞಾನ ವಿಷಯಕ್ಕೆ 92 ಅಂಕ, ಸಮಾಜವಿಜ್ಞಾನ ವಿಷಯಕ್ಕೆ 99 ಅಂಕ ಒಟ್ಟು (ಶೇ.95.68), 598 ಅಂಕ ಪಡೆದ ಲಕ್ಕಣ್ಣ ಕೋಣಿ ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಹುಕ್ಕೇರಿ ತಾಲೂಕಿನ ಹೊಸೂರ ಮೂರಾರ್ಜಿ ದೇಸಾಯಿ ವಸತಿ ಶಾಲೆಗೆ ದ್ವಿತೀಯ ಸ್ಥಾನ ಪಡೆದರೆ, ಗ್ರಾಮದ ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಲ್ಲಿಯೇ ಲಕ್ಕಣ್ಣ ಕೋಣಿ ಗರಿಷ್ಠ ಅಂಕ ಪಡೆದ ದಾಖಲೆ ಮುಡಿಗೇರಿಸಿಕೊಂಡಿದ್ದಾನೆ.
ಶಾಲೆಯಲ್ಲಿ ಕುಮಾರ ಲಕ್ಕಣ್ಣ ಕೋಣಿ ವ್ಯಾಸಂಗ ಮಾಡಿದ್ದು, ಬೆಟಗೇರಿ ಗ್ರಾಮದ ಮಧ್ಯಮ ಕುಟುಂಬದಲ್ಲಿ ಹುಟ್ಟಿ ಬೆಳೆದ ಲಕ್ಕಣ್ಣ ಕೋಣಿ ಅವರ ತಾಯಿ ಶಿಕ್ಷಣ ಕಲಿತಿಲ್ಲ, ಅವರ ತಂದೆ ಮಹಾದೇವ ಕೋಣಿ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸುಮಾರು 20 ವರ್ಷಗಳಿಂದ ಅಕೌಟಂಟ್‍ರಾಗಿ ಕಾರ್ಯನಿರ್ವಹಿಸುತ್ತಿದ್ದು, ಸತತ ಅಭ್ಯಾಸ, ಶಿಕ್ಷಕರ ಮಾರ್ಗದರ್ಶನ, ಪಾಲಕರ ಸಹಕಾರ, ಪ್ರೋತ್ಸಾಹದಿಂದ ಉತ್ತಮ ಅಂಕ ಗಳಿಸಲು ಸಾಧ್ಯಾವಾಯಿತು ಅಂತಾ ಲಕ್ಕಣ್ನ ಸ್ಮರಿಸುತ್ತಾರೆ.ಗ್ರಾಮೀಣ ಪ್ರತಿಭೆಗಳು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡುವುದು ಅಸಾಧ್ಯವಲ್ಲ ಅಂಬುದನ್ನು ಲಕ್ಕಣ್ಣ ಕೋಣಿ ಸಾಬೀತುಪಡಿಸಿದ್ದಾನೆ.

Related posts: