RNI NO. KARKAN/2006/27779|Tuesday, August 5, 2025
You are here: Home » breaking news » ಗೋಕಾಕ:ಗೋಕಾಕ ವಲಯಕ್ಕೆ ಪ್ರಥಮ ಸ್ಥಾನ ಪಡೆದ ಮಣಿಕಂಠ ರಡ್ಡಿ ಗೆ ಕರವೇಯಿಂದ ಸನ್ಮಾನ

ಗೋಕಾಕ:ಗೋಕಾಕ ವಲಯಕ್ಕೆ ಪ್ರಥಮ ಸ್ಥಾನ ಪಡೆದ ಮಣಿಕಂಠ ರಡ್ಡಿ ಗೆ ಕರವೇಯಿಂದ ಸನ್ಮಾನ 

ಗೋಕಾಕ ವಲಯಕ್ಕೆ ಪ್ರಥಮ ಸ್ಥಾನ ಪಡೆದ ಮಣಿಕಂಠ ರಡ್ಡಿ ಗೆ ಕರವೇಯಿಂದ ಸನ್ಮಾನ

 

ನಮ್ಮ ಬೆಳಗಾವಿ ಸುದ್ದಿ ,ಗೋಕಾಕ ಮೇ 1 :

 
ತಾಲೂಕಿನ ಉರುಬಿನಟ್ಟಿ ಬೆ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ 625 ಕ್ಕೆ 619 ಅಂಕಗಳನ್ನು ಪಡೆದು ಗೋಕಾಕ ವಲಯಕ್ಕೆ ಪ್ರಥಮ ಸ್ಥಾನ ,ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ತೃತೀಯ ಹಾಗೂ ರಾಜ್ಯಕ್ಕೆ 6 ನೇ ಸ್ಥಾನ ಪಡೆದ ಕು. ಮಣಿಕಂಠ ರಡ್ಡಿ ವಿದ್ಯಾರ್ಥಿಗೆ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು

ಬುಧವಾರದಂದು ತಾಲೂಕಿನ ಉರುಬಿನಟ್ಟಿ ಬೆ. ಗ್ರಾಮದಲ್ಲಿರುವ ವಿದ್ಯಾರ್ಥಿಯ ಮನೆಯಲ್ಲಿ ಹಮ್ಮಿಕೊಂಡಿದ್ದ ಸರಳ ಸಮಾರಂಭದಲ್ಲಿ ವಿದ್ಯಾರ್ಥಿಗೆ ಸತ್ಕರಿಸಲಾಯಿತು

ಈ ಸಂದರ್ಭದಲ್ಲಿ ಮಾತನಾಡಿದ ಕರವೇ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಬಡ ಕುಟುಂಬದಲ್ಲಿ ಜನಿಸಿದ ಗ್ರಾಮೀಣ ಭಾಗದ ವಿದ್ಯಾರ್ಥಿ ಮಣಿಕಂಠನ ಸಾಧನೆ ಇಡೀ ತಾಲೂಕಿಗೆ ಮಾದರಿಯಾಗಿದೆ. ಮುಂಬರುವ ದಿನಗಳಲ್ಲಿ ಉತ್ತಮ ವ್ಯಾಸಂಗ ಮಾಡಿ ಇಡೀ ರಾಜ್ಯಕ್ಕೆ ಕೀರ್ತಿ ತರಲೆಂದು ಶುಭ ಹಾರೈಸಿದರು

ಈ ಸಂದರ್ಭದಲ್ಲಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಎ.ಬಿ ತಿಮ್ಮೊಗೋಳ , ಎಸ್.ಡಿ.ಎಂ.ಸಿ ಅಧ್ಯಕ್ಷ ಆರ್.ಬಿ.ಬಳೋಬಾಳ , ಕರವೇ ಜಿಲ್ಲಾ ಸಂಚಾಲಕ ಕೃಷ್ಣಾ ಖಾನಪ್ಪನವರ , ಕಾರ್ಯದರ್ಶಿ ಸಾದಿಕ ಹಲ್ಯಾಳ , ಶ್ರೀಮತಿ ಕಲಾವತಿ ರಡ್ಡಿ , ಗುರು ಯಮಕನಮರಡಿ , ಲಕ್ಷ್ಮಣ ಗೋರಗುದ್ದಿ , ಅಬ್ಬು ಮುಜಾವರ , ಸಿದ್ದು ಪಿ.ಕೆ , ಅಮೀತ ತೆಲ್ಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು

Related posts: