RNI NO. KARKAN/2006/27779|Saturday, August 2, 2025
You are here: Home » breaking news » ಬೆಳಗಾವಿ:ಸತೀಶ ಜಾರಕಿಹೊಳಿ ತಲೆ ಸರಿಯಿಲ್ಲ ಆತನನ್ನು ಧಾರವಾಡಕ್ಕೆ ಕಳಿಸಬೇಕು : ಮಾಜಿ ಸಚಿವ ರಮೇಶ ಗುಡುಗು

ಬೆಳಗಾವಿ:ಸತೀಶ ಜಾರಕಿಹೊಳಿ ತಲೆ ಸರಿಯಿಲ್ಲ ಆತನನ್ನು ಧಾರವಾಡಕ್ಕೆ ಕಳಿಸಬೇಕು : ಮಾಜಿ ಸಚಿವ ರಮೇಶ ಗುಡುಗು 

ಸತೀಶ ಜಾರಕಿಹೊಳಿ ತಲೆ ಸರಿಯಿಲ್ಲ ಆತನನ್ನು ಧಾರವಾಡಕ್ಕೆ ಕಳಿಸಬೇಕು : ಮಾಜಿ ಸಚಿವ ರಮೇಶ ಗುಡುಗು

ನಾನು ಮತ್ತು ಡಿಕೆಶಿ ಉತ್ತಮ ಸ್ನೇಹಿತರು : ರಮೇಶ ಜಾರಕಿಹೊಳಿ ಹೇಳಿಕೆ

ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ ಸೆ 6 :

ನಾನು ಮತ್ತು  ಡಿ.ಕೆ ಶಿವಕುಮಾರ್​  ಉತ್ತಮ ಸ್ನೇಹಿತರು  ಮೊನ್ನೆ ಭೇಟಿಯಾಗಬೇಕೆನ್ನುವಷ್ಟರಲ್ಲಿ ಶಿಮಕುಮಾರ ಅವರು  ಅರೆಸ್ಟ್ ಆದರು. ಅವರಿಗೆ ದೇವರು ಒಳ್ಳೆಯದನ್ನು ಮಾಡಲಿ  ಎಂದು ಮಾಜಿ ಸಚಿವ  ರಮೇಶ್ ಜಾರಕಿಹೊಳಿ  ಹೇಳಿದರು.

ಗೋಕಾಕ ನಗರದಲ್ಲಿ ನಾಳೆ ನಡೆಯಲಿರುವ ಸಂಕಲ್ಪ ಸಮಾವೇಶದಲ್ಲಿ ಭಾಗವಹಿಸಲು ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಬಂದಿಳಿದ ರಮೇಶ ಅವರು  ಶುಕ್ರವಾರದಂದು  ಮಾಧ್ಯಮದೊಂದಿಗೆ ಮಾತನಾಡಿ ಈ ಸಾರಿ ದೆಹಲಿಗೆ ಹೋದ ಸಂದರ್ಭದಲ್ಲಿ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡುತ್ತೇನೆ. ರಾಜಕೀಯವೇ  ಬೇರೆ ವೈಯಕ್ತಿಕ ಸಂಬಂಧದವೇ ಬೇರೆ ಎಂದು ತಿಳಿಸಿದರು.

ನಂತರ ಮಾಜಿ ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ಕಿಡಿಕಾರಿದ ಅವರು, ಸತೀಶ ಅವರ ತಲೆ ಸರಿಯಿಲ್ಲ. ಆತನನ್ನು ಧಾರವಾಡಕ್ಕೆ ಕಳಿಸಬೇಕು ಎಂದು ತಮ್ಮಣ ವಿರುದ್ಧ ರಮೇಶ್ ಜಾರಕಿಹೊಳಿ ಗುಡುಗಿದರು.

ನಾನು 14ನೇ ಭಾರೀ ಉತ್ತರ ಭಾರತಕ್ಕೆ ದೇವರ ದರ್ಶನಕ್ಕೆ ಹೋಗಿದ್ದೇನೆ.
ದೇವರ ದರ್ಶನ ಮಾಡಲು ಹೋದರೆ ಮೋಜು-ಮಸ್ತಿ ಮಾಡಲು ಹೋದಂತೆನಾ.? ಇದನ್ನು ಮುಂದೆ ಇಟ್ಟುಕೊಂಡು ಕೆಲ ಮಾಧ್ಯಮಗಳು ಪ್ಯಾಕೇಜ್ ಪಡೆದು ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ರಮೇಶ್ ಜಾರಿಕಿಹೊಳಿ ಮಾಧ್ಯಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ

Related posts: