RNI NO. KARKAN/2006/27779|Thursday, January 15, 2026
You are here: Home » breaking news » ಗೋಕಾಕ:ನಾಳೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಂದ ಜನತಾ ದರ್ಶನ

ಗೋಕಾಕ:ನಾಳೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಂದ ಜನತಾ ದರ್ಶನ 

ನಾಳೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಂದ ಜನತಾ ದರ್ಶನ

ಗೋಕಾಕ ಸೆ 14 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ದಿ. 15 ರಂದು ಮಧ್ಯಾಹ್ನ 3 ಗಂಟೆಯಿಂದ ಸಾಯಂಕಾಲ 5 ಗಂಟೆಯ ವರೆಗೆ ಜನತಾ ದರ್ಶನ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ ಎಂದು ಗೋಕಾಕ ತಹಶೀಲದಾರ ಜಿ.ಎಸ್.ಮಳಗಿ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಸಾರ್ವಜನಿಕರು ಲಿಖಿತ ಮನವಿಗಳನ್ನು ನೀಡಬಹುದಾಗಿದೆ. ಜನತಾ ದರ್ಶನದಲ್ಲಿ ಸರ್ಕಾರಿ ನೌಕಕರ ವರ್ಗಾವಣೆಗಾಗಿ ಸಂಬಂಧಿಸಿದ ಅಹವಾಲುಗಳಿಗೆ ಅವಕಾಶವಿಲ್ಲ, ವೈದ್ಯಕೀಯ ಪರಿಹಾರ ನಿಧಿ ಕೋರುವವರು ಆಸ್ಪತ್ರೆಯ ಬಿಲ್ಲು ಚಿಕಿತ್ಸೆಯ ವಿವರಗಳೊಂದಿಗೆ ಆಧಾರ ಕಾರ್ಡ/ಬಿಪಿಎಲ್ ಪಡಿತರ ಚೀಟಿಯ ದಾಖಲಾತಿಗಳೊಂದಿಗೆ ಮನವಿ ಸಲ್ಲಿಸಬೇಕೆಂದು ತಹಶೀಲದಾರರು ಪ್ರಕಟನೆಯಲ್ಲಿ ಕೋರಿದ್ದಾರೆ.

Related posts: