ಘಟಪ್ರಭಾ:ಕು.ರಯೀಸಾ ಅಸ್ಲಂ ಸನದಿ ಕಾಲೇಜಿಗೆ ಪ್ರಥಮ
ಕು.ರಯೀಸಾ ಅಸ್ಲಂ ಸನದಿ ಕಾಲೇಜಿಗೆ ಪ್ರಥಮ
ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಏ 17 :
ಸಮೀಪದ ಶಿಂದಿಕುರಬೇಟ ಗ್ರಾಮದ ಕು.ರಯೀಸಾ ಅಸ್ಲಂ ಸನದಿ ಇವಳು ಗೋಕಾಕ ಜೆ.ಎಸ್.ಎಸ್ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಶೇ 93% ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾಳೆ.
ಕು.ರಯೀಸಾ ಇವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಗ್ರಾಮದ ಮುಸ್ಲಿಂ ಸಮಾಜದ ಮುಖಂಡರು ಬುಧವಾರ ಅವರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಸ್ಲಿಂ ಸಮಾಜದ ಅಧ್ಯಕ್ಷ ಅಬ್ದುಲ ಸೌದಾಗರ, ಉಪಾಧ್ಯಕ್ಷ ಮುಬಾರಕ ಮುಲ್ತಾನಿ, ಮುಖಂಡರಾದ ಮುಬಾರಕ ಸೌದಾಗರ, ಹಾಜಿ ಮುಸಾ ಅನ್ಸಾರಿ, ಯೂನೂಸ ಶಿಲ್ಲೇದಾರ, ಸದ್ರುದಿನ್ನ ಮಕಾನದಾರ, ಗ್ರಾ.ಪಂ ಸದಸ್ಯ ಮರೆಂಬು ಜಂಭು, ಕಯ್ಯುಮ ಅತ್ತಾರ, ಅಸ್ಲಂ ಸನದಿ, ಮೌಲಾಸಾಬ ಸನದಿ, ಹಸನ ಜಕಾತಿ, ಉಮರ ಜಕಾತಿ, ಶಿಕ್ಷಕರಾದ ಮದಾರ ಸನದಿ, ಮೌಲಾ ಚೋಪದಾರ ಬಡೆಸಾಬ ಸೌದಾಗರ, ಮಹಬೂಬ ಸನದಿ ಸೇರಿದಂತೆ ಅನೇಕ ಸಮಾಜದ ಮುಖಂಡರು ಇದ್ದರು.