RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ಸುಳ್ಳು ಭರವಸೆಗಳನ್ನು ನೀಡುವ ಮೋದಿ ಸರಕಾರಕ್ಕೆ ಈ ಬಾರಿ ಮತದಾರರು ಗೇಟ್ ಪಾಸ್ ನೀಡಲಿದ್ದಾರೆ : ಸಚಿವ ಸತೀಶ

ಗೋಕಾಕ:ಸುಳ್ಳು ಭರವಸೆಗಳನ್ನು ನೀಡುವ ಮೋದಿ ಸರಕಾರಕ್ಕೆ ಈ ಬಾರಿ ಮತದಾರರು ಗೇಟ್ ಪಾಸ್ ನೀಡಲಿದ್ದಾರೆ : ಸಚಿವ ಸತೀಶ 

ಸುಳ್ಳು ಭರವಸೆಗಳನ್ನು ನೀಡುವ ಮೋದಿ ಸರಕಾರಕ್ಕೆ ಈ ಬಾರಿ ಮತದಾರರು ಗೇಟ್ ಪಾಸ್ ನೀಡಲಿದ್ದಾರೆ : ಸಚಿವ ಸತೀಶ

 
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಏ 10:

 
ಸುಳ್ಳು ಭರವಸೆಗಳನ್ನು ನೀಡುವ ಮೋದಿ ಸರಕಾರಕ್ಕೆ ಈ ಬಾರಿ ಮತದಾರರು ಗೇಟ್ ಪಾಸ್ ನೀಡಲಿದ್ದಾರೆಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಅವರು, ಅರಭಾಂವಿ ವಿಧಾನಸಭಾ ಮತಕ್ಷೇತ್ರದ ಸಂಗನಕೇರಿ, ಹುಣಶ್ಯಾಳ ಪಿಜಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಜೆಡಿಎಸ್ ಮತ್ತು ಕಾಂಗ್ರೇಸ್ ಮೈತ್ರಿ ಅಭ್ಯರ್ಥಿ ಡಾ. ವ್ಹಿ ಎಸ್ ಸಾಧುನವರ ಪರ ಬುಧವಾರದಂದು ಭರ್ಜರಿ ಪ್ರಚಾರ ಕೈಗೊಂಡು ಮಾತನಾಡಿದರು.
ಕಾಂಗ್ರೇಸ್ ಪಕ್ಷ ಬಡವರ, ದೀನ ದಲಿತರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಪಕ್ಷವಾಗಿದೆ. ಕಾಂಗ್ರೇಸ್ ಪಕ್ಷವನ್ನು ಈ ಬಾರಿ ಅಧಿಕಾರಕ್ಕೆ ತರಲು ಮತದಾರ ಹುಮ್ಮಸಿನಿಂದಿದ್ದಾನೆ. ಮೈತ್ರಿ ಅಭ್ಯರ್ಥಿ ಡಾ. ವ್ಹಿ ಎಸ್ ಸಾಧುನವರ ಈ ಬಾರಿ ಭರ್ಜರಿ ಜಯಸಾಧಿಸಲಿದ್ದಾರೆಂದರು.
ಕಳೆದ ಮೂರು ಅವಧಿಯಲ್ಲಿ ಸಂಸದರಾಗಿ ಆಯ್ಕೆಯಾಗಿರುವ ಸುರೇಶ ಅಂಗಡಿ ಗ್ರಾಮೀಣ ಪ್ರದೇಶಗಳತ್ತ ಗಮನ ಹರಿಸಿಲ್ಲ, ಜನರ ಆಶೋತ್ತರಗಳಿಗೆ ಸ್ಫಂಧಿಸಿಲ್ಲ ಹೀಗಾಗಿ ಈ ಬಾರಿ ಇತಿಹಾಸ ಹೊಂದಿದ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗೆ ಜಯಸೀಗಲಿದೆ ಎಂದರು.
ಈ ಸಂದರ್ಭದಲ್ಲಿ ಹುಣಶ್ಯಾಳ ಪಿಜಿ ಗ್ರಾಪಂ ಅಧ್ಯಕ್ಷ ರಾಮ ನಾಯಕ, ನಿಜಗುಣಿ ಅಥಣಿ, ಶಿವು ಪಾಟೀಲ, ಪಾಂಡು ಮನ್ನಿಕೇರಿ, ನಿಜಾಮಸಾಬ ಜಮಾದಾರ, ಆರೀಫ ಪೀರಜಾದೆ, ಇಮ್ರಾನ ಮುಲ್ಲಾ, ದಸ್ತಗೀರ ಮುಲ್ಲಾ, ಬಾಬು ಶೀರಹಟ್ಟಿ, ರಮೇಶ ಸಂಪಗಾವಿ, ಅರಭಾಂವಿ ಪಟ್ಟಣ ಪಂಚಾಯತ ಸದಸ್ಯ ಮೆಹಬೂಬ ಮುಲ್ಲಾ, ಮಾಜಿ ಸದಸ್ಯ ದಸ್ತಗೀರ ಮುಜಾವರ ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Related posts: