ಗೋಕಾಕ:ಇಂದು ಮೂಡಲಗಿ ವಲಯದ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಅಣಕು ಪರೀಕ್ಷೆ
ಇಂದು ಮೂಡಲಗಿ ವಲಯದ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಅಣಕು ಪರೀಕ್ಷೆ
ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಮಾ 19 :
ಇದೇ ಗುರುವಾರ ಮಾರ್ಚ್ 21 ರಿಂದ ಏಪ್ರೀಲ್ 4 ರವರೆಗೆ ನಡೆಯಲಿರುವ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಹಿನ್ನಲೆಯಲ್ಲಿ ಗ್ರಾಮದ ವಿ.ವಿ.ದೇಯಣ್ಣವರ ಸರಕಾರಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರಕ್ಕೆ ಮೂಡಲಗಿ ಶೈಕ್ಷಣಿಕ ವಲಯದ ಬಿಇಒ ಅಜೀತ ಮನ್ನಿಕೇರಿ ಭೇಟಿ ನೀಡಿ ಪರೀಕ್ಷಾ ಪೂರ್ವಭಾವಿ ಸಿದ್ದತೆಯ ಕುರಿತು ಮಂಗಳವಾರ ಮಾ.19 ರಂದು ಪರಿಶೀಲನೆ ನಡೆಸಿ ಇಲ್ಲಿಯ ವ್ಯವಸ್ಥೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಬಿಇಒ ಅಜೀತ ಮನ್ನಿಕೇರಿ ಮಾತನಾಡಿ, ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಬರೆಯಲಿರುವ ಶಾಲೆಯ ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯ ನಿವಾರಣೆ, ಪರೀಕ್ಷಾ ಪೂರ್ವ ಸಿದ್ದತೆಯ ಕುರಿತು ಹಲವು ಮಾಹಿತಿ ನೀಡಿದ ಬಳಿಕ ವಿದ್ಯಾರ್ಥಿಗಳ ಆಸನ ಸಂಖ್ಯೆ, ಪರೀಕ್ಷಾ ಕೇಂದ್ರದ ಕೊಠಡಿ ಮೇಲ್ವಿಚಾರಕರಿಗೆ ವಿಶೇಷ ಮಾಹಿತಿ ಸೇರಿದಂತೆ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾ ಪೂರ್ವಭಾವಿ ಸಿದ್ದತೆಯ ಹಲವಾರು ವಿಷಯಗಳ ಕುರಿತು ಪರೀಕ್ಷಾ ಕೇಂದ್ರದ ಕೊಠಡಿ ಮೇಲ್ವಿಚಾರಕರಿಗೆ, ಮುಖ್ಯಸ್ಥರಿಗೆ ಪರೀಕ್ಷೆಗೆ ಸಂಬಂಧ ಪಟ್ಟ ಹಲವು ಸಲಹೆ ಸೂಚನೆಗಳನ್ನು ಹೇಳಿದರು.
ಇಂದು ಅಣಕು ಪರೀಕ್ಷೆ : ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯ ಎಲ್ಲ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷಾ ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯ ನಿವಾರಣೆ, ಪರೀಕ್ಷಾ ಪೂರ್ವ ಸಿದ್ದತೆಗಾಗಿ ಬುಧವಾರ ಮಾರ್ಚ್.20 ರಂದು ಅಣುಕು ಪರೀಕ್ಷೆ ಆಯೋಜಿಸಲಾಗಿದೆ. ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ 18 ಪರೀಕ್ಷಾ ಕೇಂದ್ರಗಳಲ್ಲಿ 6135 ವಿದ್ಯಾರ್ಥಿಗಳು ಅಣುಕು ಪರೀಕ್ಷೆ ಬರೆಯಲಿದ್ದಾರೆ. ಅಣುಕು ಪರೀಕ್ಷೆ ಬರೆದ ಎಲ್ಲ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಆಧಾರಿಸಿ ಅತಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪರೀಕ್ಷಾ ವಿರಾಮ ದಿನಗಳಲ್ಲಿ ವಿಶೇಷ ತರಗತಿ ಆಯೋಜಿಸಿ ತರಬೇತಿ ನೀಡಿ, ಹೆಚ್ಚು ಅಂಕ ಪಡೆದು ಉತ್ತೀರ್ಣರಾಗಲು ಉತ್ತೇಜಿಸಲಾಗುವುದು ಎಂದು ಬಿಇಒ ಅಜೀತ ಮನ್ನಿಕೇರಿ ತಿಳಿಸಿದರು.
ಈ ವೇಳೆ ಸ್ಥಳೀಯ ಪರೀಕ್ಷಾ ಕೇಂದ್ರದ ಮುಖ್ಯಸ್ಥ ರಮೇಶ ಅಳಗುಂಡಿ, ಪ್ರೌಢ ಶಾಲೆಯ ಶಿಕ್ಷಕರಾದ ಮಂಜುನಾಥ ಹತ್ತಿ, ರಮೇಶ ಬುದ್ನಿ, ಮಲ್ಲಿಕಾರ್ಜುನ ಹಿರೇಮಠ, ರಾಕೇಶ ನಡೋಣಿ, ವಿ.ಬಿ. ಬಿರಾದರ, ಶುಭಾ.ಬಿ., ಜಯಶ್ರೀ ಇಟ್ನಾಳ, ವೀಣಾ ಹತ್ತಿ, ಎ.ಬಿ.ತಾಂವಶಿ, ಮೋಹನ ತುಪ್ಪದ, ಪ್ರಮೋದ ದಾಸರ, ಮಲ್ಹಾರಿ ಪೋಳ ಸೇರಿದಂತೆ ಶಾಲೆಯ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು, ಇತರರು ಇದ್ದರು.