RNI NO. KARKAN/2006/27779|Tuesday, August 5, 2025
You are here: Home » breaking news » ಬೆಟಗೇರಿ:ಅವಶ್ಯಕ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನ : ಈಶ್ವರ ಬಳಿಗಾರ

ಬೆಟಗೇರಿ:ಅವಶ್ಯಕ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನ : ಈಶ್ವರ ಬಳಿಗಾರ 

ಅವಶ್ಯಕ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನ : ಈಶ್ವರ ಬಳಿಗಾರ

 

 
ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ ಮಾ 14 :

 

 

ಗ್ರಾಮದ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಕೂಡ್ರಲು ನೂತನ ಆಸನಗಳ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಸ್ಥಳೀಯ ಗ್ರಾಪಂ ಸದಸ್ಯರ ಹಾಗೂ ಹಿರಿಯ ನಾಗರಿಕರ ಮಾರ್ಗದರ್ಶನದಲ್ಲಿ ಸ್ಥಳೀಯರ ಅವಶ್ಯಕ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸಲಾಗುವುದು ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ ಈಶ್ವರ ಬಳಿಗಾರ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯ್ತಿ ಸಹಯೋಗದಲ್ಲಿ ಶುಕ್ರವಾರ ಮಾ.13ರಂದು ಗ್ರಾಮದ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಹಲವು ನೂತನ ಆಸನಗಳ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಈಗಾಗಲೇ ಗ್ರಾಮದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.
ಗ್ರಾಪಂ ಪಿಡಿಒ ಎಚ್.ಎನ್.ಬಾವಿಕಟ್ಟಿ, ಕಾರ್ಯದರ್ಶಿ ಪರಶುರಾಮ ಇಟಗೌಡ್ರ, ಗೌಡಪ್ಪ ಮಾಳೇದ, ಕರ ವಸೂಲಿಗಾರ ಸುರೇಶ ಬಾಣಸಿ, ವಿಠಲ ಚಂದರಗಿ, ಪುಂಡಲೀಕಪ್ಪ ಪಾರ್ವತೇರ, ಗೌಡಪ್ಪ ದೇಯಣ್ಣವರ, ಮಲ್ಲಪ್ಪ ಪಣದಿ, ಬಸಪ್ಪ ದೇಯಣ್ಣವರ, ಮಾಯಪ್ಪ ಬಾಣಸಿ, ಶಿವನಪ್ಪ ಮಾಳೇದ, ಈರಪ್ಪ ಮುಧೋಳ, ಬಸವರಾಜ ಪಣದಿ, ಲಕ್ಷ್ಮಣ ದೇಯಣ್ಣವರ ಸೇರಿದಂತೆ ಗ್ರಾಪಂ ಸದಸ್ಯರು, ಸಿಬ್ಬಂದಿ, ಗ್ರಾಮಸ್ಥರು, ಇತರರು ಇದ್ದರು.

Related posts: