RNI NO. KARKAN/2006/27779|Tuesday, December 3, 2024
You are here: Home » breaking news » ಗೋಕಾಕ:ಮಕ್ಕಳಿಗೆ ತಾಯಿಯಂತೆ ಪ್ರೀತಿಯಿಂದ ಬಿಸಿಯೂಟವನ್ನು ಬಡಿಸಬೇಕು : ಜಿ.ಪಂ ಸದಸ್ಯ ಟಿ.ಆರ್.ಕಾಗಲ್

ಗೋಕಾಕ:ಮಕ್ಕಳಿಗೆ ತಾಯಿಯಂತೆ ಪ್ರೀತಿಯಿಂದ ಬಿಸಿಯೂಟವನ್ನು ಬಡಿಸಬೇಕು : ಜಿ.ಪಂ ಸದಸ್ಯ ಟಿ.ಆರ್.ಕಾಗಲ್ 

ಮಕ್ಕಳಿಗೆ ತಾಯಿಯಂತೆ ಪ್ರೀತಿಯಿಂದ ಬಿಸಿಯೂಟವನ್ನು ಬಡಿಸಬೇಕು : ಜಿ.ಪಂ ಸದಸ್ಯ ಟಿ.ಆರ್.ಕಾಗಲ್

 

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಡಿ 23 :

 

 
ಬಿಸಿಯೂಟ ಕಾರ್ಯಕರ್ತೆಯರು ಮಕ್ಕಳಿಗೆ ತಾಯಿಯಂತೆ ಪ್ರೀತಿಯಿಂದ ಬಿಸಿಯೂಟವನ್ನು ಬಡಿಸಬೇಕು ಎಂದು ಜಿ.ಪಂ ಸದಸ್ಯ ಟಿ.ಆರ್.ಕಾಗಲ ಹೇಳಿದರು.
ಅವರು ಸೋಮವಾರದಂದು ನಗರದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯ(ಹೈಸ್ಕೂಲ ವಿಭಾಗ) ಸಭಾಭವನದಲ್ಲಿ ಅಡುಗೆ ಸಿಬ್ಬಂದಿ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸರ್ಕಾರಿ ಶಾಲೆಗಳಲ್ಲಿ ಓದುವ ಬಡಮಕ್ಕಳಿಗೆ ಇದು ಉತ್ತಮ ಯೋಜನೆಯಾಗಿದೆ. ಇದರಿಂದ ಶಾಲೆಗಳಲ್ಲಿ ಹಾಜರಾತಿಯೂ ಉತ್ತಮವಾಗಿದೆ. ಬಿಸಿಯೂಟ ಕಾರ್ಯಕರ್ತೆಯರು ಸ್ವಚ್ಛತೆ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿ ಗುಣಮಟ್ಟದ ಆಹಾರವನ್ನು ತಯ್ಯಾರಿಸಿ ಮಕ್ಕಳಿಗೆ ಉಣ ಬಡಿಸುವಂತೆ ಕರೆ ನೀಡಿದರು.
ಈ ಕಾರ್ಯಕ್ರಮವನ್ನು ತಾ.ಪಂ ಅಧ್ಯಕ್ಷೆ ಸುನಂಧಾ ಕರದೇಸಾಯಿ ಉದ್ಘಾಟಿಸಿದರು. ವೇದಿಕೆ ಮೇಲೆ ಕಾರ್ಮಿಕ ಮುಖಂಡ ಅಂಬಿರಾವ್ ಪಾಟೀಲ,ತಾ.ಪಂ ಉಪಾಧ್ಯಕ್ಷ ಯಲ್ಲಪ್ಪ ನಾಯಿಕ, ಬಿಇಓ ಜಿ.ಬಿ.ಬಳಗಾರ, ಬಿಸಿಯೂಟ ಸಹಾಯಕ ನಿರ್ದೇಶಕ ಎ.ಬಿ.ಮಲಬನ್ನವರ, ಉಪಪ್ರಾಚಾರ್ಯ ಪಿ.ಎಚ್.ಕೌಜಲಗಿ, ಎಂ.ಡಿ.ಚುನಮರಿ, ಎಸ್.ಎಸ್.ಮಾಳಗಿ, ಬಿ.ಎಸ್.ಸಿಂಗಾಡಿ, ಬಿ.ಜಿ.ಕಲ್ಲೋಳಿ.ಕೆ.ಎಸ್.ಗಸ್ತಿ, ಪಿ.ವಿ.ಮುರ್ಕಿಭಾಂವಿ, ಎಂ.ಎಸ್.ಹಣಮನ್ನವರ, ಎಚ್.ಎಂ.ಬೆಣಚಿನಮರಡಿ, ಜಿ.ಎಸ್.ಪಾಟೀಲ,ಬಿ.ಆರ್.ಮುರಗೋಡ ಸೇರಿದಂತೆ ಅನೇಕರು ಇದ್ದರು.

Related posts: