RNI NO. KARKAN/2006/27779|Wednesday, July 30, 2025
You are here: Home » breaking news » ಗೋಕಾಕ;ಶಾಸಕರ ಮಾಗದರ್ಶನದಲ್ಲಿ ನಗರೋತ್ಥಾನ ಯೋಜನೆಯಲ್ಲಿ ಮಂಜೂರಾದ ಕಾರ್ಯಗಳನ್ನು ಪ್ರಾಮಾಣಿಕವಾಗಿ ಮಾಡಿ : ಖಾನಪ್ಪನವರ

ಗೋಕಾಕ;ಶಾಸಕರ ಮಾಗದರ್ಶನದಲ್ಲಿ ನಗರೋತ್ಥಾನ ಯೋಜನೆಯಲ್ಲಿ ಮಂಜೂರಾದ ಕಾರ್ಯಗಳನ್ನು ಪ್ರಾಮಾಣಿಕವಾಗಿ ಮಾಡಿ : ಖಾನಪ್ಪನವರ 

ಶಾಸಕರ ಮಾಗದರ್ಶನದಲ್ಲಿ ನಗರೋತ್ಥಾನ ಯೋಜನೆಯಲ್ಲಿ ಮಂಜೂರಾದ ಕಾರ್ಯಗಳನ್ನು ಪ್ರಾಮಾಣಿಕವಾಗಿ ಮಾಡಿ : ಖಾನಪ್ಪನವರ

 
ನಮ್ಮ ಬೆಳಗಾವಿ ಸುದ್ದಿ , ಗೋಕಾಕ : ಮಾ: 10 :
ವಾರ್ಡ ನಂ.22 ರಲ್ಲಿ ಮುಲ್ಲಾ ಅವರ ಮನೆಯಿಂದ ಬ್ಯಾಂಕ ಆಫ್ ಬರೋಡಾ ವರೆಗೆ ಅ ವೈಜ್ಞಾಣಿಕವಾಗಿದ್ದ ರಸ್ತೆ ಮತ್ತು ಗಟಾರು ಕಾಮಗಾರಿಯ ಪುನರ್ ನಿರ್ಮಾಣ ಕಾರ್ಯಕ್ಕೆ ಇಂದು ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕ.ರ.ವೇ. ತಾಲೂಕಾ ಅಧ್ಯಕ್ಷ ಬಸವರಾಜ ಖಾನಪ್ಪನವರ ಮಾನ್ಯ ಶಾಸಕರ ಹೆಸರಿಗೆ ಕಪ್ಪು ಚುಕ್ಕೆ ಬರದಂತೆ ಅವರ ಮಾಗದರ್ಶನದಲ್ಲಿ ಗೋಕಾಕ ನಗರದಲ್ಲಿ ನಗರೋತ್ಥಾನ ಯೋಜನೆಯಲ್ಲಿ ಮಂಜೂರಾದ ಕಾರ್ಯಗಳನ್ನು ಪ್ರಾಮಾಣಿಕವಾಗಿ ಮಾಡಿ ಗೋಕಾಕನಗರವನ್ನು ಮಾದರಿಯ ನಗರವನ್ನಾಗಿಸಲು ಶ್ರಮಿಸಬೇಕು. ಕಳೆದ ಅಕ್ಟೋಬರ ತಿಂಗಳಿನಲ್ಲಿ ನಗರ ಸಭೆ ನಗರೋತ್ಥಾನ (ಮುನಸಿಪಾಲ್ಟಿ) – 3 ನೇ ಹಂತದ ಪರಿಷ್ಕøತ ಕ್ರಿಯಾ ಯೋಜನೆಯಡಿಯಲ್ಲಿ ಹಳೆಯ ವಾರ್ಡ ನಂ 22 ರ ಹೊಸವಾರ್ಡ ನಂ.21 ರಲ್ಲಿ ಮುಲ್ಲಾ ಅವರ ಮನೆಯಿಂದ ಬ್ಯಾಂಕ ಆಫ್ ಬರೋಡಾ ವರೆಗೆ ಸುಮಾರು 430 ಮೀಟರ ಗಟಾರು ಮತ್ತು 430 ಮೀಟರ ರಸ್ತೆ ನಿರ್ಮಿಸಲಾಯಿತು. ಗುತ್ತಿಗೆದಾರರ ಬೇಜವಾಬ್ದಾರಿಯಿಂದ ಕೆಲಸ ಅವೈಜ್ಞಾನಿಕವಾಗಿ ರೂಪಗೊಂಡಿತ್ತು. ಇದರ ಬಗ್ಗೆ ಕಳೆದ ತಿಂಗಳ ಹಿಂದೆ ಕ.ರ.ವೇ ಸಂಬಂಧಪಟ್ಟ ಅಧಿಕಾರಿ ಮತ್ತು ಗುತ್ತಿಗೆದಾರರಿಗೆ ರಸ್ತೆ, ಗಟಾರು, ಅವೈಜ್ಞಾನಿಕವಾಗಿ ನಿರ್ಮಾಣಗೊಂಡ ಮನವಿ ನೀಡಿ ಕೆಲಸವನ್ನು ಪುನಃ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿತು. ಇದಕ್ಕೆ ಸ್ಪಂಧಿಸಿರುವ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕೆಲಸಪುನಃ ನಿರ್ಮಾಣಕ್ಕೆ ಮುಂದಾಗಿರುವದು ಸಂತೋಷದ ಸಂಗತಿ. ಯಾರಿಗೂ ತೊಂದರೆಯಾಗದಂತೆ ಕೆಲಸವನ್ನು ವರ್ಕ ಆರ್ಡರ ಪ್ರಕಾರ ಮಾಡಿಸಾರ್ವಜನಿಕರ ಹಿತ ಕಾಪಾಡಬೇಕೆಂದು ಖಾನಪ್ಪನವರ ಹೇಳಿದರು.
ಈ ಸಂದರ್ಭದಲ್ಲಿನಗರ ಸಭೆಯ ಕಿರಿಯ ಅಭಿಯಂತರ ಎಸ್. ಎಚ್. ಗಿಡದಹುಬ್ಬಳಿ ಮಾನಸ ಕನ್ಸಲಟಂಟ ಅಧಿಕಾರಿ ಮುರಿಗೇಶ ಬಾಳಿಕಾಯಿ ಕೃಷ್ಣಾ ಖಾನಪ್ಪನವರ, ಸಾಧಿಕ ಹಲ್ಯಾಳ, ಮುಗುಟ ಪೈಲವಾನ, ಮಲ್ಲಪ್ಪಾ ತಲೆಪ್ಪಗೋಳ, ಲಕ್ಕಪ್ಪ ನಂದಿ, ಯಲ್ಲಪ್ಪ ಧರ್ಮಟ್ಟಿ, ನಿಜಾಮ ನದಾಫ, ಶಬ್ಬೀರ ಬೇಪಾರಿ, ಭೀಮಶಿ ಪುಠಾಣಿ, ಅಲ್ಲಮ್ ಚಪ್ಪು, ಕಿರಣ ದಾಸನವರ ಪ್ರಕಾಶ ಕಿತ್ತೂರ, ಶಬ್ಬೀರ ಗೌಂಡಿ, ಸಿದ್ದು ಪಿ.ಕೆ. ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.

Related posts: