ರಾಯಭಾಗ: ಅಧ್ಯಕ್ಷರಾಗಿ ಪಿ.ಆರ್.ಗುಡೋಡಗಿ ಹಾಗೂ ಉಪಾಧ್ಯಕ್ಷರಾಗಿ ಎಸ್.ಎಚ್.ನಿಡೋಣಿ ಆಯ್ಕೆ
ರಾಯಭಾಗ : ಅಧ್ಯಕ್ಷರಾಗಿ ಪಿ.ಆರ್.ಗುಡೋಡಗಿ ಹಾಗೂ ಉಪಾಧ್ಯಕ್ಷರಾಗಿ ಎಸ್.ಎಚ್.ನಿಡೋಣಿ ಆಯ್ಕೆ
ರಾಯಬಾಗ ಜು 6 : ವಕೀಲರ ಸಂಘದ ಪದಾಧಿಕಾರಿಗಳ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪಿ.ಆರ್. ಗುಡೋಡಗಿ, ಉಪಾಧ್ಯಕ್ಷರಾಗಿ ಎಸ್.ಎಚ್.ನಿಡೋಣಿ, ಕಾರ್ಯದರ್ಶಿಯಾಗಿ ಕೆ.ಆರ್.ಕೋಟಿವಾಲೆ, ಸಹಕಾರ್ಯದರ್ಶಿಯಾಗಿ ಆರ್.ಓ.ಲೋಹಾರ ಆಯ್ಕೆಯಾದರು.
ಬುಧವಾರದಂದು 2017-19ನೇ ಸಾಲಿನ ವಕೀಲರ ಸಂಘದ ಪದಾಧಿಕಾರಿಗಳ ಆಯ್ಕೆಗಾಗಿ ನಡೆದ ವಕೀಲರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಾಲ್ಕು ಅಭ್ಯರ್ಥಿಗಳು, ಉಪಾಧ್ಯಕ್ಷ ಸ್ಥಾನಕ್ಕೆ ನಾಲ್ಕು ಅಭ್ಯರ್ಥಿಗಳು, ಕಾರ್ಯದರ್ಶಿ ಸ್ಥಾನಕ್ಕೆ ನಾಲ್ಕು ನಾಲ್ಕು ಅಭ್ಯರ್ಥಿಗಳು ಹಾಗೂ ಸಹಕಾರ್ಯದರ್ಶಿ ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ಅಂತಿಮ ಚುನಾವಣಾ ಕಣದಲ್ಲಿದ್ದರು. ರಾಯಬಾಗ ವಕೀಲರ ಸಂಘದಲ್ಲಿ 256 ಸದಸ್ಯರಿದ್ದು, ಅದರಲ್ಲಿ 238 ಸದಸ್ಯರು ತಮ್ಮ ಮತವನ್ನು ಚಲಾಯಿಸಿದರು. ತೀವ್ರ ಕುತೂಹಲ ಕೆರಳಿಸಿದ್ದ ಚುನಾವಣೆಯು ತುರಿಸಿನಿಂದ ಕೂಡಿತ್ತು.
ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 4 ಗಂಟೆವರೆಗೆ ಮತದಾನ ನಡೆಯಿತು. ಮತದಾನ ಮುಗಿದ ಕೂಡಲೇ ಮತ ಎಣಿಕೆ ಪ್ರಾರಂಭವಾಗಿ ಒಟ್ಟು ಹತ್ತು ಸುತ್ತಿನ ಏಣಿಕೆ ನಡೆದು 6.30 ಗಂಟೆಗೆ ಫಲಿತಾಂಶ ಹೊರಬಿಳುವುದರ ಮೂಲಕ ಚುನಾವಣೆಗೆ ತೆರೆಬಿದ್ದಿತ್ತು. ಎರಡು ವರ್ಷದ ಅವಧಿಗೆ ರಾಯಬಾಗ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಪಿ.ಆರ್. ಗುಡೋಡಗಿ, ಉಪಾಧ್ಯಕ್ಷರಾಗಿ ಎಸ್.ಎಚ್.ನಿಡೋಣಿ, ಕಾರ್ಯದರ್ಶಿಯಾಗಿ ಕೆ.ಆರ್.ಕೋಟಿವಾಲೆ, ಸಹಕಾರ್ಯದರ್ಶಿಯಾಗಿ ಆರ್.ಓ.ಲೋಹಾರ ಆಯ್ಕೆಯಾದರು.
ಚುನಾವಣಾಧಿಕಾರಿಗಳಾಗಿ ಅಧ್ಯಕ್ಷ ಬಿ.ಆರ್.ಪಡಲಾಳೆ, ಹಿರಿಯ ನ್ಯಾಯವಾದಿ ಎಂ.ಎನ್.ಯಡವನ್ನವರ, ಆರ್.ಎಸ್.ಕಳ್ಳಿಗುದ್ದಿ, ಎಸ್.ಪಿ.ಕಾಂಬಳೆ ಕಾರ್ಯನಿರ್ವಹಿಸಿದರು. ನೂತನ ಪದಾಧಿಕಾರಿಗಳು ವಕೀಲರ ಸಂಘದ ಎಲ್ಲ ಸದಸ್ಯರಿಗೆ ಸಿಹಿಹಂಚಿದರು.
ವರದಿ: ರಂಜೀತ ಕಾಂಬಳೆ
