RNI NO. KARKAN/2006/27779|Sunday, September 14, 2025
You are here: Home » breaking news » ಗೋಕಾಕ:ಕೃಷಿಯಲ್ಲಿ ಆಧುನಿಕ ಪದ್ದತಿಯನ್ನು ಅಳವಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಿ : ಶಾಸಕ ರಮೇಶ್

ಗೋಕಾಕ:ಕೃಷಿಯಲ್ಲಿ ಆಧುನಿಕ ಪದ್ದತಿಯನ್ನು ಅಳವಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಿ : ಶಾಸಕ ರಮೇಶ್ 

ಕೃಷಿಯಲ್ಲಿ ಆಧುನಿಕ ಪದ್ದತಿಯನ್ನು ಅಳವಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಿ : ಶಾಸಕ ರಮೇಶ್

ಗೋಕಾಕ ಎ 28 : ರೈತರು ಕೃಷಿಯಲ್ಲಿ ಆಧುನಿಕ ಪದ್ದತಿಯನ್ನು ಅಳವಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಿರೆಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಸೋಮವಾರದಂದು ನಗರದ ತಮ್ಮ ಕಾರ್ಯಾಲಯದ ಆವರಣದಲ್ಲಿ ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ಮಂಜೂರಾದ 9 ಕಬ್ಬು ಕಟಾವು ಯಂತ್ರಗಳನ್ನು ರೈತರಿಗೆ ವಿತರಿಸಿ ಅವರು ಮಾತನಾಡಿದರು.
ರೈತರು ಬದಲಾವಣೆಗೆ ಸ್ವಂದಿಸಿ ಕೃಷಿ ಇಲಾಖೆ ಹಾಗೂ ಇತರ ಇಲಾಖೆಗಳ ಮಾರ್ಗದರ್ಶನದಲ್ಲಿ ಆಧುನಿಕ ಪದ್ಧತಿಗಳನ್ನು ಆಳವಡಿಸಿಕೊಳ್ಳಿ ಈ ಕಬ್ಬು ಕಟಾವು ಯಂತ್ರಗಳಿಂದ ಕೂಲಿಕಾರರ ಸಮಸ್ಯೆ ಪರಿಹಾರದೊಂದಿಗೆ ಕಬ್ಬು ಬೆಳೆಗಾರರಿಗೆ ಹೆಚ್ಚಿನ ಅನುಕೂಲಕರವಾಗುವುದು ಇದರಂತೆ ಇತರ ಯಂತ್ರಗಳನ್ನು ಹೆಚ್ಚು ಉಪಯೋಗಿಸಿ ಕೃಷಿಯಲ್ಲಿ ಯಶಸ್ವಿಯಾಗಿರೆಂದು ಹೇಳಿದರು.

ಚಿಕ್ಕೋಡಿ ಉಪ ಕೃಷಿ ನಿರ್ದೇಶಕ ಎಚ್.ಡಿ.ಕೋಳೆಕರ ಮಾತನಾಡಿ ರಾಜ್ಯದಲ್ಲಿಯೇ ಅತೀ ಹೆಚ್ಚು ಕಬ್ಬು ನುರಿಸುವ ಕಾರ್ಖಾನೆಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 3.15 ಲಕ್ಷ(ಹೆ) ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿದ್ದು, ಆದರೆ ಇತ್ತಿಚಿನ ವರ್ಷಗಳಲ್ಲಿ ಕಬ್ಬು ಬೆಳೆದ ರೈತರು ಕಬ್ಬು ಕಟಾವು ಮಾಡುವುದಕ್ಕಾಗಿ ಗ್ಯಾಂಗ್ ಹುಡುಕುವುದು ಮತ್ತು ಕೂಲಿಕಾರರನ್ನು ಹುಡುಕುವುದು ದೊಡ್ಡ ಸವಾಲವಾಗಿದೆ. 2023-24 ರಲ್ಲಿ ಬೆಳಗಾವಿ ಜಿಲ್ಲೆಯಲ್ಲಿ 141 ಅರ್ಜಿ ಸಲ್ಲಿಕೆಯಾಗಿದ್ದು ಲಾಟರಿ ಮೂಲಕ 31 ಜನರಿಗೆ ಕಬ್ಬು ಕಟಾವು ಯಂತ್ರ ವಿತರಿಸಲಾಗಿತ್ತು. ಆದರೆ 2024-25 ರಲ್ಲಿ ಒಟ್ಟು 379 ಅರ್ಜಿ ಸಲ್ಲಿಕೆಯಾಗಿದ್ದು 77 ಜನರಿಗೆ ಕಬ್ಬು ಕಟಾವು ಯಂತ್ರಗಳನ್ನು ವಿತರಿಸಲಾಗಿದೆ ಎಂದು ಹೇಳಿದರು.

ಒಟ್ಟು 98 ಲಕ್ಷ ರೂ ಮೌಲ್ಯದ ಕಬ್ಬು ಕಟಾವು ಯಂತ್ರವನ್ನು SC/ST ಸಮುದಾಯದವರಿಗೆ ಶೇ.50% ರಷ್ಟು ರಿಯಾಯತಿ ಮತ್ತು ಸಾಮಾನ್ಯ ವರ್ಗದವರಿಗೆ ಶೇ.40% ರಷ್ಟು ಸಹಾಯಧನದಲ್ಲಿ ಕೃಷಿ ಇಲಾಖೆಯಿಂದಾ ವಿರತಸಲಾಗುತ್ತಿದ್ದು. ವರ್ಷದಿಂದ ವರ್ಷಕ್ಕೆ ಅರ್ಜಿ ಸಲ್ಲಿಸುವ ರೈತರ ಸಂಖ್ಯೆ ಹೆಚ್ಚಾಗಿದೆ. ಎಂದು ಅವರು ತಿಳಿಸಿದರು. ಅಂದರೆ ಸಾಮಾನ್ಯ ರೈತರಿಗೆ 40 ಲಕ್ಷ SC/ST ರೈತರಿಗೆ 50 ಲಕ್ಷ ಸಬ್ಸಿಡಿ ಇರುತ್ತದೆ ಎಂದು ಅವರು ತಿಳಿಸಿದರು.
ಗೋಕಾಕ ತಾಲ್ಲೂಕಿನಲ್ಲಿ 2024-25 ನೇ ಸಾಲಿಗೆ ಒಟ್ಟು 24 ಅರ್ಜಿಗಳು ಸಲ್ಲಿಕೆಯಾಗಿದ್ದು ಲಾಟರಿ ಮೂಲಕ 9 ಜನರಿಗೆ ಕಬ್ಬು ಕಟಾವು ಯಂತ್ರಗಳನ್ನು ವಿತರಿಸಲಾಗಿದೆ.
ಹಾರ್ವೆಸ್ಟರ್ ಯಂತ್ರಗಳಿಂದ ಕಬ್ಬನ್ನು ಹಗಲು & ರಾತ್ರಿ ಯಾವುದೇ ಸಮಯದಲ್ಲಿ ಕಬ್ಬು ಕಟಾವು ಮಾಡಬಹುದಾಗಿದೆ. ಸದರೀ ಯಂತ್ರವು ಗಂಟೆಗೆ 15-20 ಟನ್ ಕಟಾವು ಮಾಡುತ್ತದೆ. ಒಂದು ದಿನದಲ್ಲಿ 6-8 ಎಕರೆ ಕಟಾವು ಮಾಡಬಹುದಾಗಿದೆ.

ಈ ಸಂದರ್ಭದಲ್ಲಿ , ಗೋಕಾಕ ಸಹಾಯಕ ಕೃಷಿ ನಿರ್ದೇಶಕ ಎಂ.ಎಂ.ನದಾಫ ಹಾಗೂ ಶಾಸಕರ ಆಪ್ತ ಸಹಾಯಕರಾದ ಭೀಮಗೌಡ ಪೋಲೀಸಪಾಟೀಲ,ಸುರೇಶ ಸನದಿ, ಜಿ.ಪಂ.ಮಾಜಿ ಸದಸ್ಯರಾದ ಟಿ.ಆ‌ರ್.ಕಾಗಲ ಹಾಗೂ ಮಡ್ಡೆಪ್ಪ ತೋಳಿನವರ ಮತ್ತು ಕೃಷಿ ಅಧಿಕಾರಿಗಳು ಹಾಗೂ ಕೃಷಿ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

Related posts: