RNI NO. KARKAN/2006/27779|Thursday, October 16, 2025
You are here: Home » breaking news » ಗೋಕಾಕ:ವಿಜ್ಞಾನಿ ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಪ್ರೋ: ಸಿ.ಎನ್.ಆರ್.ರಾವ್ ಅವರಿಗೆ ಕಾಯಕ ಶ್ರೀ ಪ್ರಶಸ್ತಿ

ಗೋಕಾಕ:ವಿಜ್ಞಾನಿ ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಪ್ರೋ: ಸಿ.ಎನ್.ಆರ್.ರಾವ್ ಅವರಿಗೆ ಕಾಯಕ ಶ್ರೀ ಪ್ರಶಸ್ತಿ 

ವಿಜ್ಞಾನಿ ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಪ್ರೋ: ಸಿ.ಎನ್.ಆರ್.ರಾವ್ ಅವರಿಗೆ ಕಾಯಕ ಶ್ರೀ ಪ್ರಶಸ್ತಿ

ಗೋಕಾಕ ಜ 30 : ಖ್ಯಾತ ವಿಜ್ಞಾನಿ ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಪ್ರೋ: ಸಿ.ಎನ್.ಆರ್.ರಾವ್ ಅವರಿಗೆ ನಗರದ ಶೂನ್ಯ ಸಂಪಾದನ ಮಠದಿಂದ ಪ್ರತಿವರ್ಷ ಶರಣ ಸಂಸ್ಕøತಿ ಉತ್ಸವದಲ್ಲಿ ನೀಡುವ ಕಾಯಕ ಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಶರಣ ಸಂಸ್ಕøತಿ ಉತ್ಸವ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಕಲ್ಲೋಳ್ಳಿ ಹೇಳಿದರು.
ಅವರು ಬುಧವಾರದಂದು ನಗರದ ವಾಲ್ಮೀಕಿ ವೃತ್ತದಲ್ಲಿರುವ ಶ್ರೀ ಚನ್ನಬಸವೇಶ್ವರ ವಿದ್ಯಾಪೀಠ ಬಿಸಿಎ ಮಹಾವಿದ್ಯಾಲಯದ ಆವರಣದಲ್ಲಿ ಕರೆದ ಶರಣ ಸಂಸ್ಕøತಿ ಉತ್ಸವದ ಪತ್ರಿಕಾಗೋಷ್ಠೀಯನ್ನುದ್ದೇಶಿಸಿ ಮಾತನಾಡಿದರು.
ಫೆ.1 ರಿಂದ 4ರವರೆಗೆ ನಾಲ್ಕು ದಿನಗಳ ಪರ್ಯಂತ ಜರಗುವ ಕಾಯಕಯೋಗಿ ಶ್ರೀ.ಮ.ನಿ.ಪ್ರ ಲಿಂಗೈಕ್ಯ ಬಸವ ಮಹಾಸ್ವಾಮಿಜಿಯವರ 14ನೇ ಪುಣ್ಯ ಸ್ಮರಣೋತ್ಸವ ನಿಮಿತ್ಯ ಶರಣ ಸಂಸ್ಕøತಿ ಉತ್ಸವ ಅತೀ ವಿಜೃಂಭನೆಯಿಂದ ಜರುಗಲಿದೆ ಎಂದು ತಿಳಿಸಿದ ಅವರು ಫೆ 1ರಂದು ಸಂಜೆ 6ಗಂಟೆಗೆ ಭಾವೈಕ್ಯತೆ ಸಮಾವೇಶ ಹಾಗೂ ಗದುಗಿನ ಜಗದ್ಗುರು ಮಹಾಸನ್ನಿಧಿಯವರಿಗೆ ಗುರುವಂದನೆ ನಡೆಯಲಿದ್ದು ದಿವ್ಯ ಸಾನಿಧ್ಯವನ್ನು
ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಡಾ: ತೋಂಟದ ಸಿದ್ಧರಾಮ ಮಹಾಸ್ವಾಮಿಜಿ, ನೇತ್ರತ್ವವನ್ನು ಹಜರತ್ ಅಖದಸ್ ಮೌಲಾನಾ ಚತುರ್ವೇದಿ ಮಹಫುಜುರ್ ಶಾಹೀನ ಜಮಾಲಿ ಸಾಹಬ ನವದೆಹಲಿ, ಉದ್ಘಾಟನೆಯನ್ನು ಮಾಜಿ ಸಚಿವ,ಶಾಸಕ ರಮೇಶ ಜಾರಕಿಹೊಳಿ ನೆರವೇರಿಸುವರು, ಮುಖ್ಯ ಅತಿಥಿಗಳಾಗಿ ಅಂಬಿರಾವ್ ಪಾಟೀಲ, ನಾಡೋಜ ಡಾ: ಮಹೇಶ ಜೋಶಿ,ಆನಂದ ಚೋಪ್ರಾ, ಉಮೇಶ ಬಾಳಿ,ಅಬ್ದುಲ್ ರೆಹಾನ್ ಅಲ್ಲಾಭಕ್ಷ ಶೇಖ ಸೇರಿದಂತೆ ಅನೇಕ ಗಣ್ಯರು ಭಾಗವಹಿಸುವರು.
ಫೆ.2ರಂದು ಸಂಜೆ 6 ಗಂಟೆಗೆ ಶಿಕ್ಷಕರ ಸಮಾವೇಶ ಹಾಗೂ ಕಾಯಕ ಶ್ರೀ ಪ್ರಶಸ್ತಿ ಪ್ರಧಾನ ಜರುಗುವುದು. ಭಾರತ ರತ್ನ ಪ್ರೋ: ಸಿ.ಎನ್.ಆರ್.ರಾವ್ ಅವರಿಗೆ ಕಾಯಕಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹುಬ್ಬಳ್ಳಿಯ ಶ್ರೀ ಮನ್ ಮಹಾರಾಜ ನಿರಂಜನ ಜಗದ್ಗುರು ಗುರುಸಿದ್ದರಾಜಯೋಗಿಂದ್ರ ಮಹಾಸ್ವಾಮಿಜಿ ಮತ್ತು ಶಿಗ್ಗಾಂವಿಯ ಶ್ರೀ ಮ.ನಿ.ಪ್ರ ಸಂಗನಬಸವ ಮಹಾಸ್ವಾಮಿಜಿ ಆಗಮಿಸುವರು.ಮುಖ್ಯ ಅತಿಥಿಗಳಾಗಿ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಉಪಸ್ಥಿತರಿರುವರು. ಫೆ.3ರಂದು ಸಂಜೆ 6 ಗಂಟೆಗೆ ಮಹಿಳಾ ಸಮಾವೇಶ ಮತ್ತು ಹೆಣ್ಣು ಮಕ್ಕಳನ್ನು ರಕ್ಷಿಸಿ, ಹೆಣ್ಣು ಮಕ್ಕಳನ್ನು ಓದಿಸಿ ವಿಶೇಷ ಉಪನ್ಯಾಸ ಜರುಗುವುದು. ಮುಂಡರಗಿಯ ಶ್ರೀ ಮ.ನಿ ಪ್ರ ಜಗದ್ಗುರು ನಾಡೋಜ ಡಾ: ಅನ್ನದಾನೇಶ್ವರ ಮಹಾಶಿವಯೋಗಿಗಳು ದಿವ್ಯ ಸಾನಿಧ್ಯ ವಹಿಸುವರು. ನೇತ್ರತ್ವವನ್ನು ಶ್ರೀ ಮ.ನಿ.ಪ್ರ ಮಲ್ಲಿಕಾರ್ಜುನ ಮಹಾಸ್ವಾಮಿಜಿ ವಹಿಸುವರು. ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ಜಿ.ಪಂ ಅಧ್ಯಕ್ಷೆ ಆಶಾ ಐಹೊಳೆ, ಜಿಲ್ಲಾ ವೈದ್ಯಾಧಿಕಾರಿ ಡಾ: ಅಪ್ಪಾಸಾಬ ನರಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿರುವರು. ಫೆ.4ರಂದು ಬೆಳಿಗ್ಗೆ ಕೃರ್ತು ಗದ್ದುಗೆ ಹಾಗೂ ಲಿಂಗೈಕ್ಯ ಶ್ರೀ ಬಸವ ಮಹಾಸ್ವಾಮಿಜಿ ಗದ್ದುಗೆಗೆ ಅಭಿಷೇಕ ಹಾಗೂ ಬಿಲ್ವಾರ್ಚನೆ,ಜಂಗಮ ವಟುಗಳಿಗೆ ಅಯ್ಯಾಚಾರ ದೀಕ್ಷೆ,ಸಹಸ್ರ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗುವುದು.ಸಂಜೆ 6ಗಂಟೆಗೆ ನಾಟಕೋತ್ಸವ ನಡೆಯುವುದು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಮ.ನಿ.ಪ್ರ ಬಸವಲಿಂಗ ಮಹಾಸ್ವಾಮಿಜಿ, ಶ್ರೀ ಮ.ನಿ.ಪ್ರ ಶಿವಾನಂದ ಮಹಾಸ್ವಾಮಿಜಿ, ಹುಣಶ್ಯಾಳ ಪಿಜಿ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದ ಪೂಜ್ಯ ಶ್ರೀ ನಿಜಗುಣ ದೇವರು ವಹಿಸುವರು. ಕಾರ್ಯಕ್ರಮವನ್ನು ನಗರಸಭೆ ಪೌರಾಯುಕ್ತ ಎಂ.ಎಚ್.ಅತ್ತಾರ ಉದ್ಘಾಟಿಸುವರು. ನಾಲ್ಕು ದಿನಗಳವರೆಗೆ ನಡೆಯುವ ಶರಣ ಸಂಸ್ಕøತಿ ಉತ್ಸವದ ಕಾರ್ಯಕ್ರಮದಲ್ಲಿ ಪ್ರತಿದಿನ ಸಂಜೆ ಸಮಾಜದ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಸಾಧನೆಗೈದ ಸಾಧಕರಿಗೆ,ಶರಣ ಶರಣಿಯರಿಗೆ, ಸಮಾಜ ಸೇವಕರಿಗೆ ಶ್ರೀಮಠದಿಂದ ಗೌರವ ಸನ್ಮಾನ ಜರುಗುವುದು.
ನಾಡಿನ ಸಮಸ್ತ ಭಕ್ತಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಶರಣ ಸಂಸ್ಕøತಿ ಉತ್ಸವ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಕಲ್ಲೋಳ್ಳಿ ಮನವಿ ಮಾಡಿಕೊಂಡಿದ್ದಾರೆ.
ಪ್ರತಿಕಾಗೋಷ್ಠಿಯಲ್ಲಿ ಶೂನ್ಯ ಸಂಪಾದನ ಮಠದ ಪೀಠಾಧಿಕಾರಿ ಶ್ರೀ ಮುರುಘರಾಜೇಂದ್ರ ಸ್ವಾಮಿಜಿ, ಶರಣ ಸಂಸ್ಕøತಿ ಉತ್ಸವ ಸಮಿತಿ ಗೌರವಾಧ್ಯಕ್ಷ ರುದ್ರಗೌಡ ಪಾಟೀಲ, ಜಾನಪದ ವಿದ್ವಾಂಸ ಡಾ: ಸಿ.ಕೆ.ನಾವಲಗಿ, ವಿವೇಕ ಜತ್ತಿ, ಪ್ರವೀಣ ಚುನಮರಿ, ಕರವೇ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ, ಅಡಿವೇಶ ಗವಿಮಠ, ಶಿಕ್ಷಕ ಆರ್.ಎಲ್.ಮಿರ್ಜಿ ಸೇರಿದಂತೆ ಇತರರು ಇದ್ದರು.

Related posts: