RNI NO. KARKAN/2006/27779|Friday, February 13, 2026
You are here: Home » breaking news » ಬೆಳಗಾವಿ:ಜೈಲು ಶಿಕ್ಷೆ ಆದೇಶ ಹಿಂಪಡಿಯಲು ಆಗ್ರಹ : ಬೆಳಗಾವಿಯಲ್ಲಿ ಪತ್ರಕರ್ತರಿಂದ ಸಭಾಧ್ಯಕ್ಷರಿಗೆ ಮನವಿ

ಬೆಳಗಾವಿ:ಜೈಲು ಶಿಕ್ಷೆ ಆದೇಶ ಹಿಂಪಡಿಯಲು ಆಗ್ರಹ : ಬೆಳಗಾವಿಯಲ್ಲಿ ಪತ್ರಕರ್ತರಿಂದ ಸಭಾಧ್ಯಕ್ಷರಿಗೆ ಮನವಿ 

ಜೈಲು ಶಿಕ್ಷೆ ಆದೇಶ ಹಿಂಪಡಿಯಲು ಆಗ್ರಹ : ಬೆಳಗಾವಿಯಲ್ಲಿ ಪತ್ರಕರ್ತರಿಂದ ಸಭಾಧ್ಯಕ್ಷರಿಗೆ ಮನವಿ

 

ಬೆಳಗಾವಿ ಜೂ 27: ಹಕ್ಕುಚ್ಯುತಿ ಪ್ರಕರಣದಲ್ಲಿ ಇಬ್ಬರು ಪತ್ರಕರ್ತರಿಗೆ ವಿಧಿಸಿದ ಒಂದು ವರ್ಷ ಜೈಲು ಶಿಕ್ಷೆ ಆದೇಶವನ್ನು ಹಿಂತೆಗೆದುಕೋಳುವಂತೆ ಆಗ್ರಹಿಸಿ ಬೆಳಗಾವಿ ಪತ್ರಕರ್ತರು ಮತ್ತು ಜನಪರ ಸಂಘಟನೆಯವರು ಜಿಲ್ಲಾಧಿಕಾರಿ ಅವರ ಮುಖಾಂತರ ಸರಕಾರಕ್ಕೆ ಮನವಿ ಅರ್ಷಿಸಿದರು

ಹಿರಿಯ ಪತ್ರಕರ್ತರಾದ ಸರ್ಜು ಕಾಟ್ಕರ್, ಅಶೋಕ ಚಂದರಗಿ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. 

ಹಿರಿಯ ಪತ್ರಕರ್ತ ಹಾಗೂ ಸಂಪಾದಕ ರವಿ ಬೆಳಗೆರೆ ಮತ್ತು ನಾಗರಾಜ್ ಅವರಿಗೆ ವಿಧಿಸಿದ ಹಕ್ಕುಚ್ಯುತಿ ಶಿಕ್ಷೆ ಕಾನೂನು ಬಾಹಿರವಾಗಿದೆ, ಪತ್ರಕರ್ತರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕ್ರಮವಾಗಿದೆ. ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

Related posts: