ಗೋಕಾಕ:“ಮಾನವನಿಂದ ಬೇರ್ಪಡಿಸಲಾಗದ ಹಕ್ಕುಗಳು ಮಾನವ ಹಕ್ಕುಗಳು”
“ಮಾನವನಿಂದ ಬೇರ್ಪಡಿಸಲಾಗದ ಹಕ್ಕುಗಳು ಮಾನವ ಹಕ್ಕುಗಳು”
ಲೇಖನ : ಶಕೀಲಅಹ್ಮದ ಎಮ್. ಪೀರಜಾದೆ
ರಾಜ್ಯಶಾಸ್ತ್ರ ಉಪನ್ಯಾಸಕರು ಗೋಕಾಕ .
ಗೋಕಾಕ ಡಿ ಸೆ 11 : ಡಿಸೆಂಬರ್ 10, ವಿಶ್ವ ಮನುಕುಲದ ಇತಿಹಾಸದಲ್ಲಿನಒಂದು ಪ್ರಮುಖ ಮೈಲುಗಲ್ಲು. ಏಕೆಂದರೆ ವಿಶ್ವಸಂಸ್ಥೆಯುಡಿಸೆಂಬರ್ 10, 1948 ರಂದು ಗೊತ್ತುವಳಿಯೊಂದನ್ನು ಅಂಗೀಕರಿಸಿ ತನ್ನೆಲ್ಲ ಸದಸ್ಯ ರಾಷ್ಟ್ರಗಳು ಮಾನವ ಹಕ್ಕುಗಳನ್ನು ಸಂವಿಧಾನದಲ್ಲಿ ಅಳವಡಿಸಿಕೊಂಡು ಅನುಷ್ಠಾನಗೊಳಿಸುವ ದಿಸೆಯಲ್ಲಿ “ವಿಶ್ವ ಮಾನವ ಹಕ್ಕುಗಳ ಘೋಷಣೆ”(Uಟಿiveಡಿsಚಿಟ ಆeಛಿಟಚಿಡಿಚಿಣioಟಿ oಜಿ ಊumಚಿಟಿ ಖighಣs) ಮಾಡಿದ ದಿನ.ಆ ಪ್ರಕಾರ ಪ್ರತಿ ವರ್ಷ ಡಿಸೆಂಬರ್ 10 ರಂದು ವಿಶ್ವದಾದ್ಯಂತಮಾನವ ಹಕ್ಕುಗಳ ದಿನವನ್ನು ಆಚರಿಸಲಾಗುತ್ತಿದೆ.
ರಾಜ್ಯಶಾಸ್ತ್ರ ಪಿತಾಮಹನಾದಅರಿಸ್ಟಾಟಲ್‍ನು“ಮಾನವನ ಬದುಕುಎಂದರೆಕ್ರಿಮಿ ಕೀಟಗಳಂತೆ ಬದುಕುವುದಲ್ಲ ಬದಲಾಗಿಅತ್ಯುತ್ತಮರೀತಿಯಲ್ಲಿ ಬದುಕುವುದಾಗಿದೆ”ಎಂದು ಅಭಿಪ್ರಾಯಪಡುತ್ತಾರೆ.ಆ ನಿಟ್ಟಿನಲ್ಲಿ ನೆಮ್ಮದಿಯುತ, ಸುಖಕರ, ಆರೋಗ್ಯಪೂರ್ಣ ಬದುಕನ್ನು ಸಾಗಿಸುವುದು ಪ್ರತಿಯೊಬ್ಬ ಮಾನವನ ಜನ್ಮಸಿದ್ಧ ಹಕ್ಕು ಎನ್ನಬಹುದು.
“ಮಾನವನಿಂದ ಬೇರ್ಪಡಿಸಲಾಗದ ಹಕ್ಕುಗಳು ಮಾನವ ಹಕ್ಕುಗಳು”.ಯಾವುದೇರೀತಿಯಧರ್ಮ, ಮತ, ಪಂಥ, ಭಾಷೆ, ಲಿಂಗ, ವರ್ಣ, ಜನಾಂಗ, ಸರಕಾರ ಮುಂತಾದವುಗಳ ತಾರತಮ್ಯಗಳಿಲ್ಲದೇಜಗತ್ತಿನ ಪ್ರತಿಯೊಬ್ಬ ಮಾನವನುಹೊಂದಿರುವ ಮೂಲಭೂತ ಅವಶ್ಯಕತೆಗಳನ್ನು ಮಾನವ ಹಕ್ಕುಗಳೆಂದು ಹೇಳಬಹುದು.ಉದಾಹರಣೆಗೆಜೀವಿಸುವ ಹಕ್ಕು, ಸ್ವಾತಂತ್ರ್ಯ, ಸಮಾನತೆಗಳ ಹಕ್ಕು, ನೆಮ್ಮದಿ ಸುರಕ್ಷತೆಯ ಹಕ್ಕು,ಸ್ವಚ್ಛನೀರು, ಗಾಳಿ ಪರಿಸರ ಹೊಂದುವ ಹಕ್ಕು ಇತ್ಯಾದಿಗಳು ಮಾನವನ ಅವಿಭಾಜ್ಯ ಹಕ್ಕುಗಳಾಗಿದ್ದು ಇವುಗಳಿಲ್ಲದ ಬದುಕುಶೂನ್ಯ.
“ಸಕಲ ಜೀವಾತ್ಮಗಳಲ್ಲಿ ಮಾನವಜನ್ಮವೇ ಲೇಸು” ಎನ್ನುವರು.ಆ ಶ್ರೇಷ್ಠತೆಯನ್ನುಕಾಯ್ದುಕೊಳ್ಳಬೇಕಾದರೆ ಹಾಗೂ ಅತ್ಯುತ್ತಮಜೀವನ ಮಟ್ಟವನ್ನು ಹೊಂದಬೇಕಾದರೆಮಾನವ ಹಕ್ಕುಗಳ ಬಗ್ಗೆ ಸರಿಯಾದ ತಿಳುವಳಿಕೆ ಹಾಗೂ ಅವುಗಳ ಲಭ್ಯತೆಯಅವಶ್ಯಕತೆಇದೆ.ಈ ಹಕ್ಕುಗಳು ಯಾವುದೇ ಸರಕಾರಗಳು ನೀಡುವಎಂಜಲುಅಲ್ಲ. ಬದಲಾಗಿ ಮಾನವನುಜನ್ಮತಃಪಡೆದುಕೊಳ್ಳುವ ಹಕ್ಕುಗಳಾಗಿದ್ದು ಇವುಗಳನ್ನು ನಿರಾಕರಿಸುವಂತಿಲ್ಲ.
ಮಾನವ ಹಕ್ಕುಗಳು ಓರ್ವ ವ್ಯಕ್ತಿಯ ಸರ್ವತೋಮುಖ ವ್ಯಕ್ತಿತ್ವದ ವಿಕಾಸದಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತವೆ. ವ್ಯಕ್ತಿಗೌರವ, ಘನತೆ ಹೆಚ್ಚಿಸಲು, ಸರಕಾರದ ಹಾಗೂ ಉಳ್ಳವರ ಶೋಷಣೆ-ದಬ್ಬಾಳಿಕೆ ತಪ್ಪಿಸಲು, ಬಡವರ ಶ್ರಮಿಕರ ಹಿತಾಸಕ್ತಿಕಾಪಾಡಲು, ಚಿಕ್ಕಮಕ್ಕಳು, ಮಹಿಳೆಯರು, ಅಂಗವಿಕಲರು ವೃದ್ಧರುಉತ್ತಮರೀತಿಯಲ್ಲಿ ಬದುಕಲುಅಲ್ಲದೇಅಲ್ಪಸಂಖ್ಯಾತರು ಬಹುಸಂಖ್ಯಾತರ ನಡುವೆ ನೆಮ್ಮದಿಯುತವಾಗಿರಲುಅಂತಿಮವಾಗಿ“ಮನುಕುಲಂ ಒಂದೇ ವಲಂ” ಎಂಬ ಉಕ್ತಿಯನ್ನು ಸಾಕಾರಗೊಳಿಸುವ ದಿಶೆಯಲ್ಲಿ ಮಾನವ ಹಕ್ಕುಗಳು ಅನಿವಾರ್ಯವಾಗಿರುತ್ತವೆ.
ಮಾನವ ಹಕ್ಕುಗಳ ಪರಿಕಲ್ಪನೆತುಂಬಾ ಪುರಾತನವಾಗಿದೆ.ಸುಮಾರುಐದು ಸಾವಿರ ವರ್ಷಗಳ ಹಿಂದೆಯೇಪ್ರಸಿದ್ಧ ಗ್ರೀಕ್ ನಾಟಕಕಾರನಾದ ಸೊಪೋಕ್ಲಸ್‍ನುತನ್ನ ನಾಟಕಗಳಲ್ಲಿ ಮಾನವ ಹಕ್ಕುಗಳ ಬಗ್ಗೆ ಪ್ರಸ್ತಾಪ ಮಾಡಿರುತ್ತಾನೆ. ತದನಂತರಖ್ಯಾತರಾಜಕೀಯ ಚಿಂತಕರುಗಳಾದ ಪ್ಲೆಟೋ, ಅರಿಸ್ಟಾಟಲ್, ಸೆನೆಕಾ, ಸಿಸಿರೋ, ಸೇಂಟ್‍ಆಗಸ್ಟ್ಯನ್, ಸೇಂಟ್‍ಅಕ್ವಿನಾಸ್ ಹಾಗೂ ಆಧುನಿಕಕಾಲದಲ್ಲಿ ಮಾರ್ಟಿನ್ ಲೂಥರ್‍ಕಿಂಗ್, ಡಾ|| ಬಿ. ಆರ್.ಅಂಬೇಡ್ಕರರವರು ಸೇರಿದಂತೆಸಾಕಷ್ಟು ವಿದ್ವಾಂಸರುಕಾಲಕಾಲಕ್ಕೆ ತಮ್ಮ ಸಾಹಿತ್ಯಲೇಖನ ಚಿಂತನೆಗಳ ಮೂಲಕ ಮಾನವ ಹಕ್ಕುಗಳ ಮಹತ್ವ ಅವಶ್ಯಕತೆಗಳ ಕುರಿತುಜನಜಾಗೃತಿಯನ್ನುಂಟುಮಾಡುವ ಪ್ರಯತ್ನ ಪಟ್ಟಿರುತ್ತಾರೆ.
ವಿಷಾದದ ಸಂಗತಿಎಂದರೆ ಇಂದಿಗೂ ಕೂಡಜಗತ್ತಿನೆಲ್ಲೆಡೆ ಪ್ರತಿ ದಿನ ಮಾನವ ಹಕ್ಕುಗಳ ಮಾರಣಹೋಮವಾಗುತ್ತಿರುವುದನ್ನುಕಾಣಬಹುದು.ಅತೀಚಿಕ್ಕ ಮಕ್ಕಳಿಂದ, ಕಡು ಬಡವರಿಂದ ಹಿಡಿದು, ವೃದ್ಧರು, ಪ್ರತಿಷ್ಠಿತಹುದ್ದೆ ಸ್ಥಾನ-ಮಾನಗಳಲ್ಲಿ ಇರುವವರೂಕೂಡಮುಕ್ತವಾಗಿ ಸ್ವತಂತ್ರವಾಗಿ ನೆಮ್ಮದಿಯುತವಾಗಿ ಬದುಕಲುಸಾಧ್ಯವಾಗುತ್ತಿಲ್ಲ. ಪ್ರತಿಯೊಬ್ಬ ಮಾನವನಿಗೂತನ್ನದೇಆದ ವಿಚಾರ, ಭಾವನೆ, ಕನಸು ಆಸೆ-ಆಕಾಂಕ್ಷೆಗಳಿರುತ್ತವೆ. ತನಗಿಷ್ಟವಾದರೀತಿಯಲ್ಲಿ ಬದುಕುವಇಚ್ಛೆಯಿರುತ್ತದೆ. ತನಗೆಯಾವ ಬಗೆಯಆಹಾರ, ವೇಷ, ಭೂಷಣ, ನಡೆ, ನುಡಿ, ವಿವಾಹ, ಕುಟುಂಬ, ಸಂಪ್ರದಾಯ ಹಾಗೂ ಆಚರಣೆಗಳು ಇರಬೇಕೆಂಬುದನ್ನುತಾನೊಬ್ಬನೇಸ್ವತಃ ನಿರ್ಣಯಿಸಬೇಕೆಂದು ಬಯಸುತ್ತಾನೆ. ಆದರೆ, ಈ ಹೊತ್ತುಏನಾಗುತ್ತಿದೆ? ಓರ್ವ ವ್ಯಕ್ತಿಇನ್ನೋರ್ವ ವ್ಯಕ್ತಿಯ ಖಾಸಗಿ ಬದುಕು, ಆಚಾರ, ವಿಚಾರ, ನಂಬಿಕೆಗಳಲ್ಲಿ, ಶ್ರದ್ಧೆಗಳಲ್ಲಿ ಹಸ್ತಕ್ಷೇಪ ಮಾಡುತ್ತಾ ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿರುವುದು ಸಲ್ಲದು.ಇದು ಸಾಮಾಜಿಕ ಸಾಮರಸ್ಯಕ್ಕೆಹಾಗೂ ಸೌಹಾರ್ದತೆಗಳಿಗೆ ಮಾರಕವೆನಿಸುತ್ತಿದೆ.
ಹಲವಾರು ಸಲ ನಮಗೆಲ್ಲರಿಗೂಅನಿಸುವುದೇನೆಂದರೆ, ಮಾನವ ಹಕ್ಕುಗಳ ಹೆಸರಿನಲ್ಲಿ ಸ್ವೇಚ್ಛಾಚಾರತನ, ಬಿಡುಬೀಸಾಗಿ ಮಾತನಾಡುವುದು, ಧರ್ಮಗಳ ಬಗ್ಗೆ, ಆಚರಣೆಗಳ ಬಗ್ಗೆ, ಮಹಾನ್ ಸಂತರುಗಳ ಬಗ್ಗೆ, ರಾಷ್ಟ್ರ ನಾಯಕರುಗಳ ಬಗ್ಗೆ ಕೀಳಾಗಿ ಟೀಕಿಸುವುದು,ಅವಹೇಳನ ಮಾಡುವುದು ವಾಚಾಮಗೋಚರವಾಗಿನಾಲಿಗೆ ಹರಿಬಿಡುವುದು ಸರಿಯೇ? ಎನ್ನುವುದು.ಇದುಪ್ರತಿಯೊಬ್ಬರುಒಪ್ಪುವ ಮಾತು.ನಾವು ನಮ್ಮ ಹಕ್ಕುಗಳನ್ನು ಅನುಭವಿಸುವಾಗ ಇತರ ವ್ಯಕ್ತಿಗಳ ಹಕ್ಕುಗಳ ಉಲ್ಲಂಘನೆಯಾಗದಂತೆಎಚ್ಚರವಹಿಸಬೇಕಾದದ್ದುಅತೀಅವಶ್ಯಕ.“ಮಾನವನನ್ನುವಿವೇಚನೆಯುಳ್ಳ ಪ್ರಾಣಿಎನ್ನುವರು ಹಾಗೂ ಸರಿ ತಪ್ಪುಗಳನ್ನು ಅಳೆಯುವ ಸಾಮಥ್ರ್ಯ ಮಾನವನಿಗೆಇರುವಾಗತನ್ನ ಹಕ್ಕುಗಳನ್ನು ಸರಿಯಾದರೀತಿಯಲ್ಲಿ ಬಳಸಿಕೊಳ್ಳಬೇಕಾದ ಅವಶ್ಯಕತೆಇದೆ.ಕಾರಣ ವ್ಯಕ್ತಿಗತ ಹಾಗೂ ಸಾಮಾಜಿಕಚೌಕಟ್ಟಿನಲ್ಲಿದ್ದುಕೊಂಡುತನ್ನ ಹಕ್ಕುಗಳನ್ನು ಮುಕ್ತವಾಗಿ ಅನುಭವಿಸುವಂತಾಗಲಿ ಹಾಗೂ ಅದೇ ಕಾಲಕ್ಕೆ ಇತರ ವ್ಯಕ್ತಿಗಳ ಹಕ್ಕುಗಳನ್ನು ಗೌರವಿಸುವಂತಾಗಲಿ ಎಂಬುದೇಮನದಾಳದ ಆಶಯ.
