RNI NO. KARKAN/2006/27779|Wednesday, October 15, 2025
You are here: Home » breaking news » ಬೆಳಗಾವಿ:ಅಧಿಕಾರ ಬಿಟ್ಟು ತೋಲಗಿ ಸರಕಾರದ ವಿರುದ್ಧ ಬಿಜೆಪಿ ಹೋರಾಟ : ಬಿ.ಎಸ್.ಯಡಿಯೂರಪ್ಪ

ಬೆಳಗಾವಿ:ಅಧಿಕಾರ ಬಿಟ್ಟು ತೋಲಗಿ ಸರಕಾರದ ವಿರುದ್ಧ ಬಿಜೆಪಿ ಹೋರಾಟ : ಬಿ.ಎಸ್.ಯಡಿಯೂರಪ್ಪ 

ಅಧಿಕಾರ ಬಿಟ್ಟು ತೋಲಗಿ ಸರಕಾರದ ವಿರುದ್ಧ ಬಿಜೆಪಿ ಹೋರಾಟ : ಬಿ.ಎಸ್.ಯಡಿಯೂರಪ್ಪ

ಬೆಳಗಾವಿ ಡಿ 10 : ಸಿ.ಎಂ ಕುಮಾರಸ್ವಾಮಿ ಧೀಮಾಕ್ಕಿನಿಂದ ಮಾತನಾಡುವದನ್ನು ನಿಲ್ಲಿಸಬೇಕು ಎಂದು ಸಿ.ಎಂ ವಿರುದ್ಧ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ

ನಗರದಲ್ಲಿ ಇಂದು ಮಾತನಾಡಿದ ಅವರು, ಸಿಎಂ ನನ್ನ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ತಾವು ಜನಸಾಮಾನ್ಯರಿಗೆ ಸಿಗುವ ಸಿಎಂ ಅಂತೀರಾ. ಆದ್ರೆ ಬೆಂಗಳೂರಿನಲ್ಲಿ ಫೈವ್​ಸ್ಟಾರ್​ ಹೋಟೆಲ್​ನಲ್ಲಿ ರೂಮ್​ ಮಾಡಿಕೊಂಡು ವರ್ಗಾವಣೆ ದಂಧೆ ಮಾಡುತ್ತಿದ್ದೀರಿ. ಉತ್ತರ ಕರ್ನಾಟಕದ ಅಭಿವೃದ್ಧಿಯನ್ನು ನಿರ್ಲಕ್ಷ್ಯಿಸಿದ್ದೀರಿ ಎಂದು ದೂರಿದರು. 
ಅಷ್ಟೆಅಲ್ಲದೆ ಸಾಲ ಮನ್ನಾ ಮಾಡಿ ಅಂದರೆ ಕುಂಟು ನೆಪ ಹೇಳಿ, ಇನ್ನೂರು ಮುನ್ನೂರು ಜನರಿಗೆ ಸಾಲ ಮನ್ನಾ ಸರ್ಟಿಫಿಕೇಟ್ ಕೊಟ್ಟು ಅಧಿವೇಶನಕ್ಕೆ ಬಂದಿದ್ದೀರ. ಸರ್ಕಾರದ ವೈಫಲ್ಯಕ್ಕೆ ಬೇಸತ್ತು ರೈತರು ಇಂದು ಹೋರಾಟಕ್ಕೆ ಆಗಮಿಸಿದ್ದಾರೆ. ‘ಅಧಿಕಾರ ಬಿಟ್ಟು ತೊಲಗಿ’ ಎಂಬ ಹೋರಾಟವನ್ನು ನಾವು ಸರ್ಕಾರದ ವಿರುದ್ಧ ಮಾಡುತ್ತೇವೆ. ರೈತರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಯಡಿಯೂರಪ್ಪ ಹೇಳಿದ್ದಾರೆ

Related posts: